ಮಳೆಗಾಲ ಮುಗಿಯುವವರೆಗೆ ರ್ಯಾಪ್ಟಿಂಗ್ ನಿಲ್ಲಿಸುವಂತೆ ಗ್ರಾ.ಪಂ ಸೂಚನೆ; ಸಂಕಷ್ಟದಲ್ಲಿ ಕೆಲಸಗಾರರು

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಜೋಯಿಡಾ: ಪ್ರವಾಸೋದ್ಯಮ ಹಾಗೂ ಅಡ್ವೆಂಚರ್ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜೋಯಿಡಾ ಗಣೇಶಗುಡಿ ಯಲ್ಲಿ ರ್ಯಾಪ್ಟಿಂಗ್ ನಿಲ್ಲಿಸುವಂತೆ ಅವೇಡಾ ಗ್ರಾಮ ಪಂಚಾಯತದಿಂದ ನೋಟೀಸ್ ನೀಡಲಾಗಿದ್ದು. ರ್ಯಾಪ್ಟಿಂಗ್ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೊರೊನಾ ಭೀತಿ ಇರುವುದರಿಂದ ಜುಲೈ.7 ರವರೆಗೆ ರ್ಯಾಪ್ಟಿಂಗ್ ನಡೆಸದಿರುವಂತೆ ಆದೇಶ ನೀಡಲಾಗಿತ್ತು. ಆದರೆ ಈಗ ಮಳೆಗಾಲ ಮುಗಿಯುವವರೆಗೆ ನಡೆಸಬಾರದು ಎಂದಿರುವುದರಿಂದ ಈ ಚಟುವಟಿಕೆಗಳನ್ನೇ ಉದ್ಯೋಗ ವಾಗಿಸಿಕೊಂಡ ಅನೇಕ ಯುವಕರು ನಿರುದ್ಯೋಗಿಗಳಾಗುವ ಸಾಧ್ಯತೆಗಳಿವೆ.

ಮತ್ತು ಉದ್ಯೋಗಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಹಾಗೂ ಇವುಗಳಿಗೆ ಪೂರಕವಾಗಿರುವ ಹೋಂ ಸ್ಟೇ ರೆಸಾರ್ಟ್ ಗಳಿಗೂ ಕೂಡ ನಷ್ಟವಾಗುತ್ತದೆ. ಆದ್ದರಿಂದ ಗ್ರಾ.ಪಂ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*