ಬೈಲಪ್ಪ ಮಾದಿಗರಿಗೆ ನ್ಯಾಯ ಒದಗಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸಹಾಯಕ ಆಯುಕ್ತರಿಗೆ ಮನವಿ

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

 ಜಿಲ್ಲಾ ಸುದ್ದಿಗಳು

ಲಿಂಗಸ್ಗೂರು:

CHETAN KENDULI

ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾಕ್ಟರ್.ಎನ್. ಮೂರ್ತಿ ಸ್ಥಾಪಿತ) ತಾಲೂಕು ಸಮಿತಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ಲಿಂಗಸುಗೂರು ತಾಲೂಕಿನ ಕಿಲ್ಲಾರ್ ಹಟ್ಟಿ ಗ್ರಾಮದಲ್ಲಿ ಮಾದಿಗ ಸಮುದಾಯದ ಬೈಲಪ್ಪ ಎಂಬಾತನ ಮಗಳಾದ ಅಪ್ರಾಪ್ತ ಬಾಲಕಿಯನ್ನು ಒಂದು ವರ್ಷದ ಹಿಂದೆ ಕಿಲಾರಟ್ಟಿ ಕುರುಬರ ಜನಾಂಗದ ಯುವಕ ಲಚಮಪ್ಪ ಈತನು ಅಪಹರಿಸಿದ್ದು, ಆ ಘಟನೆಗೆ ಸಂಬಂಧಿಸಿದಂತೆ ಊರಿನಲ್ಲಿ ಬೈಲಪ್ಪನು ವಿಚಾರಿಸುತ್ತಿರುವಾಗ ಅಲ್ಲಿ ಕುರುಬ ಜನಾಂಗದ ದುರುಗನ ಗೌಡ ಮತ್ತು ಸುರೇಶ್ ಸಹೋದರರು ಹಿಂದಿನ ಘಟನೆಗೆ ಸಂಬಂಧಿಸಿದಂತೆ “ಏ ಮಾದಿಗ ನೀನು ಏನು ಕೇಳ್ತೀ ಹೋಗಲೇ” ಎಂದು ಏಕಾಏಕಿ ಕೆರೆಯೊಳಗೆ ನುಗ್ಗಿ ಮನೆಯ ಒಳಗೆ ಇದ್ದ ಬೈಲಪ್ಪ ನನ್ನು ಎಳೆದೊಯ್ದು ಹಿಗ್ಗಾ ಮುಗ್ಗಾ ಹೊಡೆಯುತ್ತಾ ಅರೆಬೆತ್ತಲೆ ಮಾಡಿ ದರದರ ಎಳೆದುಕೊಂಡು ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಬೈಲಪ್ಪ ನಾನು ನನ್ನ ಮಗಳು ಕಿಡ್ನಾಪ್ ಆಗಿ ಒಂದು ವರ್ಷ ಆಯಿತು ದುಃಖದಲ್ಲಿರುವಾಗ ಮತ್ತೆ ಇತರ ದುರಂತ ಘಟನೆ ನಡೆಯುವುದಕ್ಕೆ ಪೊಲೀಸ್ ಇಲಾಖೆಯೇ ಕಾರಣ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಈ ಹಿಂದಿನ ಘಟನೆ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಒಂದು ವರ್ಷವಾದರೂ ಆರೋಪಿಗಳನ್ನು ಬಂಧಿಸದೆ ನಿಷ್ಕಾಳಜಿ ವಹಿಸಿದ ಮುದುಗಲ್ ಪೊಲೀಸ್ ಠಾಣೆಯ ಪಿಎಸ್ಐ ಆದ ಶ್ರೀ ಡಾಕೇಶ್ ಇವರು ಮೂಲ ಘಟನೆಗೆ ಮತ್ತು ಈಗಿನ ದುರಂತದ ಘಟನೆಗೆ ಕಾರಣವಾಗಿದ್ದಾರೆ. ಕೂಡಲೇ ಇವರನ್ನು ಅಮಾನತುಗೊಳಿಸಬೇಕು. ಈ ಘಟನೆ ನಡೆದು ಮೂರು-ನಾಲ್ಕು ದಿನವಾದರೂ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ. ಕಿಲ್ಲಾರಹಟ್ಟಿ ಗ್ರಾಮದ ಮಾದಿಗ ಜನಾಂಗಕ್ಕೆ ಕೂಡಲೇ ರಕ್ಷಣೆ ನೀಡಬೇಕು, ಬೈಲಪ್ಪ ಕುಟುಂಬಕ್ಕೆ ಸರಕಾರದಿಂದ 20 ಲಕ್ಷ ಪರಿಹಾರ ನೀಡಬೇಕು ಹಾಗೂ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಬಂಧಿಸದಿದ್ದರೆ ರಾಜ್ಯದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ನೀಡಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಯಲ್ಲಾಲಿಂಗ ಕುಣಿಕೆಲ್ಲೂರ್ ತಾಲೂಕ ಅಧ್ಯಕ್ಷರು ಮಸ್ಕಿ, ಅನಿಲ್ ಕುಮಾರ್ ಮುದಬಾಳ ತಾಲೂಕ ಉಪಾಧ್ಯಕ್ಷರು ಮಸ್ಕಿ, ಮರಿಸ್ವಾಮಿ ಮುದಬಾಳ ಪ್ರಧಾನ ಕಾರ್ಯದರ್ಶಿ, ಶರಣಬಸವ ಬೇಡರ ಕಾರಲಕುಂಟೆ, ಚನ್ನಬಸವ ಬಿ.ಕೆ, ಸುಭಾಷ್ ಕಡಬೂರು ಹೊ. ಘ. ಅ. ಹಾಲಪೂರು, ಶರಣಬಸವ ತೆರೆಬಾವಿ ಎಮ್. ಆರ್. ಎಚ್.ಎಸ್ ಮಸ್ಕಿ ಸಮಿತಿ,ಮೌನೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*