ಜಿಲ್ಲಾ ಸುದ್ದಿಗಳು
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರು ಹೊಂದಿರುವ ಕೊನೆಯ ಮಗುವು 18 ವರ್ಷ ವಯೋಮಾನದವರೆಗೆ ಮಕ್ಕಳ ಆರೈಕೆಗಾಗಿ ಅವರ ಸೇವಾವಧಿಯಲ್ಲಿ ಗರಿಷ್ಠ 06 ತಿಂಗಳವರೆಗೆ ಅಂದರೆ 180 ದಿನಗಳವರೆಗೆ “ಶಿಶುಪಾಲನಾ ರಜೆ” ಪಡೆಯುವ ಅವಕಾಶವನ್ನು ನೀಡಿ ಸರಕಾರವು ಆದೇಶಿಸಿದೆ.
ಬಾಗಲಕೋಟೆ:(ಇಳಕಲ್ಲ)ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹಲವು ವರ್ಷಗಳ ಪ್ರಮುಖ ಬೇಡಿಕೆಯಾದ ಸರ್ಕಾರಿ ಮಹಿಳಾ ನೌಕರರ ಮಕ್ಕಳ ಲಾಲನೆ ಪಾಲನೆ ಆರೈಕೆಗಾಗಿ ಶಿಶುಪಾಲನಾ ರಜೆ ಮಂಜೂರು ಮಾಡಲು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸನ್ಮಾನ್ಯ ಮುಖ್ಯಮಂತ್ರಿಗಳು ಮನವಿಗೆ ಸ್ಪಂದಿಸಿ ರಾಜ್ಯದ 2021-22 ನೇ ಸಾಲಿನ ಆಯವ್ಯಯದಲ್ಲಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರನ್ವಯ ಕರ್ನಾಟಕ ರಾಜ್ಯ ಸರ್ಕಾರವು ಶಿಶುಪಾಲನಾ ರಜೆಯನ್ನು ಮಂಜೂರು ಮಾಡಿರುತ್ತದೆ.
ಇದಕ್ಕಾಗಿ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ರವರಿಗೆ,ಸಚಿವ ಸಂಪುಟದ ಎಲ್ಲಾ ಸಚಿವರಿಗೆ, ಸರ್ಕಾರದ ಉನ್ನತ ಅಧಿಕಾರಿಗಳಿಗೆ ಹಾಗೂ ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿ ರವರಿಗೆ ಹಾಗೂ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಸಮಸ್ತ ಇಳಕಲ್ ತಾಲ್ಲೂಕಿನ ಸರ್ಕಾರಿ ಮಹಿಳಾ ನೌಕರರ ಪರವಾಗಿ ಇಳಕಲ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮ ಎಸ್ ಪಮ್ಮಾರ,ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಈಶ್ವರ ಗಡ್ಡಿ, ಖಜಾಂಚಿಗಳಾದ ಶ್ರೀ ಎಂ ಎಚ್ ಗೌಡರ, ಕಾರ್ಯದರ್ಶಿಗಳಾದ ಶ್ರೀ ಗುಂಡಪ್ಪ ಕುರಿ ರವರು ಹಾಗೂ ಸಮಸ್ತ ಪದಾಧಿಕಾರಿಗಳು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.
Be the first to comment