ಜಿಲ್ಲಾ ಸುದ್ದಿಗಳು
ಹೊನ್ನಾವರ:
ತಾಲೂಕಿನ ಮಂಕಿ ಪೋಲೀಸ್ ಠಾಣಾ ವ್ಯಾಪ್ತಿಯ ಹೊಸಪಟ್ಟಣದ ಅಕ್ರಮ ಮರಳು ಸಂಗ್ರಹಿಸಿದ್ದು, ದಾಸ್ತಾನು ಮಾಡಲಾಗಿರುವ ಅಂದಾಜು 40 ಟನ್ ಮರಳನ್ನು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿ.ವೈ.ಎಸ್.ಪಿ ಮಾರ್ಗದರ್ಶನದಲ್ಲಿ , ಭಟ್ಕಳ ಸಿಪಿಐ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ, ಮಂಕಿ ಠಾಣಾ ಪೋಲೀಸರು ದಾಳಿ ಮಾಡಿ ದಾಸ್ತಾನು ಇಲಾಖಿತ ಮರಳು ಜಪ್ತು ಮಾಡಿ, ತಹಶೀಲ್ದಾರ್ ಸಮಕ್ಷಮ ಪರಿಶೀಲಿಸಿ, ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಮಂಕಿ ಪೋಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಅಧಿಕೃತ ಮರಳುಗಾರಿಕೆಗೆ ಅವಕಾಶ ಇಲ್ಲದಿದ್ದರೂ , ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಅಧಿಕಾರಿಗಳು ಆಗಾಗ ದಾಳಿ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ.
ವರದಿ-ಸುಚಿತ್ರಾ ನಾಯ್ಕ ಹೊನ್ನಾವರ
Be the first to comment