ಐಎನ್ಎಸ್ ಕದಂಬ ನೌಕಾನೆಲೆ ತಲುಪಿದ ವಿಜಯಜ್ಯೋತಿ

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ರಾಜ್ಯ ಸುದ್ದಿಗಳು 

ಕಾರವಾರ:

CHETAN KENDULI

2020 ರ ಡಿಸೆಂಬರ್ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಿದ್ದ “ಸ್ವರ್ಣಿಮ್ ವಿಜಯ ಜ್ಯೋತಿ”ಯು ಇಂದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಗೆ ಆಗಮಿಸಿದ್ದು ಈ ವೇಳೆ ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜ್ಯೋತಿಯನ್ನು ಗೌರವಯುತವಾಗಿ ಸ್ವಾಗತಿಸಿದರು.

ಭಾರತ – ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು 2020ರ ಡಿಸೆಂಬರ್ 16ರಿಂದ ಈ ಬಾರಿ “ಸ್ವರ್ಣಿಮ್ ವಿಜಯ್ ವರ್ಷ” ಎಂಬ ಹೆಸರಿನಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿದೆ. 971ರ ಡಿಸೆಂಬರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನದ ಸೈನ್ಯದ ವಿರುದ್ಧ ಸೆಣಸಾಡಿ ಐತಿಹಾಸಿಕ ವಿಜಯ ಪಡೆದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಗಿತ್ತು. ಅಲ್ಲದೆ, ಎರಡನೆ ಮಹಾಯುದ್ಧದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿ ನಡೆದಿತ್ತು. ವಿಶೇಷ ಕಾರ್ಯಾಚರಣೆಗಳನ್ನ ಸಹ ಕೈಗೊಳ್ಳುವ ಮೂಲಕ ಬಾಂಗ್ಲಾ ವಿಮೋಚನೆಯಲ್ಲಿ ಪ್ರಮುಖ ಕಾರ್ಯನಿರ್ವಹಿಸಿದೆ.

ಕಾರವಾರದ ನೌಕಾನೆಲೆಗೆ ಆಗಮಿಸಿದ ಜ್ಯೋತಿಯನ್ನು ಕದಂಬ ನೌಕಾನೆಲೆಯಲ್ಲಿನ ವಿಜಯ ಚೌಕ್ ಬಳಿ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು. ಭಾರತೀಯ ಸೇನೆ ಮತ್ತು ನೌಕಾಪಡೆಯ ಅಧಿಕಾರಿಗಳು ಇದ್ದು, 1971ರ ಭಾರತ ಪಾಕ್ ಯುದ್ಧದಲ್ಲಿ ನೌಕಾಸೇನೆ ಸಹ ಮಹತ್ವದ ಪಾತ್ರ ವಹಿಸಿದೆ ಎಂದು ನೌಕಾಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published.


*