“ಹಗಲು ದರೋಡೆಯಲ್ಲಿ ಟೋಲ್ ಪ್ಲಾಸಗಳು” ಸಂಘ-ಸಂಸ್ಥೆಗಳು, ಮಾದ್ಯಮ, ಸ್ಥಳೀಯರಿಗಿಲ್ಲ ವಿನಾಯಿತಿ | ಕಣ್ಮುಚ್ಚಿ ಕುಳಿತ ಉಸ್ತುವಾರಿ ಸಚಿವರು ಹಾಗೂ ಶಾಸಕರು

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಜನಪರ ಕಾರ್ಯಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ, ಮಾದ್ಯಮ ವರ್ಗದವರಿಗೆ, ಸ್ಥಳೀಯ ರೈತಾಪಿಗಳಿಗೆ ಟೋಲ್‌ಗಳಲ್ಲಿ ವಿನಾಯಿತಿಯೇ ಇಲ್ಲವಾಗಿರುವುದು ಬೇಸರದ ಸಂಗತಿಯಾಗಿದೆ. ಟೋಲ್‌ಗಳಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ, ಸ್ಥಳೀಯರು ಪಕ್ಕದ ಹಳ್ಳಿಗಳಿಗೆ ಹೋಗಲು ನೂರಾರು ರೂಪಾಯಿಗಳನ್ನು ಖರ್ಚು ಮಾಡುವ ಪರಿಸ್ಥಿತಿ ಇದೀಗ ಹೊಸಕೋಟೆ, ದೇವನಹಳ್ಳಿ ಮತ್ತು ನೆಲಮಂಗಲ ಹೈವೆ ಸುಂಕ ವಸೂಲಾತಿ ಕೇಂದ್ರಗಳಲ್ಲಿ ಇದೆ.

CHETAN KENDULI

ಹಗಲು ದರೋಡೆಯಲ್ಲಿ ಟೋಲ್ ಪ್ಲಾಸಗಳು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಗ ಸಂಸ್ಥೆಗಳಾದ ಖಾಸಗಿ ಟೋಲ್‌ಗಳಲ್ಲಿ ಸ್ಥಳೀಯರಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂಬ ಮಾತುಗಳು ಗಾಡವಾಗಿ ಕೇಳಿಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ಹಳ್ಳಿ ಸಂಪರ್ಕ ಕಲ್ಪಿಸುವ ಸ್ಥಳೀಯರಿಗೆ ಹಾಗೂ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸ್ಥಳೀಯ ಶಾಸಕರಾಗಲೀ ಯಾವುದೇ ಚಕಾರ ಎತ್ತದಿರುವುದು, ರಾಜಾ ರೋಷವಾಗಿ ಹಗಲು ದರೋಡೆಯಲ್ಲಿ ಟೋಲ್ ಪ್ಲಾಸಗಳು ನಡೆಯುತ್ತಿರುವುದು, ಹಲವು ಅನುಮಾನಗಳಿಗೆ ಎಡೆಮಾಡಿಕೊಡುವಂತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೋಲ್‌ನಲ್ಲಿ ಕೆಲವೊಂದು ಬಾರಿ ಮಾದ್ಯಮದವರಿಗೆ ಹಾಗೂ ಸಂಘಸಂಸ್ಥೆಯವರಿಗೆ ವಿನಾಯಿತಿ ಕೊಡುತ್ತಾರೆ. ಕೆಲವೊಮ್ಮೆ ವಿನಾಯಿತಿ ಕೊಡದೆ, ಟೋಲ್ ಕಟ್ಟಲೇಬೇಕೆಂದು ಸಿಬ್ಬಂದಿಗಳು ಒತ್ತಾಯ ಮಾಡುವುದು ಕಂಡುಬಂದಿದೆ. ಜತೆಗೆ ಒಂದು ಬಾರಿ ಬಿಡುವ ಸಿಬ್ಬಂದಿಗಳು ಮತ್ತೊಂದು ಬಾರಿ ಬಿಡದಿರುವುದು ಯಾವ ಕಾರಣಕ್ಕೆಂಬುವುದು ತಿಳಿಯುತ್ತಿಲ್ಲ. ಪ್ರಶ್ನಿಸಿದರೆ, ಕೇವಲ ಪೊಲೀಸರಿಗೆ ಮತ್ತು ಮಿಲಿಟರಿಗಳಿಗೆ ಮಾತ್ರ ವಿನಾಯಿತಿ ಅವಕಾಶವಿದೆ ಎಂದು ಹೇಳುತ್ತಿದ್ದಾರೆ. ಸ್ಥಳೀಯವಾಗಿ ಸೇವೆ ಸಲ್ಲಿಸುವವರ ಪಾಡು ಏನಾಗಬೇಕೆಂಬುವ ಅರಿವು ಇಲ್ಲದಂತೆ ಟೋಲ್‌ಗಳವರು ವರ್ತಿಸುತ್ತಿದ್ದಾರೆ. ದೇವನಹಳ್ಳಿ ಟೋಲ್‌ನಲ್ಲಿಯೂ ಸಹ ಇದೇ ಸಮಸ್ಯೆ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳೀಯರಿಗೆ ಹಾಗೂ ಸಂಘ ಪರಿವಾರದವರಿಗೆ ಟೋಲ್ ಫ್ರೀ ಮಾಡಿಕೊಡಬೇಕು ಅಥವಾ ಸರ್ವೀಸ್ ರಸ್ತೆಯನ್ನು ಮಾಡಿಕೊಡಬೇಕು ಎಂದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.

ಫಾಸ್ಟ್‌ಟ್ಯಾಗ್ ಮಾಡಿಸಲು ಒತ್ತಾಯ: ದಿನನಿತ್ಯ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಹಾಕಿ, ಅಲ್ಲಿಂದ ಬರುವ ಹಣದಲ್ಲಿ ಟೋಲ್‌ಗೆ ನೂರಾರು ರೂಪಾಯಿಗಳನ್ನು ಕಟ್ಟುವಂತೆ ಆಗಿದೆ. ಫಾಸ್ಟ್‌ಟ್ಯಾಗ್ ಮಾಡಿಸಲು ಟೋಲ್ ಸಿಬ್ಬಂದಿಗಳು ಒತ್ತಾಯ ಮಾಡುತ್ತಾರೆ. ಆದರೆ ಫಾಸ್ಟ್‌ಟ್ಯಾಗ್‌ಗೂ ಸಹ ಹಣ ವಸೂಲಿ ಮಾಡುವ ದಂದೆ ಪ್ರೀಪೇಡ್ ಆಧಾರದಲ್ಲಿ ನಡೆಯುತ್ತಿದೆ. ಟೋಲ್ ಕಟ್ಟುವುದಿಲ್ಲವೆಂದರೆ, ಅಲ್ಲಿನ ಸಿಬ್ಬಂದಿಗಳು ದೌರ್ಜನ್ಯ ಮಾಡುತ್ತಾರೆ. ಇದು ಸಾಮಾನ್ಯ ವರ್ಗದವರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. 

**********

ಹೊಸಕೋಟೆ ಟೋಲ್ ಪ್ಲಾಸದಲ್ಲಿ ಸ್ಥಳೀಯರು ಎನ್ನದೆ ವಿನಾಯಿತಿ ತೋರಿಸುತ್ತಿಲ್ಲ. ಟೋಲ್ ಕಟ್ಟಲೇ ಬೇಕು ಎಂದು ಪೀಡಿಸುತ್ತಾರೆ. ಹಣವಿರುವವರು ಕಟ್ಟಿ ಹೋಗುತ್ತಾರೆ. ಆದರೆ, ಹಣ ಇಲ್ಲದವರು ಏನು ಮಾಡಬೇಕು. ಆವಲಹಳ್ಳಿಯಿಂದ ಹೊಸಕೋಟೆಗೆ ಕಾರಿನಲ್ಲಿ ಹೋಗಬೇಕಾದರೆ ಒಂದು ಬಾರಿಗೆ ಹೋಗಲು ೪೦ರೂ. ಕಟ್ಟಲೇ ಬೇಕು. ಅದರಲ್ಲಿ ೨೦ರೂ. ನಾನ್ ಫಾಸ್ಟ್‌ಟ್ಯಾಗ್ ಪೆನಾಲ್ಟಿ. ಇದು ಹಗಲು ದರೋಡೆಯಾಗಿದೆ. ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಧ್ವನಿಯೆತ್ತಬೇಕು. 

– ನವೀನ್ ಕುಮಾರ್ | ಸ್ಥಳೀಯ ನಾಗರೀಕ

 

***********

ಟೋಲ್‌ಗಳನ್ನು ಖಾಸಗೀಕರಣಗೊಳಿಸಿ, ಸ್ಥಳೀಯ ಸಾರ್ವಜನಿಕರಿಂದ ಸುಂಕ ವಸೂಲಿ ಮಾಡುತ್ತಿರುವುದು ಬ್ರಿಟೀಷ್ ಸಂಸ್ಕೃತಿಯಾಗಿದೆ. ಸ್ಥಳೀಯರಿಗೆ ಮತ್ತು ಸಂಘ ಸಂಸ್ಥೆಗಳಿಗೆ ವಿನಾಯಿತಿ ಅವಕಾಶ ನೀಡದಿರುವುದು ಸರಿಯಾದ ಕ್ರಮವಲ್ಲ. ಕೆಲವೊಂದು ಟೋಲ್‌ಗಳಲ್ಲಿ ವಿನಾಯಿತಿ ಇದೆ. ಆದರೆ, ಹೊಸಕೋಟೆ, ದೇವನಹಳ್ಳಿ ಮತ್ತು ನೆಲಮಂಗಲ ಟೋಲ್‌ಗಳಲ್ಲಿಯೂ ಸಹ ಯಾವುದೇ ಮಾನ್ಯತೆ ನೀಡುತ್ತಿಲ್ಲ. ಇದರ ಬಗ್ಗೆ ಯಾವುದೇ ಜನನಾಯಕರು ಪ್ರಶ್ನಿಸುತ್ತಿಲ್ಲ. ಕೂಡಲೇ ಇದು ಬದಲಾಗಬೇಕು. ಸ್ಥಳೀಯರಿಗೆ ಮತ್ತುಸಂಘ ಸಂಸ್ಥೆಗಳಿಗೆ, ಮಾದ್ಯಮದವರಿಗೆ ವಿನಾಯಿತಿ ಕೊಡಬೇಕು.– ಬಿ.ಕೆ.ಶಿವಪ್ಪ | ಅಧ್ಯಕ್ಷರು, ನಾಗರೀಕ ಹಿತರಕ್ಷಣಾ ವೇದಿಕೆ, ದೇವನಹಳ್ಳಿ

Be the first to comment

Leave a Reply

Your email address will not be published.


*