ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಬಾಗಲಕೋಟೆ ನಗರಸಭೆಯ ಪೌರ ಕಾರ್ಮಿಕರು, ವಾಹನ ಚಾಲಕರು, ವಾಟರ್‍ಮನ್, ಇಲೆಕ್ಟ್ರಿಕಲ್ ಹಾಗೂ ಇತರೆ ಸಿಬ್ಬಂದಿಗಳಿಗೆ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರ ವತಿಯಿಂದ ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.
ನಗರಸಭೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಗರವನ್ನು ಸ್ವಚ್ಛಗೊಳಿಸಿ ರೋಗಮುಕ್ತವಾಗಿಸುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ. ಸರಕಾರ ನೀಡುವ ಸಂಬಳದ ಜೊತೆಗೆ ಇತರರು ಕೊಡುವ ದಿನಸಿ ಕಿಟ್‍ಗಳನ್ನು ಪಡೆದುಕೊಂಡು ತಮ್ಮ ಕರ್ತವ್ಯ ಮಾಡುವದನ್ನು ಮರೆಯಬಾರದು. ಮೂರನೇ ಅಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಹಳೆಯ ಬಾಗಲಕೋಟೆ ಮುಳುಗಡೆ ಪ್ರದೇಶವನ್ನು 1.80 ಕೋಟಿ ರೂ.ಗಳ ಟೆಂಡರ್ ಕರೆದು ಸ್ವಚ್ಚಗೊಳಿಸಲಾಗಿದೆ. ಅಲ್ಲದೇ ಆ ಪ್ರದೇಶದಲ್ಲಿ 25 ರಿಂದ 30 ಸಾವಿರ ಗಿಡಗಳನ್ನು ಹಚ್ಚಲಾಗಿದೆ. ನೀರು ನಿಂತರು ಸಹ ಏನು ಆಗಲಾರದಂತಹ ಗಿಡಗಳನ್ನು ಹಚ್ಚಲಾಗಿದೆ. ಮುಳುಗಡೆಯಾದವರಿಗೆ ನವನಗರದಲ್ಲಿ ಜಾಗ ಕೊಟ್ಟಿದ್ದು, ಮನೆ ಕಟ್ಟಿ ಬಾಡಿಗೆ ಕೊಡುತ್ತಿದ್ದಾರೆ. ಅಲ್ಲಿಯೇ ವಾಸ ಮಾಡುತ್ತಿಲ್ಲ. ಎಲ್ಲಂದರಲ್ಲಿ ಒತ್ತುವ ಡಬ್ಬಿಗಳನ್ನು ಇಡುತ್ತಿದ್ದಾರೆ. ಸರಕಾರಿ ಜಾಗ ಒತ್ತುವರಿಯಾಗುತ್ತಿದೆ. ಇದನ್ನು ನಗರಸಭೆಯವರು ತಡೆಯುವ ಕೆಲಸವಾಗಬೇಕು. ನಗರ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಬಾಗಲಕೋಟೆ ನಗರದಲ್ಲಿ ವಾರ್ಡವಾರು ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಾರಂಭವಿಸಲಾಗುತ್ತಿದ್ದು, ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕಾರ್ಯ ನಡೆಯಲಿದ್ದು, ನಗರದ ಜನತೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು. ಲಸಿಕೆ ಪಡೆಯಲು ಬರುವವರು ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಂಡಲ್ಲಿ ರೋಗ ರುಜಿನಗಳು ದೂರವಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾದ್ಯಕ್ಷ ನಾಗರಾಜ ಅವರಾದಿ, ನಗರಸಭೆ ಸ್ಥಾಯಿ ಸಮಿತಿಯ ಸಭಾಪತಿ ರವಿ ದಾಮಜಿ, ಪೌರಾಯುಕ್ತರಾದ ಮುನಿಷಾಮಪ್ಪ, ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸ ಭಾಂಡಗೆ, ನಗರಸಭೆ ಸದಸ್ಯರು ಹಾಗೂ ನಗರದ ಗಣ್ಯರಾದ ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ, ರಾಜು ರೇವಣಕರ, ರಾಜು ನಾಯ್ಕರ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment