ರಾಜ್ಯ ಸುದ್ದಿಗಳು
ದೇವನಹಳ್ಳಿ
ಯಾವುದೇ ಧರ್ಮ ಭೇದವಿಲ್ಲದೆ ನಡೆಯುವ ಏಕೈಕ ಪುಣ್ಯಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾನಿರ್ದೇಶಕಿಅಕ್ಷತಾರೈತಿಳಿಸಿದರು.ದೇವನಹಳ್ಳಿ ಪಟ್ಟಣದ ಬೈಚಾಪುರ ರಸ್ತೆಯ ೨ನೇ ವಾರ್ಡಿಲ್ಲಿರುವ ಸಾಯಿರಾಂ ಎಂಟರ್ ಪ್ರೈಸಸ್ ಕಟ್ಟಡದ ಮೇಲ್ಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯ ಭಾಗವಾಗಿ ನೂತನ ಶ್ರೀ ಮಂಜುನಾಥೇಶ್ವರ ಸೇವಾ ಟ್ರಸ್ಟ್ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಧರ್ಮಸ್ಥಳವು ಪುಣ್ಯ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರದ ಭಾಗವಾಗಿ ಸುಮಾರು ನಾಲ್ಕೈದು ವರ್ಷಗಳಿಂದ ಶ್ರೀ ಮಂಜುನಾಥೇಶ್ವರ ಸೇವಾ ಟ್ರಸ್ಟ್ ಎನ್ನುವಂತಹದ್ದು ನರಸಿಂಹರಾಜು ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವರಾತ್ರಿ, ಲಕ್ಷದೀಪೋತ್ಸವ ಸಂದರ್ಭದಲ್ಲಿ, ಧರ್ಮಸ್ಥಳ ಸನ್ನಿಧಾನಕ್ಕೆ ಆಗಾಗ ರೇಷನ್, ತರಕಾರಿ ಕಳುಹಿಸಿಕೊಡುವುದು ಹೀಗೆ ಹಲವಾರು ಸೇವಾ ಕಾರ್ಯಗಳನ್ನು ಈ ಟ್ರಸ್ಟ್‌ನಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ಹಿಂದೆ ಈ ಟ್ರಸ್ಟ್ ವಿಶ್ವನಾಥಪುರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ದೇವನಹಳ್ಳಿ ಪಟ್ಟಣದಲ್ಲಿ ಸೇವಾ ಕೇಂದ್ರವನ್ನು ನೂತನವಾಗಿ ಮಾಡಲಾಗಿದೆ. ಯಾವುದೇ ರೀತಿಯ ಲೋಪದೋಷಗಳು ಆಗದಂತೆ, ಎಲ್ಲಾ ರೀತಿಯಲ್ಲಿ ಟ್ರಸ್ಟ್‌ಅನ್ನು ಉತ್ತಮವಾಗಿ ಮುಂದುವರೆಸಿಕೊಂಡು ಹೋಗುವಂತಾಗಲಿ ಎಂದು ಶುಭ ಹಾರೈಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಬಹಳ ಹೆಮ್ಮೆಯ ವಿಚಾರವೆಂದರೆ, ಒಂದು ಚಿನ್ನಾರಿಮುತ್ತ ಕಥೆ ನೆನಪಾಗುತ್ತದೆ. ಒಂದು ಟ್ರಸ್ಟ್ ನಡೆಸುವುದೆಂದರೆ ಸಣ್ಣ ವಿಚಾರವಲ್ಲ. ಹೇಗಿದ್ದ ಹೇಗಾದ ಎಂಬುವುದೆಂದರೆ, ನರಸಿಂಹರಾಜು ಅವರ ಸೇವೆ ಯಾವ ಮಟ್ಟದಲ್ಲಿದೆ ಎಂಬುವುದು ತಿಳಿಯಬೇಕಾಗುತ್ತದೆ. ಬಹಳಷ್ಟು ಮದ್ಯಕ್ಕೆ ದಾಸರಾಗಿದ್ದ ಇವರು ಇದೀಗ ಸೇವಾ ಮನೋಭಾವದಿಂದ ಎಲ್ಲವನ್ನು ತೊರೆದು ಸುಮಾರು ೮ ವರ್ಷಗಳ ಕಾಲ ಸತತವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರೆ ಅದು ಶ್ರೀ ಮಂಜುನಾಥ ಸ್ವಾಮಿಯೇ ಕಾರಣಭೂತ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಒಂದು ಪುಣ್ಯದ ಸನ್ನಿದಾನವಾಗಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಗಳು ಜನಪರವಾಗಿ, ಸಾಮಾಜಿಕ ಕಳಕಳಿಯಿಂದ ನಡೆದುಕೊಂಡು ಬರುತ್ತಿದೆ. ಸೇವೆ ನಿರಂತರವಾಗಿರಲು ಟ್ರಸ್ಟ್‌ನ ಕಚೇರಿಯನ್ನು ದೇವನಹಳ್ಳಿಯಲ್ಲಿ ನರಸಿಂಹರಾಜು ಅವರು ಮಾಡುತ್ತಿರುವುದು ಶ್ಲಾಘನೀಯವಾದದ್ದು, ಹೀಗೆ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಇನ್ನೂ ಉದ್ಘಾಟನಾ ಕಾರ್ಯಕ್ರಮದ ಮುಂಚಿತವಾಗಿ ಕಚೇರಿ ಉದ್ಘಾಟಿಸಿ, ಪೂಜೆ ಸಲ್ಲಿಸಲಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ನಂತರ ಶ್ರೀ ಮಂಜುನಾಥೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ನರಸಿಂಹರಾಜು ಅವರನ್ನು ಸನ್ಮಾನಿಸಲಾಯಿತು. ನಂತರ ಸಹೋದರ-ಸಹೋದರಿಯರ ಹಬ್ಬವಾಗಿರುವ ರಾಖಿ ಹಬ್ಬದ ಪ್ರಯುಕ್ತ ಆಗಮಿಸಿದ ಗಣ್ಯರಿಗೆ ಮಹಿಳೆಯರು ರಾಖಿ ಕಟ್ಟುವುದರ ಮೂಲಕ ಗಮನಸೆಳೆದರು.ಈ ವೇಳೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸದಸ್ಯ ವಿಜಯಪುರ ಬಲಮುರಿ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ, ಜಿಲ್ಲಾ ಕಸಾಪ ಅಭ್ಯರ್ಥಿ ಬಿ.ಎನ್.ಕೃಷ್ಣಪ್ಪ, ಜಯರಾಮ್, ಕೋಶಾಧ್ಯಕ್ಷ ಅಶ್ವತ್ಥ್‌ಗೌಡ, ವಕೀಲ ಮನೋಜ್, ಮುಖಂಡ ವಸಂತ್‌ಕುಮಾರ್, ಶೈಲಾ, ಅನಿತಾ, ಪದಾಧಿಕಾರಿಗಳು ಇದ್ದರು.
Be the first to comment