ಜಿಎಸ್‌ಟಿ ಹೆಸರಿನಲ್ಲಿ ಲಂಚ ವಸೂಲಿ : ಅಧಿಕಾರಿಗಳು ಎಸಿಬಿ ಬಲೆಗೆ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು

ಚಾಮರಾಜನಗರ

ಜಿಎಸ್‌ಟಿ ತೆರಿಗೆ ಪಾವತಿಸದ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆಯಿಟ್ಟು, ವಾಣಿಜ್ಯ ತೆರಿಗೆ ನಿರೀಕ್ಷಕರಿಬ್ಬರು ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ‌ ಎಂದು ತಿಳಿದು ಬಂದಿದೆ.ತೆರಿಗೆ ನಿರೀಕ್ಷಕರಾದ ಅವಿನಾಶ್ ಹಾಗೂ ರವಿಕುಮಾರ್ ಬಂಧಿತ ಅಧಿಕಾರಿಗಳು ಎಂದು ಗುರುತಿಸಲಾಗಿದೆ.

CHETAN KENDULI

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಆಟೋಪಾರ್ಟ್ಸ್ ಅಂಗಡಿಗೆ ಈ ಅಧಿಕಾರಿಗಳು ಭೇಟಿ ಕೊಟ್ಟು ಜಿಎಸ್‌ಟಿ ಕಟ್ಟದಿರುವ ಬಗ್ಗೆ ತಗಾದೆ ತೆಗೆದು ದಂಡ ಕಟ್ಟುವಂತೆ ನೋಟಿಸ್ ಕೊಟ್ಟಿದ್ದಾರೆ‌ ಎನ್ನಲಾಗಿದೆ. 

ನೋಟಿಸ್ ಸಂಬಂಧ ಅಂಗಡಿ ಮಾಲೀಕ ಜಿಎಸ್‌ಟಿ ಕಚೇರಿಗೆ ತೆರಳಿದ ವೇಳೆ, ಜಿಎಸ್‌ಟಿ ನೋಂದಣಿ ಮಾಡಿಸದಿರುವುದು ಮತ್ತು ಜಿಎಸ್‌ಟಿ ಹಣ ಕಟ್ಟದಿರುವ ನೋಟಿಸ್ ಕ್ಲೋಸ್ ಮಾಡಬೇಕೆಂದರೆ 10 ಸಾವಿರ ರೂ. ಲಂಚ ಕೊಡಬೇಕೆಂದು ಒತ್ತಾಯಿಸಿದಾಗ ಮಾಲೀಕ ಎಸಿಬಿ ಮೊರೆ ಹೋಗಿದ್ದಾರೆ. ಅಧಿಕಾರಿಗಳು 7 ಸಾವಿರ ರೂ‌. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದು, ಸದ್ಯ ಇಬ್ಬರನ್ನೂ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

Be the first to comment

Leave a Reply

Your email address will not be published.


*