ನಿರಂತರವಾಗಿ ಜ್ವರದಿಂದ ಬಳಲುತ್ತಿರುವವರಿಗೆ ಆ್ಯಂಟಿಜನ್​​​​ ಟೆಸ್ಟ್ ಕಡ್ಡಾಯ: ಕೇಂದ್ರ ಆರೋಗ್ಯ ಸಚಿವಾಲಯ…!

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಬೆಂಗಳೂರು

ದೇಶದಲ್ಲಿ ಓಮಿಕ್ರಾನ್​ ಸೋಂಕು​​ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕೊರೋನಾ ಆ್ಯಂಟಿಜನ್​​​​ ಟೆಸ್ಟ್​ ಯಾರ್ಯಾರಿಗೆ ಕಡ್ಡಾಯವಾಗಿ ಮಾಡಬೇಕು ಎಂಬ ಲಿಸ್ಟ್ ರಿಲೀಸ್​ ಮಾಡಿದೆ.ಯಾರಲ್ಲೇ ಜ್ವರ ಕಾಣಿಸಿಕೊಂಡರೂ ಅಂತವರಿಗೆ ಪರೀಕ್ಷೆ ಮಾಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ. ಇದಲ್ಲದೇ ‘ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಜ್ವರಕ್ಕೆ ಬೇರೆ ಕಾರಣಗಳು ದೃಢಪಡದೇ ಇದ್ದರೆ, ಅಂತಹವರನ್ನು ಶಂಕಿತ ಕೋವಿಡ್‌ ರೋಗಿಗಳು ಎಂದು ಪರಿಗಣಿಸಿ. ಎಲ್ಲರನ್ನೂ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

CHETAN KENDULI

ಯಾರಿಗೆಲ್ಲಾ ಆ್ಯಂಟಿಜನ್​​ ಟೆಸ್ಟ್​..?

ನಿರಂತರವಾಗಿ ಜ್ವರದ ಲಕ್ಷಣ, ಜ್ವರಕ್ಕೆ ಬೇರೆ ಕಾರಣ ದೃಢಪಡದಿದ್ದರೆ, ಜ್ವರದ ಜತೆಗೆ ಕೆಮ್ಮು, ಗಂಟಲು ನೋವು ಇದ್ದವರು, ತಲೆ ನೋವು, ಬೆನ್ನು, ಮೈಕೈ ನೋವು, ಉಸಿರಾಟ ತೊಂದರೆ, ರುಚಿ ಮತ್ತು ವಾಸನೆ ಗ್ರಹಣ ಶಕ್ತಿ ಕುಸಿಯುವ ಲಕ್ಷಣ, ಈ ಎಲ್ಲಾ ಲಕ್ಷಣ ಇದ್ದವರು ಕೊರೋನಾ ಶಂಕಿತ ಸೋಂಕಿತರಾಗಿದ್ದು, ಕೋವಿಡ್ ಮಾದರಿಯಲ್ಲೇ ಟ್ರೀಟ್​ಮೆಂಟ್​ ಕೊಡಲು ಸೂಚನೆ ನೀಡಲಾಗಿದೆ.

Be the first to comment

Leave a Reply

Your email address will not be published.


*