ಜಿಲ್ಲಾ ಸುದ್ದಿಗಳು
ರಾಯಚೂರು
ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ರಾಯಚೂರು ಜಿಲ್ಲೆಯ CSC ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಮಾನ್ವಿ ಮತ್ತು ಸಿರಿವಾರ ತಾಲೂಕು ವ್ಯಾಪ್ತಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ VLE ಸಿಬ್ಬಂಧಿಗಳ ಒಂದು ದಿನದ ತರಬೇತಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ಇಂದು ಮಾನವಿ ಶಾಸಕರ ಭವನದ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಯಚೂರು ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ”ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯು ನಿರಂತರವಾಗಿ ಗ್ರಾಮೀಣ ಜನಜೀವನ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಿಸುತ್ತಾ ಬಂದಿದೆ. ಸ್ವ-ಸಹಾಯ ಸಂಘಗಳ ರಚನೆ, ಕೃಷಿ ತರಬೇತಿ, ಜ್ಞಾನವಿಕಾಸ ಕಾರ್ಯಕ್ರಮ, ಜನಜಾಗೃತಿ ಕಾರ್ಯಕ್ರಮ, ಕೆರೆ ಹೂಳೆತ್ತುವ ಕಾರ್ಯಕ್ರಮ, ಶ್ರದ್ಧಾಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮ, ಮಾಶಾಸನ ಒದಗಣೆ, ವಾತ್ಸಲ್ಯ ಕಾರ್ಯಕ್ರಮ, ಯಂತ್ರಶ್ರೀ, ಆರೋಗ್ಯ ರಕ್ಷಾ, ಕಿರು ಆರ್ಥಿಕ ವ್ಯವಹಾರ, ಬೆಂಚು ಡೆಸ್ಕುಗಳ ಒದಗಣೆ, ಜ್ಞಾನದೀಪ ಶಿಕ್ಷಕರ ಒದಗಣೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರಕ್ಕಾಗಿ ಸಹಕಾರ, ಸುಜ್ಞಾನ ನಿಧಿ ಶಿಷ್ಯವೇತನ ಒದಗಣೆ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಅನುಷ್ಟಾನಿಸಲಾಗಿದೆ. ಸೇವಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ವರ್ಷದಲ್ಲಿ ಯೋಜನೆಯ ಅಧ್ಯಕ್ಷರಾದ ಪೂಜ್ಯ ಡಾ|. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಒಟ್ಟು 6,000 ಹೊಸ CSC ಸೆಂಟರ್ ಗಳನ್ನು ತೆರೆಯುವ ಬಗ್ಗೆ ಯೋಜನೆ ರೂಪಿಸಿದ್ದು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ಮಾಡಲಾಗಿದೆ. ಇದರಂತೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು 135 CSC ಕೇಂದ್ರಗಳನ್ನು ತೆರೆಯಲಾಗುವುದು. CSC ಕೇಂದ್ರಗಳ ಆರಂಭದಿಂದಾಗಿ ಗ್ರಾಮೀಣ ಜನರಿಗೆ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಬಹಳಷ್ಟು ಅನುಕೂಲ ಆಗಲಿದೆ. ಕಡಿಮೆ ಖರ್ಚಿನಲ್ಲಿ, ಮನೆ ಬಾಗಿಲಿನಲ್ಲಿಯೇ ಸರಕಾರದ ಹಲವಾರು ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ. ಅಲ್ಲದೇ ಗ್ರಾಮೀಣ ಯುವಕ ಯುವತಿಯರಿಗೂ ಉದ್ಯೋಗವಕಾಶ ದೊರೆಯಲಿದೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕಾಗಿದೆ” ಎಂದು ತಿಳಿಸಿದರು.
ಈ ಸಂದರ್ಭ CSC ಜಿಲ್ಲಾ ಪ್ರಬಂಧಕ ನಜೀಂ ಎನ್. ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಧೆಯ ಉಪನ್ಯಾಸಕ ರಮೇಶ್ , ಕ್ಷೇತ್ರ ಯೋಜನಾಧಿಕಾರಿ ಪಾಂಡು ಗೌಡ , ಸೇವಾ ವಿಭಾಗದ ಯೋಜನಾಧಿಕಾರಿ ಸತೀಶ್ ಎಂ , ಪ್ರದೀಪ್ , ಶಿವರಾಜ್ , ಕುಮಾರ್ , ಗಂಗಾಧರ್ , ವಿನೋದ್ ಮುಂತಾದವರು ಉಪಸ್ಧಿತರಿದ್ದರು.
Be the first to comment