ಭಟ್ಕಳ ನಾಯಕ್‌ ಹೆಲ್ತ್‌ ಸೆಂಟರ್‌ ನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ತಾಲೂಕಾ ಭಾರತ ವಿಕಾಸ ಪರಿಷತ್‌, ನಾಯಕ್‌ ಹೆಲ್ತ್‌ ಸೆಂಟರ್ ಹಾಗೂ ಅಮಿತಾಕ್ಷಾ ಯೋಗ ಟ್ರಸ್ಟ್‌ ಇವರ ಸಹಭಾಗಿತ್ವದಲ್ಲಿ ದಿನಾಂಕ 19/8/2021 ಗುರುವಾರ ದಂದು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

CHETAN KENDULI

ತಾಲೂಕಿನ ಸಾಗರ ರಸ್ತೆಯಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಮಿತಾ ಆಸ್ಪತ್ರೆ ಈಗ ಡಾ. ವಿಶ್ವನಾಥ ನಾಯಕ ಹಾಗೂ ವಿನಿತಾ ನಾಯಕ ಅವರ ಸಾರತ್ಯದಲ್ಲಿ ನಾಯಕ್‌ ಹೆಲ್ತ್‌ ಸೆಂಟರ್‌ ಎಂದು ಮರು ನಾಮಕರಣಗೊಂಡು ಅಗಸ್ಟ್‌ 15 ರಂದು ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ತೆರೆದುಕೊಂಡಿದೆ. ಇಲ್ಲಿ ದಿನಾಂಕ 19/8/2021 ರಂದು ಸಾರ್ವಜನಿಕರಿಗಾಗಿ ಭಾರತ ವಿಕಾಸ ಪರಿಷತ್‌ ಭಟ್ಕಳ ನಾಯಕ್‌ ಹೆಲ್ತ್‌ ಸೆಂಟರ್‌ ಹಾಗೂ ಅಮಿತಾಕ್ಷಾ ಯೋಗ ಟ್ರಸ್ಟ್‌ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,ಈ ಸಂದರ್ಭದಲ್ಲಿ ಎಲ್ಲಾ ತರದ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ಆರೋಗ್ಯ ತಪಾಸಣೆಯಲ್ಲಿ ಡಾ. ಪಾಂಡುರಂಗ ನಾಯಕ, ಡಾ. ವಿಶ್ವನಾಥ ನಾಯಕ, ವಿನಿತಾ ನಾಯಕ, ಡಾ. ಶಿವಕುಮಾರ ಅವರು ಲಭ್ಯವಿರುತ್ತಾರೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಕೇಳಿಕೊಂಡಿದ್ದಾರೆ.

ಈ ಬಗ್ಗೆ ನಾಯಕ್‌ ಹೆಲ್ತ್‌ ಸೆಂಟರಿನ ಡಾ. ವಿಶ್ವನಾಥ ನಾಯಕ ಅವರು ಮಾತನಾಡಿ ನಾವು ಭಟ್ಕಳ ತಾಲೂಕಿನ ಸಾಗರ ರಸ್ತೆಯಲ್ಲಿ ನಾಯಕ್‌ ಹೆಲ್ತ್‌ ಸೆಂಟರ ಎನ್ನುವ ಸುಸಜ್ಜಿತ ಆಸ್ಪತ್ರೆಯೊಂದನ್ನು ತೆರೆದಿದ್ದು, ನಮ್ಮ ಉದ್ದೇಶ ಭಟ್ಕಳ ತಾಲೂಕಿನ ಸಾಋವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ. ನಮ್ಮ ಹೆಲ್ತ್‌ ಸೆಂಟರಿನಲ್ಲಿ ಸಾರ್ವಜನಿಕರಿಗೆ ಮಲ್ಟಿ ಸ್ಪೆಶಾಲಿಟಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿರುತ್ತೇವೆ. ಸಾರ್ವಜನಿಕರು ಕೂಡಾ ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ.

ಇದೇ ಸಂದರ್ಭದಲ್ಲಿ ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ನಮ್ಮ ಕರಾವಳಿ ಸಮಾಚಾರದೊಂದಿಗೆ ಮಾತನಾಡಿ ದಿನಾಂಕ 19/8/2021 ರಂದು ಭಾರತ್‌ ವಿಕಾಸ ಪರಿಷತ್‌ ಹಾಗೂ ಅಮಿತಾಕ್ಷಾ ಯೋಗ ಟ್ರಸ್ಟ್‌ ಮತ್ತು ನಮ್ಮ ನಾಯಕ ಹೆಲ್ತ್‌ ಸೆಂಟರಿನ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ನಾಯಕ್‌ ಹೆಲ್ತ್‌ ಸೆಂಟರಿನಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.

Be the first to comment

Leave a Reply

Your email address will not be published.


*