ಕೊರೊನಾ ಲಸಿಕೆ ಆರೋಗ್ಯದ ರಕ್ಷಾಕವಚ ಹೆಡ್ ಸಂಸ್ಥೆಯಿಂದ ಲಸಿಕಾ ಅಭಿಯಾನ ಮತ್ತು ಸ್ವಚ್ಛತಾ ಕಾರ್ಯಕ್ರಮ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗ್ರಾಮೀಣ ಪ್ರದೇಶದಲ್ಲಿ ಹೆಡ್ಸ್ ಸಂಸ್ಥೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಳ್ಳಿ ಜನರಿಗೆ ಕೊರೊನಾ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳನಾರಾಯಣಸ್ವಾಮಿ ತಿಳಿಸಿದರು.

CHETAN KENDULI

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹೆಡ್ಸ್-ಆರೋಗ್ಯ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೋವಿಡ್ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊರೊನಾ ಹೆಮ್ಮಾರಿಯಿಂದ ಹೊರಬೇಕಾದರೆ ಲಸಿಕೆಯೊಂದೇ ರಕ್ಷಾಕವಚವಾಗಿದೆ. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಹೆಡ್ಸ್ ಆರೋಗ್ಯ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ. ಪ್ರತಿ ಹಳ್ಳಿಗಳಿಗೆ ಹೋಗಿ ಜನರಿಗೆ ಜಾಗೃತಿ ಮೂಡಿಸುವ ಜೊತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಹಾಗೂ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಹೆಡ್ಸ್ ಸಂಸ್ಥೆಯ ಆಪರೇಷನ್ ವ್ಯವಸ್ಥಾಪಕ ಮುರಳಿ ಮಾತನಾಡಿ, ಕಳೆದ ೩೦ ವರ್ಷದಿಂದ ಆರೋಗ್ಯದ ಹಿತದೃಷ್ಠಿಯಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮತ್ತು ಆರೋಗ್ಯದ ಪರವಾಗಿ ೨ ಲಕ್ಷ ಆರೋಗ್ಯ ಪರಿಕರ ಕಿಟ್‌ಗಳನ್ನು ವಿತರಿಸುವ ಕಾರ್ಯವಾಗುತ್ತಿದೆ. ೩೦ ಹಳ್ಳಿಗಳಲ್ಲಿ ೧೦ ಪಿಎಚ್‌ಸಿಯಲ್ಲಿ ವೈಯಕ್ತಿಕವಾಗಿ ಕೆಲಮಾಡಲಾಗುತ್ತಿದೆ. ಕೋವಿಡ್ ಟೆಸ್ಟ್, ವ್ಯಾಕ್ಸಿನೇಷನ್, ಜಾಗೃತಿ, ಮಾಸ್ಕ್ ಜಾಗೃತಿ, ಉಚಿತ ಮಾಸ್ಕ್ ವಿತರಣೆ, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಮವನ್ನು ಸಹ ಮಾಡಲಾಗುತ್ತಿದೆ ಹೀಗೆ ಆರೋಗ್ಯಕ್ಕೆ ಸಂಭಂಧಿಸಿದಂತೆ ಹಲವಾರು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹಲವಾರು ಗ್ರಾಮೀಣ ಭಾಗದ ಜನರು ಕೋವಿಡ್ ಪರೀಕ್ಷೆ ಮತ್ತು ಲಸಿಕೆಯನ್ನು ಪಡೆದುಕೊಂಡರು ಹಾಗೂ ಆರೋಗ್ಯ ತಪಾಸಣೆಗೆ ಆಗಮಿಸಿದ್ದ ಜನರಿಗೆ ಸಂಸ್ಥೆಯ ವತಿಯಿಂದ ಉಚಿತ ಸ್ಯಾನಿಟೈಸರ್, ೯೫-ಮಾಸ್ಕ್ ವಿತರಿಸಲಾಯಿತು.

ಈ ವೇಳೆಯಲ್ಲಿ ವಿಶ್ವನಾಥಪುರ ಪಿಎಚ್‌ಸಿಯ ಡಾ.ಕೀರ್ತಿ, ಡಾ.ಅಬ್ದುಲ್‌ಮುತಾಹೀರ್‌ಹಫೀಝ್, ಹೆಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎಸ್.ಎ.ನವೀನ್‌ಕುಮಾರ್, ಮುಖ್ಯಸ್ಥ ಪ್ರಕಾಶ್, ಕ್ಲಸ್ಟರ್ ವ್ಯವಸ್ಥಾಪಕರಾದ ಫೈರೋಜ್, ಮಂಜುಳ.ಎನ್, ಮುಖಂಡ ನಾರಾಯಣಸ್ವಾಮಿ, ವಿಶ್ವನಾಥಪುರ ಪಿಎಚ್‌ಸಿ ಹಾಗೂ ಹೆಡ್ಸ್ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು.

Be the first to comment

Leave a Reply

Your email address will not be published.


*