ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ಕಾನೂನು ಬಾಹಿರ ; ಮೂರು ತಲೆಮಾರಿನ ದಾಖಲೆ ಹಾಗೂ ಅಪೂರ್ಣ ಸಮಿತಿ ವಿಚಾರಣೆಗೆ ತೀವ್ರ ಆಕ್ಷೇಪ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಕಾರವಾರ

ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿ ಮತ್ತು ವೈಯಕ್ತಿಕ ಮೂರು ತಲೆಮಾರಿನ ದಾಖಲೆಗಳ ಅಗ್ರಹಿಸುವಿಕೆಗೆ ಜಿಲ್ಲಾಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣ ಕಾನೂನು ಬಾಹಿರ ಮಂಜೂರಿ ಪ್ರಕ್ರೀಯೆ ಸ್ಥಗಿತಗೊಳಿಸಲು ಅಗ್ರಹಿಸಲಾಯಿತು.ಇಂದು ಕಾರವಾರದ ಜಿಲ್ಲಾಧಿಕಾರಿ ಮುಲ್ಲೆöÊ ಮುಹಿಲನ್ ಅವರಿಗೆ ಜಿಲ್ಲಾ ಅರಣ್ಯ ಭೂಮಿಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಮನವಿ ನೀಡಿಮೇಲಿನಂತೆ ಅಗ್ರಹಿಸಲಾಯಿತು.

CHETAN KENDULI

ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿ ಹಾಗೂಮೂರು ತಲೇಮಾರಿನ ಪೂರ್ವದಿಂದ ದೃಢೀಕೃತ ಮತ್ತು ವಾಸಮಾಡುವ ಭೂಮಿಯ ಕಬ್ಜಾ ಹೊಂದಿರುವ ವೈಯಕ್ತಿಕ ದಾಖಲೆ ಹಾಜರುಪಡಿಸಲು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನು ಮತ್ತು ಸರಕಾರದ ಆದೇಶದಲ್ಲಿ ಉಪವಿಭಾಗ ಸಮಿತಿ ಅರಣ್ಯ ಅತೀಕ್ರಮಣದಾರರಿಗೆ ವಿಚಾರಣೆ ನೋಟೀಸ್ ನೀಡುತ್ತಿರುವುದು ಆಕ್ಷೇಪನಾರ್ಹ ಕಾರ್ಯವಾಗಿದೆ. ತಕ್ಷಣ ಕಾನೂನು ಬಾಹಿರ ಅರಣ್ಯ ಅತೀಕ್ರಮಣದಾರರ ಪುನರ್ ಪರಿಶೀಲನೆ ಅರ್ಜಿ ಸ್ಥಗಿತಗೊಳಿಸಬೇಕೆಂದು ಚರ್ಚೆಯಲ್ಲಿನಿಯೋಗವು ಪ್ರಸ್ತಾಪಿಸಿತು.

ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಮಂಜೂರಿಗೆ ಸಂಬoಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವದು ಸರಿಯಿಲ್ಲ. ಅಲ್ಲದೇ, ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು 3 ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ಜಿಲ್ಲಾಡಳಿತ ನಿರ್ಲಕ್ಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸದ್ರಿ ಆದೇಶವನ್ನು ಪರಿಗಣಿಸತಕ್ಕದೆಂದು ಚರ್ಚೆಯಲ್ಲಿಜಿಲ್ಲಾಧಿಕಾರಿಗಳಿಗೆಉಲ್ಲೇಖಿಸಲಾಯಿತು.ಕುಮಟ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗಿನಕೇರಿ, ಶಾಂತಾತಿಮ್ಮಣ್ಣ ಕುಣಬಿ ಹರೂರ, ಇಜಾಜ್ ಎ ಶೇಖ್ ಮಲ್ಲಾಪುರ, ರೋಹಿದಾಸ ವೆಂಗಣಕರ್ ಕಾರವಾರ ಮುಂತಾದವರು ನಿಯೋಗದಲ್ಲಿ ಇದ್ದರು.

ಸದಸ್ಯರಿಲ್ಲದೇ, ಮಂಜೂರಿ ಪ್ರಕ್ರೀಯೆ :ಕಾನೂನಿನ ಸಮಿತಿಯಲ್ಲಿ ಮೂರು ನಾಮನಿರ್ಧೇಶನ ಸದಸ್ಯರನ್ನ ಒಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶವನ್ನ ಪರಿಗಣನೆಗೆ ತೆಗೆದುಕೊಳ್ಳದೇ, ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿತಿಯಲ್ಲಿ ಅರ್ಜಿಗಳನ್ನ ಪುನರ್ ಪರಿಶೀಲಿಸುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕ ಹಿತಾಶಕ್ತಿ ಅರ್ಜಿ:ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿದಾನ ಅನುಸರಿಸದೇ ಅರ್ಜಿ ವಿಲೇವಾರಿ ಮಾಡುವ ಕ್ರಮಕ್ಕೆ ಹೋರಾಟಗಾರರ ವೇದಿಕೆಯು ಸಲ್ಲಿಸಿದ ಆಕ್ಷೇಪಕ್ಕೆ ಮಾನ್ಯತೆ ದೊರಕದಿದ್ದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಲಾಗುವುದೆಂದು ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Be the first to comment

Leave a Reply

Your email address will not be published.


*