ಜಿಲ್ಲಾ ಸುದ್ದಿಗಳು
ಹೊನ್ನಾವರ
ಬೋಟ್ ಅಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ದಿನಾಂಕ14-08-2021 ರಂದು ಅರಬ್ಬೀ ಸಮುದ್ರದಲ್ಲಿರುವ ಬಸವರಾಜ ದುರ್ಗದ ಸಮೀಪ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ಒಳಗಿಂದ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಲ್ಲಬ್ಬೆ ಕಂದವಳ್ಳಿಯ ಗೋಪಾಲ ಗೌಡ (32) ಎಂಬಾತನ ಶವ ಇಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಗೋಪಾಲ ಗೌಡ ಮೀನುಗಾರಿಕೆಗೆ ತೆರಳಿದ್ದಾಗ ಅಗಷ್ಟ್ 14 ರ ಸಂಜೆ 7-30 ರ ಸುಮಾರಿಗೆ ಕಾಲು ಜಾರಿ ಬಿದ್ದು ಕಾಣೆಯಾದ ಬಗ್ಗೆ, ಗೋಪಾಲ ಗೌಡನ ಬಾವ ಚಂದ್ರಶೇಖರ ರಾಮ ಗೌಡ ಎಂಬವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಸವರಾಜ ದುರ್ಗಾ ಬಳಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಗೋಪಾಲ ಗೌಡನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಕುಮಟಾ ಹೆಡ್ ಬಂದರ್ ಬೀಚ್ ಬಳಿ ಈತನ ಶವ ಪತ್ತೆಯಾಗಿದೆ. ಈತನಿಗೆ 5 ವರ್ಷದ ಹಿಂದೆ ಕೈ ಹಿಡಿದ ಮಡದಿ, 2 ವರ್ಷ ವಯಸ್ಸಿನ ಮಗಳು,ವಯಸ್ಸಾದ ತಂದೆ ತಾಯಿ ಇದ್ದು ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
Be the first to comment