ಬಿ.ಜೆ.ಪಿ ಬೂತ ಅಧ್ಯಕ್ಷರ ಸಮಾವೇಶ ಉದ್ಘಾಟಿಸಿದ ಶಾಸಕ ಸುನೀಲ್ ನಾಯ್ಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ- ಶನಿವಾರ ಬಿಜೆಪಿ ಭಟ್ಕಳ ಮಂಡಲದ ಬೂತ್ ಅಧ್ಯಕ್ಷರ ಸಮಾವೇಶ ಕಾರ್ಯಕ್ರಮವನ್ನು ನಗರದ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಸುನಿಲ್ ಬಿ.ನಾಯ್ಕ ರವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಶ್ರೇಯಾ ಸಚಿನ್ ಮಹಾಲೆಯವರು ವಂದೇ
ಮಾತರಂ ಗೀತೆಯನ್ನು ಹಾಡಿದರು. ಮಂಡಲದ ಅಧ್ಯಕ್ಷರಾದ ಶ್ರೀ ಸುಬ್ರಾಯ ದೇವಾಡಿಗ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಆನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕ ಅವರು ಮಾತನಾಡಿ, ಬೂತ್ ಅಧ್ಯಕ್ಷರು ಪಕ್ಷದ ಜೀವಾಳು ಎಂದರಲ್ಲದೆ, ಪಕ್ಷಕ್ಕಾಗಿ ದುಡಿಯುವ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೂತ್ ಮಟ್ಟದಲ್ಲಿ ಕೆಲ ಭಿನ್ನಾಭಿಪ್ರಾಯಗಳು ಇದ್ದರೂ ಸಹ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.

CHETAN KENDULI

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗೋವಿಂದ ನಾಯ್ಕ ಅವರು ಮಾತನಾಡಿ ಬೂತ್ ಅಧ್ಯಕ್ಷರ ಯಾದಿ ಪಡೆದುಕೊಂಡು, ಪಕ್ಷದ ಕಾರ್ಯಚಟುವಟಿಕೆಗಳು ಮೊದಲು ಬೂತ್ ಅಧ್ಯಕ್ಷರ ಗಮನಕ್ಕೆ ಬರಬೇಕು ಎಂದು ಸಲಹೆ ನೀಡಿದರು. ಇನ್ನೊರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಚಂದ್ರು ಎಸಳೆ ಅವರು ಮಾತನಾಡಿ, ಬೂತ್ ಅಧ್ಯಕ್ಷರ ಕಾರ್ಯವೈಕರಿ, ಪಕ್ಷದ ಜನಪರ ಯೋಜನೆಗಳು ಜನಸಾಮಾನ್ಯರನ್ನು ತಲುಪಿಸುವಲ್ಲಿ ಬೂತ್ ಅಧ್ಯಕ್ಷರ ಪಾತ್ರ ಇವುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯಕ ಅವರು ಮಾತನಾಡಿ, ಪಕ್ಷ ಬೆಳೆದು ಬಂದ ದಾರಿ, ಅದರಲ್ಲಿ ಬೂತ್ ಅಧ್ಯಕ್ಷರ ಪಾತ್ರ, ಮುಂದೆ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.

 

ನಂತರ ಉಪಸ್ಥಿತರಿದ್ದ ಎಲ್ಲ ಬೂತ್ ಸಮಿತಿಯ ಅಧ್ಯಕ್ಷರಿಗೆ ನಾಮಫಲಕವನ್ನು ವಿತರಣೆ ಮಾಡಲಾಯಿತು ವೇದಿಕೆಯಲ್ಲಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಶ್ರೀ ರವಿ ನಾಯ್ಕ ಜಾಲಿ, ಮಂಡಲದ ಪ್ರಭಾರಿ ಗಳಾದ ಶ್ರೀ ಪ್ರಶಾಂತ್ ನಾಯ್ಕ, ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ಶಿವಾನಿ ಶಾಂತರಾಮ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಶ್ರೀ ನವೀನ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಜೇಶ್ ನಾಯ್ಕ, ಮಂಡಲದ ಪದಾಧಿಕಾರಿಗಳು, ಮಂಡಲದ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಪ್ರಭಾರಿಗಳು, ಜಿಲ್ಲಾ ಮತ್ತು ಮಂಡಲದ ಪ್ರಕೋಷ್ಠ ಸಂಚಾಲಕರು ಮತ್ತು ಸಹಸಂಚಾಲಕರು, ಮಂಡಲದ ಮೋರ್ಚಾ ಅಧ್ಯಕ್ಷರುಮತ್ತುಪ್ರಧಾನಕಾರ್ಯದರ್ಶಿಗಳು,ಮಂಡಲದ ಮಹಾಶಕ್ತಿಕೇಂದ್ರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು,ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು, ಮಹಿಳಾ ಮೋರ್ಚಾ ಪ್ರಮುಖರು ಹಾಜರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ನಾಯ್ಕ ಅವರು ಸರ್ವರನ್ನೂ ವಂದಿಸಿದರು. ಶ್ರೀ ಭಾಸ್ಕರ್ ದೈಮನೆ ಅವರು ಕಾರ್ಯಕ್ರಮ ನಿರೂಪಿಸಿದರು.

Be the first to comment

Leave a Reply

Your email address will not be published.


*