ಲಸಿಕಾ ಅಭಿಯಾನ :ಜಿಲ್ಲೆಯಲ್ಲಿ ಗುರಿ ಮೀರಿ ಸಾಧನೆ:ಒಂದೇ ದಿನದಲ್ಲಿ 29 ಸಾವಿರ ಜನರಿಗೆ ಲಸಿಕೆ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರದ ನಿರ್ದೇಶನದಂತೆ ಜೂನ್ 21 ರಂದು ಜಿಲ್ಲೆಯಾದ್ಯಂತ ವಿಷೇಶ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, 29263 ಜನರಿಗೆ ಲಸಿಕೆ ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ವಿಶ್ವ ಯೋಗ ದಿನಾಚರಣೆಯಂದು ಜಿಲ್ಲೆಯಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡು 25 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಜಿಲ್ಲೆಯಲ್ಲಿ ಗುರಿ ಮೀರಿ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕಾಕರಣಲ್ಲಿ ತೊಡಗಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದ್ದಾರೆ.

ಜೂನ್ 21 ರಂದು ನೀಡಲಾದ ಒಟ್ಟು 29263 ಲಸಿಕೆಯಲ್ಲಿ ಕೋವಿಶಿಲ್ದ ಲಸಿಕೆಯನ್ನು 28565 ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು 698 ಜನರಿಗೆ ನೀಡಲಾಗಿದೆ. ಅದರಲ್ಲಿ ಮೊದನಲೇ ಡೋಜ್ 25469 ಜನರು ಪಡೆದರೆ, ಎರಡನೇ ಡೋಜ್ ಲಸಿಕೆಯನ್ನು 3794 ಜನ ಪಡೆದುಕೊಂಡಿದ್ದಾರೆ. ಕೋವಿಶಿಲ್ಡ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು 51 ಜನ, ಪ್ರಂಟ್‍ಲೈನ್ ವರ್ಕರ್ಸ್ 331 ಜನ, 18 ರಿಂದ 44 ವರ್ಷದೊಳಗಿನ 16955 ಜನ, 45 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟವರು 8611 ಜನ, 60 ವರ್ಷ ಮೇಲ್ಪಟ್ಟವರು 2617 ಜನ ಪಡೆದುಕೊಂಡಿದ್ದಾರೆ.

ಅಭಿಯಾನದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದ ಒಟ್ಟು 698 ಪೈಕಿ ಆರೋಗ್ಯ ಕಾರ್ಯಕರ್ತರು ಒಬ್ಬರು, ಪ್ರಂಟ್‍ಲೈನ್ ವರ್ಕರ್ಸ್ 7 ಜನ, 45 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟವರು 568 ಜನ, 60 ವರ್ಷ ಮೇಲ್ಪಟ್ಟವರು 122 ಜನ ಪಡೆದುಕೊಂಡಿದ್ದಾರೆ. ತಾಲೂಕಾವಾರು ನೋಡುವುದಾದರೆ ಜಮಖಂಡಿ ತಾಲೂಕಿನಲ್ಲಿ ಅತೀ ಹೆಚ್ಚು 8676 ಜನ ಲಸಿಕೆ ಪಡೆದರೆ ಅತೀ ಕಡಿಮೆ ಹುನಗುಂದ ತಾಲೂಕಿನಲ್ಲಿ 3903 ಜನ ಪಡೆದುಕೊಂಡಿದ್ದಾರೆ. ಉಳಿದ ಬಾದಾಮಿ ತಾಲೂಕಿನಲ್ಲಿ 5100, ಬಾಗಲಕೋಟೆ ತಾಲೂಕಿನಲ್ಲಿ 5138, ಬೀಳಗಿ ತಾಲೂಕಿನಲ್ಲಿ 1795, ಮುಧೋಳ ತಾಲೂಕಿನಲ್ಲಿ 4604 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 47 ಜನಕ್ಕೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*