ಜಿಲ್ಲಾ ಸುದ್ದಿಗಳು
ಹೊನ್ನಾವರ
ಮಂಕಿಯಲ್ಲಿ ಲಸಿಕೆಗಾಗಿ ಪರದಾಟ : ಸಾವಿರಾರು ಜನಸೇರಿದರೂ ಕುಡಿಯುವ ನೀರಿಗೂ ಗತಿಯಿಲ್ಲ. ಕೇಂದ್ರದಲ್ಲಿ ಲಸಿಕೆ ಸಿಗದೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.ಹೊನ್ನಾವರ ತಾಲ್ಲೂಕಿನ ಮಂಕಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಲಸಿಕೆ ಲಭ್ಯತೆಗಿಂತ ಎರಡರಷ್ಟು ಜನ ಸೇರುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದ ಸಂಜೆಯ ತನಕವು ಮುಗಿದಿರಲಿಲ್ಲ. ಸೇರಿದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಯು ಇಲ್ಲದ ಕುರಿತು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾತ್ರಿಯೇ ಬಂದು ಲಸಿಕೆಗಾಗಿ ಕಾಯುತ್ತಿರುವ ಸಾರ್ವಜನಿಕರು ಉಪವಾಸವಿದ್ದು ಖಾಲಿ ಹೊಟ್ಟೆಯ ಮೇಲೆ ಲಸಿಕೆ ಪಡೆಯುವಂತಾಯಿತು.ಮAಕಿ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕನಿಷ್ಠ ಮೂವತ್ತು ಸಾವಿರದಷ್ಟು ಜನ ಸಂಖ್ಯೆ ಇದ್ದು, ಜನಸಂಖ್ಯೆ ಆಧಾರದಲ್ಲಿ ಲಸಿಕೆ ಲಭ್ಯತೆ ತೀರಾ ಕಡಿಮೆ ಆಗುತ್ತಿದೆ.ಇನ್ನೂ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಲಸಿಕೆಗಾಗಿ ಬಾಡಿಗೆ ವಾಹನ ಮಾಡಿಕೊಂಡು ಬಂದು ಸಾಲಿನಲ್ಲಿನಿಂತು ಲಸಿಕೆ ಸಿಗದೆ ಹಿಡಿ ಶಾಪ ಹಾಕಿ ವಾಪಾಸ್ ಆಗುತ್ತಿದ್ದಾರೆ. ಅಧಿಕಾರಿಗಳು ತಮಗೆ ಬೇಕಾದವರಿಗೆ ಲಸಿಕೆ ನೀಡುತ್ತಾರೆ ಎನ್ನುವ ಆರೋಪವು ಕೇಳಿಬಂದಿದೆ. ಇನ್ನೂ ಕೆಲವೊಂದು ಕಡೆ ಆ ವ್ಯಾಪ್ತಿ ಬಿಟ್ಟು ಬೇರೆ ಬೇರೆ ಊರುಗಳಿಂದ ಪ್ರಭಾವ ಬೆಳೆಸಿ ಲಸಿಕೆ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ. ಕೋವಿಡ್ ಲಸಿಕೆ ನೀಡುವಲ್ಲಿಯೂ ತಮ್ಮವರಿಗೆ ಕೊಡಿಸುವ ರಾಜಕೀಯದ ಮೇಲಾಟ ನಡೆದ ಹಾಗೆ ಕಾಣುತ್ತಿದೆ.
ಲಸಿಕೆಗಾಗಿ ಸಾವಿರ ಸಂಖ್ಯೆಯಲ್ಲಿ ಸೇರಿದ ಜನರು ಕುಡಿಯಲು ನೀರು ಇಲ್ಲದೇ ಪರದಾಡುವುದನ್ನು ನೋಡಿ ಮಾಜಿ ತಾಲೂಕಾ ಪಂಚಾಯತ ಸದಸ್ಯ ಅಲ್ಲಿ ಸೇರಿರುವ ಸಾರ್ವಜನಿಕರಿಗೆ ಐದಾರು ಬಾಕ್ಸ್ ನೀರಿನ ಬಾಟಲಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಮಂಕಿ ಪ್ರಾಥಮಿಕ ಆರೋಗ್ಯ ದಲ್ಲಿ ನಿತ್ಯವೂ ಲಸಿಕೆಗಾಗಿ ಹೋರಾಟ ನಡೆಸಬೇಕಾಗಿದೆ. ವೈದ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Be the first to comment