ರಾಜ್ಯ ಸುದ್ದಿಗಳು
ಮಸ್ಕಿ
ನೂತನ ಪುರಸಭೆಯ ಮುಂದಿನ ರಸ್ತೆಗೆ ಒಂದು ನಿರ್ದಿಷ್ಟವಾದ ಹೆಸರು ಇಲ್ಲದ ಕಾರಣ ಪುರಸಭೆಯ ಮುಂದಿನ ರಸ್ತೆಗೆ ಆಡುಭಾಷೆಯಲ್ಲಿ ಪಂಚಾಯಿತಿ ಡಿಬ್ಬಿ ಹಾಗೂ ಪೋಸ್ಟ್ ಆಫೀಸ್ ಹತ್ತಿರ ಸೇರಿ ಇತರೆ ಹೆಸರುಗಳಿಂದ ಕರೆಯುತ್ತಿರುವುದರಿಂದ ಈ ರಸ್ತೆಗೆ ಕರ್ನಾಟಕ ರತ್ನ, ಯುವ ರತ್ನ ,ದಿವಂಗತ ಪುನೀತ್ ರಾಜಕುಮಾರ್ ಸರ್ಕಲ್ ಎಂದು ನಾಮಕರಣ ಮಾಡಬೇಕೆಂದು ಡಾಕ್ಟರ್ ರಾಜಕುಮಾರ್ ಮತ್ತು ದಿ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ್ ಇವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿಮೌನೇಶ್, ದುರ್ಗ ರಾಜ್ ವಟಗಲ್, ನೂರ್ ಮಹಮ್ಮದ್, ಸದ್ದಾಮ್, ದಾವಲ್ ಸಾಬ್, ಜಾಕಿರ್, ಯಮನೂರು ಸಾಬ್, ಮೌಲಾಸಾಬ್, ಬಸವರಾಜ್ ಕೊಠಾರಿ, ಅಂಬರೀಶ್, ಅಶೋಕ, ಅಜ್ಮೀರ್, ಶಾಮಿ ಸಾಬ್ ಸೇರಿದಂತೆ ಇನ್ನಿತರ ಪುನೀತ್ ರಾಜಕುಮಾರ್ ಅಭಿಮಾನಿ ಬಂಧುಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment