ಪ್ರತಿ ಹಳ್ಳಿ ಮಟ್ಟಕ್ಕೂ ಪಸರಿಸುವುದೇ ಸಂಘಟನೆಯ ಗುರಿ..! ||ಅ.24ರಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ 6ನೇ ವಾರ್ಷಿಕೋತ್ಸವ|| 

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ಪ್ರತಿ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಸೇರಿದಂತೆ ಹಳ್ಳಿಗಳ ಮಟ್ಟಕ್ಕೂ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸಂಘಟನೆಯನ್ನು ಪರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು ತಿಳಿಸಿದರು.

ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ದೇವನಹಳ್ಳಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಸಿ.ಮುನಿಯಪ್ಪ ಅವರ ಅಕಾಲಿಕ ಮರಣಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಿ.ಮುನಿಯಪ್ಪ ನವರು ಸಾಮಾಜಿಕ ಕಳಕಳಿ ವ್ಯಕ್ತಿತ್ವವುಳ್ಳವರು, ಒಡನಾಡಿಗಳು ಆಗಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ನೋವನ್ನುಂಟು ಮಾಡಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲು ಸಂತಾಪ ಸೂಚಿಸಲಾಗಿದೆ. ಅ.14,2015ರಂದು ಸಂಘಟನೆಯು ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದ ವಸಂತನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಿತ್ರದುರ್ಗದ ಮಾದಾರ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾದ ಸಂಘಟನೆಯು 6 ವರ್ಷಗಳ ವಸಂತ ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇದರ ಸವಿ ನೆನೆಪಿಗಾಗಿ ಅ.24, 2021ರಂದು ಭಾನುವಾರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಸಂತೆ ಮೈದಾನದಲ್ಲಿ ೬ನೇ ವರ್ಷದ ವಾರ್ಷಿಕೋತ್ಸವವನ್ನು ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಕಾನೂನಿನಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

೬ನೇ ವಾರ್ಷಿಕೋತ್ಸವಕ್ಕೆ ಕ್ಯಾಲಸಂದ್ರದಿಂದ ಬೈಕ್ ರ್‍ಯಾಲಿಯ ಮೂಲಕ ಬೆಳ್ಳಿ ರಥದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಯನ್ನಿಟ್ಟುಕೊಂಡು ಸೂಲಿಬೆಲೆಗೆ ಆಗಮಿಸಲು ತೀರ್ಮಾನಿಸಲಾಗಿದೆ. ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸಂಘಟನೆ ನೊಂದವರ ಪರ, ದಲಿತರ ಪರ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ವಿದ್ಯಾವಂತರನ್ನು ಒಳಗೊಂಡಿರುವ ಸಂಘಟನೆ ಆಗಿದೆ. ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದ್ದು, ಸಂಘಟನೆಯು ಪ್ರತಿ ಹಂತದಲ್ಲಿ ಬಲಿಷ್ಠಗೊಳಿಸಲು ಶ್ರಮವಹಿಸಲಾಗುತ್ತಿದೆ. ಸರಕಾರದ ಸೌಲಭ್ಯ ತಲುಪಿಸುವ ಮೂಲ ಉದ್ದೇಶ ಮತ್ತು ಗ್ರಾಮೀಣ ಭಾಗದ ಪ್ರತಿ ಹಳ್ಳಿಗೆ ಸಂಘಟನೆ ಮೂಲಕ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 

ಈ ವೇಳೆಯಲ್ಲಿ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಮುನಿಭೈರಪ್ಪ, ಉಪಾಧ್ಯಕ್ಷ ಕ್ಯಾಲಸನಹಳ್ಳಿ ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಂ.ಪಿ.ನಾಗೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಮುರಳಿಧರ್‌ಗೌಡ, ಉಪಾಧ್ಯಕ್ಷ ಕೊತ್ತನೂರು ಕೋದಂಡರಾಮು, ಬ್ಯಾಟರಾಯನಪುರ ವಿಧಾನಸಭಾ ಅಧ್ಯಕ್ಷ ಎನ್.ರವಿಚಂದ್ರ, ಜೈಭೀಮ್ ದಲಿತ ಭೂರಕ್ಷಣಾ ವೇದಿಕೆ ಖಜಾಂಚಿ ಕೆ.ಪಿ.ಕೃಷ್ಣಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಡಿ.ಕೆ.ಮಹೇಂದ್ರಕುಮಾರ್, ಕಾರ್ಯದರ್ಶಿ ಶಾಂತಮೂರ್ತಿ, ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*