ರಾಜ್ಯ ಸುದ್ದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಅಣೆಕಟ್ಟುಗಳ ನೀರಿನ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ಕಾರವಾರದ ಕದ್ರಾ ಅಣೆಕಟ್ಟಿನ ಗರಿಷ್ಠ ಮಟ್ಟ 34.5ಮೀ ಆಗಿದ್ದು 30.5 ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ. ಕೊಡಸಳ್ಳಿ ಡ್ಯಾಮ್ ನಲ್ಲಿ 75.5 ಮೀ ಗರಿಷ್ಠ ಮಟ್ಟವಾಗಿದ್ದು 69.25 ಮೀ ನಷ್ಟು ನೀರನ್ನು ಕಾಯ್ದುಕೊಳ್ಳಲಾಗಿದೆ. ಸೂಪಾ ಅಣೆಕಟ್ಟಿನಲ್ಲಿ 564 ಮೀ ಆಗಿದ್ದು ಸದ್ಯ 569.16ಮೀ ನೀರು ಕಾಯ್ದುಕೊಳ್ಳಲಾಗಿದೆ. ತಟ್ಟೀಹಳ್ಳದ ಗರಿಷ್ಠ ಮಟ್ಟ 468.34 ಮೀ ಆಗಿದ್ದು 457.24 ಮೀ ನಷ್ಟು ಕಾಪಾಡಲಾಗಿದೆ. ಬೊಮ್ನಳ್ಳಿಯಲ್ಲಿ ಗರಿಷ್ಟ 434.38 ಮೀ ಆಗಿದ್ದು 434.28 ಮೀ. ಮಟ್ಟ ಕಾಯ್ದುಕೊಳ್ಳಲಾಗಿದೆ.
ಹಾಗೂ ಗೇರುಸೊಪ್ಪಾ ಡ್ಯಾಮ್ ನ ಗರಿಷ್ಠ ಮಟ್ಟ 55 ಮೀ ಇದ್ದು 44.38 ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Be the first to comment