ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಭಟ್ಕಳದಲ್ಲಿ ನೆಲೆಸಿದ ಮಹಿಳೆಗೆ ಜನ್ಮ ದಾಖಲೆ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಪಡೆಯಲು ಸಹಕರಿಸಿದ ಭ್ರಷ್ಟಸರಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರಣಧೀರರ ವೇದಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಅಗ್ರಹ.

ವರದಿ- ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಭಟ್ಕಳ- ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ಭಟ್ಕಳದಲ್ಲಿ ಕಳೆದ 8 ವರುಷಗಳಿಂದ ನೆಲೆಸಿದ್ದ ಮಹಿಳೆಯನ್ನು ಭಟ್ಕಳ ಪೋಲಿಸ್ ಇಲಾಖೆ ಬಂದಿಸಿದೆ. ಈ ಮಹಿಳೆ ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸುವ ಸಲುವಾಗಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾರೆಂಬುದು ಮುಖ್ಯವಾಗಿ ತನಿಖೆ ಮಾಡಿ , ನಕಲಿ ದಾಖಲೆ ತಯಾರಿಸಿ ಪಾಕಿಸ್ಥಾನಿ ಮಹಿಳೆಗೆ ಜನ್ಮ ದಾಖಲೆ ಪ್ರಮಾಣ ಪತ್ರ ,

ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಪಡೆಯಲು ಸಹಕರಿಸಿದ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಕರ್ನಾಟಕ ರಣಧೀರರ ವೇದಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ, ಚೌಥನಿ ಗ್ರಹ ಸಚಿವ ಬಸವರಾಜ್ ಬೊಮ್ಮಾಯಿ ಅವರೆಗೆ ಆಗ್ರಹಿಸಿದ್ದಾರೆ. ಪೋಲಿಸ್ ಇಲಾಖೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು ತಪ್ಪಿತಸ್ಥರು ಯಾರೇ ಆದರೂ ಇಂತಹ ದೇಶ ವಿರೋಧಿ ಚಟುವಟಿಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ತಿಳಿಸಿದಾರೆ

Be the first to comment

Leave a Reply

Your email address will not be published.


*