ಶಿರಸಿ ಹಿಂದುಳಿದ ಆಯೋಗದ ಭೇಟಿ ; ಕುಂಬ್ರಿ ಮರಾಠಿ ಜಾತಿ ರಾಜಕೀಯ ಮೀಸಲಾತಿಗೆ ಶಿಫಾರಸ್ಸು.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ

ಶೈಕ್ಷಣಿಕ ಮೀಸಲಾತಿ ಪಡೆದುಕೊಂಡಿರುವ ಕುಂಬ್ರಿ ಮರಾಠಿ ಜಾತಿಯು ರಾಜಕೀಯ ಮೀಸಲಾತಿಗೆ ಅರ್ಹವಾಗಿದ್ದು ತಕ್ಷಣ ಸಂಬAಧಿಸಿದ ಇಲಾಖೆಗೆ ಕುಂಬ್ರಿ ಮರಾಠಿ ಜಾತಿಯನ್ನು ರಾಜಕೀಯ ಮೀಸಲಾತಿಗೆ ನೀಡಲು ಶೀಫಾರಸ್ಸು ಮಾಡಲಾಗುವುದೆಂದು ರಾಜ್ಯ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆಯವರು ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಮುದ್ಗಾನ್ ಅವರ ಉಪಸ್ಥಿತಿಯಲ್ಲಿ ಆಯೋಗದ ಸದಸ್ಯರಾದ ಬಿ. ಎಸ್ ರಾಜಶೇಖರ್, ಹೆಚ್.ಎಸ್ ಕಲ್ಯಾಣ ಕುಮಾರ, ಶಾರದಾ ನಾಯ್ಕ, ಅರುಣ ಕುಮಾರ, ಕೆ ತಿಮ್ಮಪ್ಪ ಸುವರ್ಣ ಅವರ ಉಪಸ್ಥಿತಿಯಲ್ಲಿ ಮೇಲಿನಂತೆ ತೀರ್ಮಾನ ತೆಗೆದುಕೊಂಡರು.

CHETAN KENDULI

 

ಕುಂಬ್ರಿ ಮರಾಠಿ ಕಳೇದ ೨೦ ವರ್ಷದಿಂದ ಶೈಕ್ಷಣಿಕ ಮೀಸಲಾತಿ ಪಡೆದುಕೊಳ್ಳುತ್ತಿದ್ದರು ರಾಜಕೀಯ ಮೀಸಲಾತಿಯಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ಸಾಮಾಜಿಕ ಚಿಂತಕ ರವೀಂದ್ರ ನಾಯ್ಕ ಹಾಗೂ ಜಿಲ್ಲಾ ಕುಂಬ್ರಿ ಮರಾಠಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ ಬೆಂಗಳೂರಿನಲ್ಲಿ ನಿಯೋಗಕ್ಕೆ ಮನವಿ ಅರ್ಪಿಸಿದ ಹಿನ್ನೆಲೆಯಲ್ಲಿ ಇಂದು ಆಯೋಗವು ಶಿರಸಿಗೆ ಆಗಮಿಸಿ, ದಾಖಲೆ ಪರೀಶಿಲನೆ ಜೊತೆಯಲ್ಲಿ ರಾಜಕೀಯ ಮೀಸಲಾತಿ ಕೋಡಲು ತೀರ್ಮಾನ ತೆಗೆದುಕೊಂಡಿತು.

  ನಿಯೋಗದಲ್ಲಿ ಮಂಜುನಾಥ ತಿಮ್ಮ ಮರಾಠಿ ಜಿಲ್ಲಾಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಹಿಂದುಳಿದ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘ, ದೇವರಾಜ ಮರಾಠಿ ಗೌರವಾಧ್ಯಕ್ಷರು ಶಿರಸಿ, ಮಂಜುನಾಥ ಮರಾಠಿ ಅಧ್ಯಕ್ಷರು ಕುಮಟ, ವೆಂಕಟರಮಣ ಮರಾಠಿ ಯಾಣ ಉಪಾಧ್ಯಕ್ಷರು, ರುಕ್ಮಾ ಮರಾಠಿ ತಾಲೂಕಾಧ್ಯಕ್ಷರು ಭಟ್ಕಳ, ಕಿರಣ ಎಸ್ ಮರಾಠಿ ಜಿಲ್ಲಾ ಸಮಿತಿ ಸದಸ್ಯ, ಕೃಷ್ಣ ಮರಾಠಿ ಜಿಲ್ಲಾ ಸಮಿತಿ ಸದಸ್ಯ, ಗಣಪತಿ ಭಟ್ಕಳ ಜಿಲ್ಲಾ ಸಮಿತಿ ಸದಸ್ಯ, ಲಿಂಗು ಎಸ್ ಮರಾಠಿ ಗ್ರಾಮ ಸಮಿತಿ ಸದಸ್ಯ, ಪುರುಷೋತ್ತಮ ಮರಾಠಿ ಅಧ್ಯಕ್ಷರು ಕುಮಟ, ದಾಮೋದರ ಮರಾಠಿ ಬ್ರಮ್ಮೂರ್ ಅಧ್ಯಕ್ಷರು ಅಂಕೋಲಾ, ಈಶ್ವರ ಮರಾಠಿ ಯಲವಳ್ಳಿ ಉಪಾಧ್ಯಕ್ಷರು ಕುಮಟ.

Be the first to comment

Leave a Reply

Your email address will not be published.


*