ಸದಾಶಿವ ಆಯೋಗ ವಿರೋಧಿಸಿ ತಹಶೀಲ್ದಾರ್ ಮೂಲಕ ಮನವಿ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಭಾರತ ಸಂವಿಧಾನದ ಮೂಲ ಆಶಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಸಂರಕ್ಷಣೆಗಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಶ್ರಮಿಸುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಸಮಸ್ತ ಜನಸಮುದಾಯಗಳ ಐಕ್ಯತೆಗಾಗಿ ನಮ್ಮ ಒಕ್ಕೂಟ ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ರೂಪಿಸುತ್ತ ಬರುತ್ತಿದೆ. ಇತ್ತೀಚೆಗೆ ಪರಿಶಿಷ್ಟ ಜಾತಿಗಳ ಮಧ್ಯ ಮನಸ್ತಾಪಗಳನ್ನು ಬಿತ್ತುವಾಗ ದಾರ್ಶನಿಕರು ಮತ್ತು ಸಮುದಾಯದ ನಾಯಕರು ಅವಹೇಳನ ಮಾಡುವ ಕೆಲಸಗಳನ್ನು ದುರುದ್ದೇಶ ತರು ಮಾಡುತ್ತಿದ್ದಾರೆ.ದೇಶದ ಸಾಮಾಜಿಕ ಚರಿತ್ರೆಯನ್ನು ಅರಿಯದವರು ಅವರು ಭೋವಿ, ಬಂಜಾರ, ಕೊರಮ, ಕೊರಚ ಇತ್ಯಾದಿ ಅಲೆಮಾರಿ ಜಾತಿಗಳ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

CHETAN KENDULI

ತಲತಲಾಂತರಗಳಿಂದ ನಮ್ಮ ಭೋವಿ,ಬಂಜಾರ, ಕೊರಮ, ಕೊರಚ ಇತ್ಯಾದಿ ಅಲೆಮಾರಿ ಜಾತಿ ಸಮುದಾಯಗಳು ಕೂಡ ಅಸ್ಪೃಶ್ಯತೆ ತಾರತಮ್ಯ ಸುಳ್ಳು ಅಪರಾಧಿಕ ಕಳಂಕ ದೌರ್ಜನ್ಯ ವಂಚನೆಗೆ ಬಲಿಯಾಗುತ್ತಲ್ಲೇ ಬಂದಿವೆ. ಆ ಕಾರಣದಿಂದಾಗಿಯೇ ಈ ಭೂಮಿ ಬಂಜಾರ ಕೊರಮ ಕೊರಚ ಇತ್ಯಾದಿಗಳನ್ನು ಒಳಗೊಂಡಂತೆ 19 135 ರಲ್ಲಿ ಮೈಸೂರು ರಾಜ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುತುವರ್ಜಿಯಿಂದಾಗಿ ಡಿಪ್ರೆಸ್ಡ್ ಕ್ಲಾಸ್ (ದಮನಿತ ಜಾತಿಗಳ) ಪಟ್ಟಿಯಲ್ಲಿ ಸೇರಿಸಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಸ್ವಾತಂತ್ರ್ಯ ನಂತರ ಅಂದರೆ ಹತ್ತೊಂಬತ್ತು ನೂರ ಐವತ್ತು ರಲ್ಲಿ ಭಾರತ ಒಕ್ಕೂಟ ಸರ್ಕಾರದ ಸಂಸತ್ತು ಬೋವಿ ಬಂಜಾರ ಗುರು ಮಧ್ವಚರ್ಯ ಮಾದಿಗ ಸೇರಿದಂತೆ ಅಲೆಮಾರಿ ಜಾತಿಗಳನ್ನು ಒಳಗೊಂಡು ದೇಶದ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಅನುಮೋದಿಸಿ ನೋಟಿಫಿಕೇಶನ್ ಮಾಡಿತು. ಮಾನ್ಯ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಸೇರಿದಂತೆ ದೇಶದ ಎಲ್ಲ ತಜ್ಞರು ಇದನ್ನು ಅನುಮೋದನೆ ಮಾಡಿದ್ದರು. ಮೊದಲಿಗೆ ಬೆರಳೆಣಿಕೆಯಷ್ಟು ಇದ್ದ ಪರಿಶಿಷ್ಟ ಜಾತಿಗಳ ಪಟ್ಟಿ ರಾಜ್ಯದ ಏಕೀಕರಣ,ಪ್ರಾದೇಶಿಕ ಮಿತಿಯ ಸಡಿಲಿಕೆ ಮತ್ತು ಸಮಾನಾಂತರ ಪದಗಳ ಸೇರ್ಪಡೆಯಿಂದ ಹಿಂದೂ 101ಕ್ಕೆ ಏರಿದೆ ಚಾರಿತ್ರಿಕ ಸತ್ಯ.

ನಿರಂತರವಾಗಿ ಅಪಮಾನ ಮತ ಅವಕಾಶಗಳಿಂದ ವಂಚಿತರಾಗಿದ್ದ ಈ ಜಾತಿಗಳು ಭಾರತದ ಸಂವಿಧಾನ ಮಿಸಲಾತಿ ಮತ್ತು ನಮ್ಮ ಸರ್ಕಾರಗಳ ಕೆಲ ಜನಮುಖಿ ಕಾರ್ಯಗಳಿಂದಾಗಿ ಪ್ರಯತ್ನಿಸುತ್ತಿವೆ. ಸರ್ಕಾರಗಳಿಂದ ಇನ್ನಷ್ಟು ಜನಪರ ಕಾರ್ಯಗಳ ಜಾರಿಗಾಗಿ ಐಕ್ಯ ಪ್ರಯತ್ನ ಅಗತ್ಯವಿದೆ.ಈ ಮಧ್ಯೆ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ಪರಿಶಿಷ್ಟ ಸಮುದಾಯವನ್ನು ಚಿತ್ರ ಗೊಳಿಸುವ ಮತ್ತು ಅವುಗಳಲ್ಲಿ ಪರಸ್ಪರ ದ್ವೇಷ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ.

ಸೋರಿಕೆಯಾಗಿರುವ ನ್ಯಾಯಮೂರ್ತಿ .ಎ .ಜೆ ಸದಾಶಿವ ಆಯೋಗದ ವರದಿಯಲ್ಲಿ ಕೆಲವು ಅಂಶಗಳನ್ನು ಪರಿಶಿಷ್ಟ ಜಾತಿಗಳ ಮಧ್ಯೆ ಅನೇಕ ಗೊಂದಲಗಳನ್ನು ಸೃಷ್ಟಿಸಿವೆ. ಆಯೋಗದ ವರದಿಯ ಅಂಕಿಅಂಶಗಳು ಸಂಬಂಧಿತ ಜಾತಿಗಳನ್ನು ಗುಂಪುಗಳನ್ನು ವರ್ಗೀಕರಿಸುವ ವಿಧಾನ ಮತ್ತು ಬಳಸಿರುವ ಮಾನದಂಡ ಸಮುದಾಯಗಳ ವ್ಯಾಖ್ಯಾನ ಸ್ಥಿತಿಗತಿಗಳ ದಾಖಲೀಕರಣ ಇತ್ಯಾದಿ ಅಂಶಗಳು ಅಸಂವಿಧಾನಿಕವಾಗಿವೆ. ಬಂಜಾರ, ಬೋವಿ, ಛಲುವಾದಿ, ಕೊರಚ, ಕೊರಮ ಮತ್ತು ಅಲೆಮಾರಿ, ಅರೆಅಲೆಮಾರಿ ಸಮುದಾಯಗಳನ್ನು ವಿನಾಕಾರಣ ಕಟಕಟೆಯಲ್ಲಿ ನಿಲ್ಲಿಸಲು ಮಾಡಿರುವ ಪ್ರಯತ್ನದಂತೆ ಇದು ಕಂಡುಬರುತ್ತದೆ. ಸಿಬ್ಬಂದಿ ಸೌಲಭ್ಯ ಅನುದಾನ ಕೊರತೆಯನ್ನು ಎದುರಿಸುತ್ತಿದ್ದಾರೆ ನ್ಯಾಯಮೂರ್ತಿ. ಎ .ಜೆ ಸದಾಶಿವ ಆಯೋಗ ಪಾರದರ್ಶಕ ಸಮೀಕ್ಷೆ ಮತ್ತು ವೈಜ್ಞಾನಿಕ ಅಧ್ಯಯನದ ಶಿಫಾರಸ್ಸು ಮಾಡಿಸಲು ಸಾಧ್ಯವಿಲ್ಲ.

ತನ್ನ ರಚನಾ ಉದ್ದೇಶಕ್ಕೆ ವಿರುದ್ಧವಾಗಿ ನ್ಯಾಯಮೂರ್ತಿ. ಎ. ಜೆ ಸದಾಶಿವ ಆಯೋಗ ಅಸಂವಿಧಾನಿಕ ಶಿಫಾರಸುಗಳನ್ನು ಮಾಡಿರುವುದು ತಿಳಿಯುತ್ತದೆ. ಅಗತ್ಯ ಸೌಲಭ್ಯ ಒದಗಿಸಿಲ್ಲ, ಅನುದಾನದ ಕೊರತೆಯಿದೆ ಎಂದು ಹೇಳುತ್ತಲೇ ಧಿಡೀರ್ ಎಂದು ಅಂದಿನ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಿದ ಆಯೋಗದ ನಡೆ ಪ್ರಶ್ನಾರ್ಹವಾಗಿದೆ.ಸಹಬಾಳ್ವೆ ಹಿಂದಿರುವ ಸಹೋದರ ಸಮುದಾಯಗಳಲ್ಲಿ ಈ ಆಯೋಗವು ಎಡ-ಬಲ ಅಸ್ಪೃಶ್ಯ ಇತ್ಯಾದಿ ಅಸಂವಿಧಾನಿಕ ಶಬ್ದಗಳ ಬಳಕೆಯಿಂದಾಗಿ ಪರಿಶಿಷ್ಟ ಜಾತಿಗಳ ಮಧ್ಯೆ ಕಂದಕವನ್ನು ಸೃಷ್ಟಿಸಿದೆ. ಹೀಗಾಗಿ ಈ ವರದಿ ಈಗ ಅಪ್ರಸ್ತುತ ಎಂದು ಬಸವರಾಜ್ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಮಸ್ಕಿ ತಾಲೂಕ ದಂಡಾಧಿಕಾರಿಗಳಾದ ಆರ್.ಕವಿತಾ ಕೆ. ಎ. ಎಸ್ ಇವರ ಮೂಲಕ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಮನವಿ ಮಾಡಿತು.ಈ ವೇಳೆಯಲ್ಲಿ

ದುರುಗಪ್ಪ ಚಿಗಿರಿ ಅಧ್ಯಕ್ಷರು ಭೋವಿ ಸಮಾಜ, ದೇವಣ್ಣ ಜಾದವ್ ಕಾರ್ಯಧ್ಯಕ್ಷರು ಬಂಜಾರ ಸಮುದಾಯ, ನೀಲಕಂಠಪ್ಪ ಬಜಂತ್ರಿ ಅಧ್ಯಕ್ಷರು ಭಜಂತ್ರಿ ಸಮಾಜ, ಹುಸೇನಪ್ಪ ಜಿಲ್ಲಾಧ್ಯಕ್ಷರು ಸುಡುಗಾಡು ಸಿದ್ದರ ಸಮಾಜ, ಹುಸೇನಪ್ಪ ಅಧ್ಯಕ್ಷರು ಅಲೆಮಾರಿ ಬುಡ್ಗ ಜಂಗಮ, ತಿರುಪತಿ ಅಧ್ಯಕ್ಷರು ಚನ್ನದಾಸರು ಸಮಾಜ, ಮಲ್ಲಯ್ಯ ಗುಡಿಸಲು, ಮಲ್ಲಯ್ಯ ನಾಗರಾಳ, ವೀರೇಶ್ ಆನೆಹೊಸುರು,ದುರುಗಪ್ಪ ನಾಗರಬೆಂಚಿ, ಹನುಮಂತ ನಾಗರಹಾಳ ಸೇರಿದಂತೆ ವಿವಿಧ ಸಮುದಾಯದ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*