ಜಿಲ್ಲಾ ಸುದ್ದಿಗಳು
ಹರಿಹರ
ಅನ್ಯ ಇಲಾಖೆಯಲ್ಲಿರುವ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಹಣವನ್ನು ಸಮಾಜ ಕಲ್ಯಾಣ ಇಲಾಖೆಗೆ ವಾಪಸ್ಸು ಪಡೆದು ವಿವಿಧ ಅಭಿವೃದ್ಧಿ ನಿಗಮಗಳ ಸಹಾಯಧನ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚು ಮಾಡಿ ನಿಗದಿತ ಸಮಯದಲ್ಲಿ ಅನುದಾನ ಖರ್ಚು ಮಾಡದ ಅಧಿಕಾರಿಗಳನ್ನು ನೇಮಾನುಸಾರ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಹೆಗ್ಗೇರಿ ರಂಗಪ್ಪನವರು ಒತ್ತಾಯಿಸಿದ್ದಾರೆ .ಸ್ವಾತಂತ್ರ ಬಂದು 74 ವರ್ಷ ಗತಿಸಿದರೂ ಕವಿ ಸಿದ್ದಲಿಂಗಯ್ಯ ಹೇಳಿರುವಂತೆ ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ, ಸಮಾನತೆಯ ಹೂವನ್ನು ಅರಳಿಸಲಿಲ್ಲ ನೋವಿನ ಕಡಲನ್ನು ಬತ್ತಿಸಲಿಲ್ಲ, ಹಣವಂತರು ಕಣ್ ಸನ್ನೆ ಮಾಡಿದ್ದರೆ ಕತ್ತಲೆಯಲ್ಲೇ ಬತ್ತಲೆಯಾಯಿತ್ತು ಯಾರೂ ಕಾಣದ ಸ್ವಾತಂತ್ರ ನಲವತ್ತೇಳರ ಸ್ವಾತಂತ್ರ್ಯ.ಎಂಬಂತೆ ದೇಶದಲ್ಲಿ ಬಡವರ ಬಡತನ ನಿವಾರಣೆಯಾಗಲಿಲ್ಲ. ನಮ್ಮನ್ನಾಳಿದ ಮತ್ತು ನಮ್ಮನ್ನಾಳುತ್ತಿರುವ ಸರ್ಕಾರಗಳು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೂ ಅನುಷ್ಠಾನಗೊಳಿಸುವ ಆಡಳಿತ ಯಂತ್ರದ ಬದ್ಧತೆಯ ಕೊರತೆ ಯಿಂದಾಗಿ ಅವರು ಮಾಡುವ ವಂಚನೆಯಿಂದಾಗಿ ಯೋಜನೆಯ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ತಲುಪದೆ ಬಹುತೇಕ ಬಡವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದರು .
ರಾಜ್ಯದಲ್ಲಿ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಕಾಯ್ದೆ ಜಾರಿಯಲ್ಲಿದ್ದರೂ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ಕಾಯ್ದೆ ಒಳಗಿನ 7 ಡಿ ನಿಯಮಾನುಸಾರ ತೆಗೆದು ಹಾಕಲಾಗಿಲ್ಲ .ಇತ್ತೀಚೆಗೆ ಕೋವಿಡ್ ನೆಪದಲ್ಲಿ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ ವಿವಿಧ ಅಭಿವೃದ್ಧಿ ನಿಗಮಗಳ ಸಹಾಯ ಧನ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಕಡಿಮೆ ಮಾಡಲಾಗಿದೆ,ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಅನುದಾನದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ದುರ್ಬಳಕೆಯಾಗುತ್ತಿವೆ.ಅಲ್ಲದೆ ಕಳಪೆ ಕಾಮಗಾರಿಗಳನ್ನು ನಿಯಂತ್ರಿಸಲಾಗುತ್ತಿಲ್ಲ ಅನ್ಯ ಇಲಾಖೆಗಳಲ್ಲಿರುವ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ .ಆದ್ದರಿಂದ ಅನ್ಯ ಇಲಾಖೆಗಳಲ್ಲಿರುವ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಹಣವನ್ನು ಸಮಾಜ ಕಲ್ಯಾಣ ಇಲಾಖೆಗೆ ವಾಪಸ್ ಪಡೆದು ವಿವಿಧ ಅಭಿವೃದ್ಧಿ ನಿಗಮಗಳ ಸಹಾಯಧನ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚು ಮಾಡಿ ನಿಗದಿತ ಸಮಯದಲ್ಲಿ ಅನುದಾನ ಖರ್ಚು ಮಾಡದ ಅಧಿಕಾರಿಗಳನ್ನು ನಿಯಮಾನುಸಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯವರು ತಾಲ್ಲೂಕು ದಂಡಾಧಿಕಾರಿ ಕೆ ಬಿ ರಾಮಚಂದ್ರಪ್ಪ ನವರಲ್ಲಿ ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ನೇೂಟದವರ,ಜಿಲ್ಲಾ ಉಪಾಧ್ಯಕ್ಷ ಎಲ್ ಜಯಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಾಯಕ,ಜಿಲ್ಲಾ ಉಪಾಧ್ಯಕ್ಷ ಡಿ ಡಿ ಹನುಮಂತಪ್ಪ ,ಚಿಕ್ಕನಹಳ್ಳಿ ಹನುಮಂತಪ್ಪ ,ಮಂಜುನಾಥ್, ನ್ಯಾಮತಿ ಹಾಲೇಶ್ ಉಪಸ್ಥಿತರಿದ್ದರು .
Be the first to comment