ರಾಜ್ಯ ಸುದ್ದಿ
ಕಾರವಾರ: ದೇಶಾದ್ಯಂತ ಜೂ.21 ರಂದು ಮೆಗಾ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗುತ್ತಿದ್ದು, ಅದರ ಪ್ರಯುಕ್ತ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಕೂಡ ಕೋವಿಡ್ 19 ಲಸಿಕಾ ಮೇಳವನ್ನು ಆರಂಭಿಸುವ ಬಗ್ಗೆ ಕ್ರಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಕಾರವಾರದಲ್ಲಿ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ
45 ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳು, 2 ನೇ ಡೋಸಿಗೆ ಬಾಕಿಯಿರುವ ಫಲಾನುಭವಿಗಳು, ಭಾರತ ಸರಕಾರದ ವ್ಯಾಖ್ಯಾನದಂತೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು, ಆದ್ಯತಾ ಮತ್ತು ದುರ್ಬಲಗುಂಪಿನ ಫಲಾನುಭವಿಗಳು, ಪೊಲೀಸ್ ಇ ಲಾಖೆಯ ಸಿಬ್ಬಂದಿಗಳ 18 ವರ್ಷ ಮೇಲ್ಪಟ್ಟ ವಯೋಮಾನದ ಕುಟುಂಬ ಸದಸ್ಯರುಗಳಿಗೆ ಜಿಲ್ಲೆಯ ಒಟ್ಟು 211 ಲಸಿಕಾ ಕೇಂದ್ರಗಳಲ್ಲಿ ಸುಮಾರು 35,000 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದೆ.
Be the first to comment