ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ ಅದ್ದೂರಿಯಾಗಿ ರಸಮಂಜರಿ ಕಾರ್ಯಕ್ರಮದೊಂದಿಗೆ ನೆರವೇರಿತು.ಈ ವೇಳೆ ಗ್ರಾಮದ 4 ನೇ ವಾರ್ಡಿನ ಸದಸ್ಯ ಮಹಾಲಿಂಗೇಶ ನಾಡಗೌಡರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದು ಚುನಾವಣಾ ವೇಳೆ ನುಡಿದಂತೆ ಈಗ ನಡೆದಿದ್ದಾರೆ.
ಕೆಲೂರ ಗ್ರಾಮದಲ್ಲಿ ಶ್ರೀ ಆಂಜನೇಯ ದೇವರ ದೇವಸ್ಥಾನದ ಕಾರ್ತಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ನಾವು ಮಾತನಾಡುವವರಲ್ಲ ಮಾತನಾಡದೆ ಕೆಲಸ ಮಾಡಿ ತೋರಿಸುವವರು.ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಮಾರುತೇಶ್ವರ ದೇವಸ್ಥಾನದ ಜಿರ್ನೋದ್ದಾರಕ್ಕಾಗಿ ಅನುದಾನ ತರುವುದಾಗಿ ತಿಳಿಸಿದ್ದು ಈಗ 2 ಲಕ್ಷ ಅನುದಾನ ಮಂಜೂರಿ ಮಾಡಿಸಲಾಗಿದೆ ಎಂದರು.ಶ್ರೀ ಮಾರುತೇಶ್ವರನ ಆಶಿರ್ವಾದ ನನ್ನ ಮೇಲಿರುವ ತನಕ ಗ್ರಾಮದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಪರಮ ಧರ್ಮ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯವನ್ನ ಮೇಘರಾಜ ಮಹಾಸ್ವಾಮಿಗಳು ಮುರನಾಳ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮುತ್ತಣ್ಣ ಹಂಡಿ, ಸಂಗಣ್ಣ ಬೆನಕನವಾರಿ,ಸಂಗಣ್ಣ ನಾಡಗೌಡರ, ಕರಿಯಪ್ಪ ತೋಟಗೇರ,ಮಾಸಪ್ಪ ಕಬ್ಬರಗಿ, ಹನಮಂತ ವಡ್ಡರ,ವಜಿರಪ್ಪ ಪೂಜಾರ, ಹುಲ್ಲಪ್ಪ ವಡ್ಡರ,ಸಿದ್ದಪ್ಪ ಕುಂಬಾರ,ಬಸಪ್ಪ ಹೊಳಗುಂದಿ, ಸಂಗಣ್ಣ ಬೆನಕನವಾರಿ,ಪಿಡ್ಡಯ್ಯ ಮುದಗಲ್ಲ,ಶಿವಯ್ಯ ಹೂಲಗೇರಿ, ಈರಯ್ಯ ಘಂಟಿಮಠ,ಗೌಡಪ್ಪ ಕೊಪ್ಪದ, ಮೈಲಾರೆಪ್ಪ ತುಂಬದ, ಉಪಸ್ಥಿತರಿದ್ದರು. ಮಲ್ಲು ತೋಟಗೇರ ನಿರೂಪಿಸಿದರು,ನಾಗರಾಜ ಶಡ್ಲಗೇರಿ ವಂದಿಸಿದರು.
Be the first to comment