ರಾಜ್ಯ ಸುದ್ದಿಗಳು
ದೇವನಹಳ್ಳಿ
ತರು ಎರೆಹುಳು ಗೊಬ್ಬರ ತಯಾರಿಸುವುದನ್ನು ಉತ್ತೇಜಿಸುವ ದೃಷ್ಠಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿಯಲ್ಲಿ ರೈತ ಬಂಧು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವನಹಳ್ಳಿ ತಾಪಂ ಇಒ ಎಚ್.ಡಿ.ವಸಂತ್‌ಕುಮಾರ್ ತಿಳಿಸಿದರು.ಆ.15 ರಿಂದ ಅ.15ರ ತನಕ ಎರಡು ತಿಂಗಳುಗಳ ಕಾಲ ತಾಲೂಕಿನ 24 ಗ್ರಾಪಂಗಳಲ್ಲಿಯೂ ಅಭಿಯಾನವನ್ನು ಕೃಷಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದೆ. ಗ್ರಾಪಂವೊಂದರಲ್ಲಿ 25 ಎರೆಹುಳು ತೊಟ್ಟಿಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಸಣ್ಣ ಮತ್ತು ಅತೀ ಸಣ್ಣ ರೈತರು, ಎಸ್‌ಸಿ/ಎಸ್‌ಟಿ ಪಂಗಡದವರು, ಅಲೆಮಾರಿ ಜನಾಂಗದವರು, ಸ್ತ್ರೀ ಪ್ರಧಾನ ಕುಟುಂಬಗಳು, ಬಿಪಿಎಲ್ ಕುಟುಂಬಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳು ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಸಾವಯವ ಕೃಷಿಗೆ ಉತ್ತೇಜನ: ಸಾವಯವ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಈ ಅಭಿಯಾನವನ್ನು ಜಿಪಂ ಹಮ್ಮಿಕೊಂಡಿದ್ದು, ತ್ಯಾಜ್ಯ ವಸ್ತುಗಳ ಸದ್ಭಳಕೆ, ಪರಿಸರ ಸ್ವಚ್ಛತೆ ಸೃಷ್ಠಿಸಲು ಅನುಕೂಲವಾಗುವಂತೆ ಮತ್ತು ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಉದ್ಯಮಶೀಲತೆಯ ಅವಕಾಶಗಳ ಬಗಗೆ ಪೂರಕ ಮಾಹಿತಿಯನ್ನು ಗ್ರಾಪಂ ಮಟ್ಟದಲ್ಲಿ ನೀಡಿ ರೈತರನ್ನು ಮತ್ತು ಮಹಿಳಾಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಾಹಿಸಲಾಗುತ್ತದೆ ಎಂದರು.ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೂ.27ಸಾವಿರ ಸಹಾಯಧನವನ್ನು ಜಿಪಂ ನೀಡಲಿದ್ದು, ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರವನ್ನು ಮನೆಯಲ್ಲಿಯೇ ನಿರ್ಮಿಸಿಕೊಂಡು ಕೃಷಿಯಲ್ಲಿ ಮಣ್ಣಿನ ಫಲವತ್ತತೆಗೆ ಅನುಕೂಲವಾಗಲಿದೆ. ದೇವನಹಳ್ಳಿ ತಾಲೂಕಿನ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಗ್ರಾಪಂ ಕಚೇರಿಗಳಲ್ಲಿ ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಹೆಚ್ಚಿನ ಮಾಹಿತಿಗಾಗಿ ಗ್ರಾಪಂ ಮತ್ತು ಕೃಷಿ ಇಲಾಖೆಗೆ ಸಂಪರ್ಕಿಸಬಹುದು.
Be the first to comment