ರಾಜ್ಯ ಸುದ್ದಿ
ಮುಂಡಗೋಡ: ಕಣಜ ಮುಂಡಗೋಡ ವತಿಯಿಂದ ಸಂಗ್ರಹಿಸಿದ ಆಹಾರ ಕಿಟ್ಗಳನ್ನು ಬಡ ಕುಟಂಬಗಳಿಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು ವಿತರಿಸಿದರು.ತಾಲೂಕಿನ ಜೋಗಿಶ್ವರಹಳ್ಳ, ಜೇನುಮುರಿ, ಸಿರಗೇರಿ, ಚವಡಳ್ಳಿ, ಬ್ಯಾನಳ್ಳಿ, ಗ್ರಾಮಗಳಲ್ಲಿ ಅತೀ ಅವಶ್ಯ ಇರುವ ಕಡುಬಡವರಿಗೆ ಹಾಗೂ ಕೋವಿಡ್ ಸೊಂಕಿನಿಂದ ಬಳಲಿದವರಿಗೆ ಕಿಟ್ ಗಳನ್ನು ವಿತರಿಸಿದರು. ನಂತರ ಇತ್ತೀಚಿಗೆ ನಿಧನರಾದ ಬಿಜೆಪಿ ಯುವ ಮುಖಂಡರಾಗಿದ್ದ ಚವಡಳ್ಳಿ ಗ್ರಾಮದ ಕುಮಾರ ವಾಲ್ಮೀಕಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೆಳಿದರು.
ಈ ಸಂದರ್ಭದಲ್ಲಿ ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟಿಲ್, ಎಸ್.ಟಿ ಮೊರ್ಚಾ ಜಿಲ್ಲಾಧ್ಯಕ್ಷ ಸಂತೋಷ ತಳವಾರ, ವನವಾಸಿ ಕಲ್ಯಾಣದ ಕಾರ್ಯಕರ್ತ ಭಾಗು ಕಾತ್ರೋಟ್, ಹನುಮಂತ ವಾಲ್ಮೀಕಿ ಉಪಸ್ಥಿತರಿದ್ದರು.
Be the first to comment