ಒಂದು ಗುಂಪಿಗೆ ತುಪ್ಪ ಮತ್ತೊಂದು ಗುಂಪಿಗೆ ಬೆಣ್ಣೆ ಸವರುವ ಕೆಲಸಮಾಡಿದ ಅಧಿಕಾರಿಗಳು 

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ತಾಲೂಕಿನ ಮೆದಿಕಿನಾಳ ಪಂಚಾಯತಿಯಲ್ಲಿ ಗ್ರಾಕುಷ್ ಸಂಘದವರಿಗೆ ಮಾತ್ರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 14 ದಿನದ ಕೆಲಸವನ್ನು ನೀಡಿರುತ್ತಾರೆ. ಇನ್ನುಳಿದಂತೆ ಸಾವಿರದ ಎರಡು ನೂರು ಜನರನ್ನೊಳಗೊಂಡ 15 ಮೇಟಿ ಗಳಿಗೆ 7 ದಿನದ ಕೆಲವನ್ನು ಮಾತ್ರ ನೀಡಿರುತ್ತಾರೆ. ಒಂದು ಸಂಘಕ್ಕೆ ಬಣ್ಣ ಮತ್ತೊಂದು ಬಣಕ್ಕೆ ಸುಣ್ಣವನ್ನು ಎರಚುವ ಕಾರ್ಯವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿ ಸಿಬ್ಬಂದಿ ವರ್ಗದವರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಇಂದಿನ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮುಗಿಯಿಸಿಕೊಂಡು ಎಲ್ಲಾ ಮೇಟಿಗಳೊಂದಿಗೆ 250 ರಿಂದ 300 ಜನ ಕೂಲಿ ಕಾರ್ಮಿಕರು ನೇರವಾಗಿಯೇ ಪಂಚಾಯಿತಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಾರ್ಮಿಕರ ಪರವಾಗಿ ಎಲ್ಲಾ ಮೇಟಿಗಳು ಕೆಲಸ ನೀಡುತ್ತೀರಾ ಇಲ್ವಾ…? ಇಲ್ಲಾ ಧರಣಿ ಮಾಡ್ಬೇಕಾ..? ಎಂದು ನೇರಾ ನೇರ ತರಾಟೆಗೆ ತೆಗೆದುಕೊಂಡರು. ಮಸ್ಕಿಯ ತಾಲೂಕಾ ಪಂಚಾಯತ್ ಅಧಿಕಾರಿಗಳೂ ಮೌಖಿಕವಾಗಿ ಹೇಳಿದರು ಕೆಲಸ ನೀಡಲು ಮೀನಾಮೇಷ ಮಾಡುತ್ತಿರುವ ಮೆದಿಕಿನಾಳ ಗ್ರಾಮ ಪಂಚಾಯತ್ ಅಧಿಕಾರಿಗಳು ಎಂದು ತಮ್ಮ ಅಂತರಾಳದ ಅಳಲನ್ನು ಗ್ರಾ.ಪಂ ಕಾರ್ಯದರ್ಶಿ ಗಳಾದ ಅಮರೇಶ್ ಇವರಲ್ಲಿ ಹೇಳಿಕೊಂಡರು.

ಬಿಒಸಿ ಟ್ರಾಕ್ಟರ್ ಬಿಲ್ ಆಗಿದ್ದರೂ ಸಂಭಂದಿಸಿದ ಮಾಲೀಕರಿಗೆ ಬಿಲ್ ಪಾವತಿ ಮಾಡುತ್ತಿಲ್ಲ. ಕೂಲಿ ಕಾರ್ಮಿಕರಿಗೆ ನೀರಿನ ವ್ಯವಸ್ಥೆ ಮಾಡಿದ ಮಾಲೀಕನಿಗೆ ಬಿಲ್ ಪಾವತಿ ಸಿರುವುದಿಲ್ಲ. ಸಾಮಾನ್ಯ ಕಾರ್ಮಿಕರಿಗೆ ಅಳತೆ ಮಾಡಿ ನೀಡುವ ಕೆಲಸದಂತೆಯೇ ಅಂಗವಿಕಲ ಮತ್ತು ವಯಸ್ಕರಿಗೂ ಕೆಲಸ ನೀಡುತ್ತಿದ್ದಾರೆ. ಹಾಗೆಯೇ 50% ರಿಯಾಯ್ತಿಯನ್ನು ನೀಡುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಕಾರ್ಯದರ್ಶಿಗಳು ಸಂಭಂದಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಉದ್ಯೋಗ ಖಾತ್ರಿಯ ಮೇಟಿಗಳಾದ ನರಸಪ್ಪ ಚಲುವಾದಿ, ಬಸವರಾಜ ಹರಿಜನ, ಶಿವು ಪೂಜಾರಿ, ಸುರೇಶ ಚಲುವಾದಿ, ಕೇಶವರಾಜ್ ಭೋವಿ, ಆದಪ್ಪ ಭೋವಿ, ದಾನಪ್ಪ, ದೊಡ್ದ ಬಸವ ಭೋವಿ, ಹುಚರೆಡ್ಡಿ, ಮೌನೇಶ್, ಮಲ್ಲಿಕಾರ್ಜುನ ಭೋವಿ, ಬಸವರಾಜ ಭೋವಿ, ಮುದಿಯಪ್ಪ ಪರೆಡ್ಡಿ, ವೆಂಕಟೇಶ್ ಭೋವಿ, ಗ್ರಾಮ ಪಂಚಾಯತಿ ಅಧಿಕಾರಿಗಳೂ ಮತ್ತು ಸಿಬ್ಬಂದಿ ಸೇರಿದಂತೆ ಉದ್ಯೋಗ ಖಾತ್ರಿಯ ಕಾರ್ಮಿಕರಿದ್ದರು.

Be the first to comment

Leave a Reply

Your email address will not be published.


*