ಜಿಲ್ಲಾ ಸುದ್ದಿಗಳು
ಶಿರಸಿ
ಕರ್ನಾಟಕ ಪಬ್ಲಿಕ್ ಶಾಲೆ ಬಿಳೂರು ಈ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸುಖುಬಾಯಿ ಪಂಡಿತ ಅವರನ್ನು ಎಲ್ಲ ಉಪನ್ಯಾಸಕರು ಹಾಗೂ ಶಿಕ್ಷಕರು ಸೇರಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ನಾಗರಾಜ ಗಾಂವಕರ ಮಾತನಾಡಿ ಸರಕಾರಿ ನೌಕರನಾದವನು ವಯೋಮಾನಕ್ಕನುಗುಣವಾಗಿ ನಿವೃತ್ತ ನಾಗಲೇಬೇಕು ಇದೊಂದು ರೇಲ್ವೆ ಪ್ರಯಾಣ ಇದ್ದ ಹಾಗೆ ಅವರವರ ಸ್ಟೇಷನ್ ಬಂದ ಮೇಲೆ ಇಳಿದು ಹೋಗಲೇ ಬೇಕು. ಆದರೆ ಪ್ರಯಾಣದ ಅವಧಿಯಲ್ಲಿ ನಾವು ಪಡೆದ ಸಂತೋಷ ಯಾವಾಗಲೂ ನಮ್ಮ ಜೊತೆ ಶಾಶ್ವತವಾಗಿ ಇರುತ್ತದೆ ಎಂದರು. ಹಾಗೂ ಸಖುಬಾಯಿ ಪಂಡಿತ್ ಅವರು ಒಬ್ಬ ಉತ್ತಮ ಉಪನ್ಯಾಸಕಿಯಾಗಿ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ವೇದಿಕೆಯ ಮೇಲೆ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ಶ್ರೀ ರಮೇಶ್ ನಾಯ್ಕ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಉದಯ್ ಹೆಗಡೆ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಭೈರವ ನಾಯ್ಕ್ ಇದ್ದರು. ವಿದ್ಯಾರ್ಥಿಗಳಾದ ಶರತ್, ಚೈತ್ರ, ತುಳಸಿ, ಹಾಗೂ ಅರ್ಪಿತಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಶ್ರೀಕೃಷ್ಣ ಹೆಗಡೆ, ಉಮೇಶ್ ನಾಯ್ಕ್, ಚಂದ್ರಶೇಖರ್ ಕುಂಶಿ, ಹಾಗೂ ಪ್ರಭು ಶಿರೂರು ಇವರು ಅನಿಸಿಕೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕುಮಾರಿ ಅಂಕಿತಾ ನಾಯ್ಕ್ ವಂದಿಸಿದರು
Be the first to comment