ಯರಝರಿ ಗ್ರಾಪಂಯ ಚುನಾವಣಾ ಕಣದಲ್ಲಿ 19 ಅಭ್ಯರ್ಥಿಗಳು…!!! ಅವಿರೋಧ ಆಯ್ಕೆಯಾದ ಸದಸ್ಯರಿಂದ ಯಾವುದೇ ಕಪ್ಪುಕಾಣಿ ಸ್ವೀಕರಿಸದ ಸಮಾಜ ಭಾಂದವರು: ಚುನಾವಣಾ ಆಯೋಗದ ನಿಯಮ ಪಾಲನೆ ಮಾಡಿದ ಗ್ರಾಮದ ಹಿರಿಯರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ

ಜಿಲ್ಲಾ ಸುದ್ದಿಗಳು

CHETAN KENDULI

 

ಮುದ್ದೇಬಿಹಾಳ ಡಿ.16:

ಸಸತ ಮೂರು ಅವಧಿಯಲ್ಲಿಯೂ ಗ್ರಾಮದ ಹಿರಿಯರ ಸಮಕ್ಷಮದಲ್ಲಿ ಯರಝರಿ ಪಂಚಾಯತಿಯ ಯರಝರಿ ಗ್ರಾಮದ 5 ವಾರ್ಡನಲ್ಲಿ ಅವಿರೋಧವಾಗಿ ಸದಸ್ಯರನ್ನು ಆಯ್ಕೆಯಾಗುತ್ತಾ ಬಂದಿದ್ದು ಈ ಬಾರಿ 4 ವಾರ್ಡನಲ್ಲಿ ಮಾತ್ರವೇ ಅವಿರೋಧ ಆಯ್ಕೆಯಾಗಿದ್ದು ಯರಝರಿ-01 ಕ್ಷೇತ್ರವು ಚುನಾವಣಾ ಅಖಾಡಕ್ಕೆ ಇಳಿದು ಮೂವರ ಅಭ್ಯರ್ಥಿಗಳ ಅಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಅವಿರೋಧ ಆಯ್ಕೆಗೊಂಡ 6 ಕ್ಷೇತ್ರದ 10 ಅಭ್ಯರ್ಥಿಗಳು:
ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮ ಪಂಚಾಯತಿಯ ಒಟ್ಟೂ 18 ಸ್ಥಾನಗಳಲ್ಲಿ ಯರಕ್ಷೇತ್ರ-1ರಲ್ಲಿ ಪೂಜಾ ಮಂಜುನಾಥ ಗುರಿಕಾರ, ಸೀತವ್ವ ಸಂಗಪ್ಪ ಬಜಂತ್ರಿ, ಯರಝರಿ ಕ್ಷೇತ್ರ-02ರಲ್ಲಿ ಅಮೀನಪ್ಪ ಶಿವಪ್ಪ ಗಡೇದ, ಮಲ್ಲಮ್ಮ ರಾಮಣ್ಣ ಗುರಿಕಾರ, ಲಕ್ಷö್ಮಣ ಸಂಗಪ್ಪ ಯಲಗೋಡ, ನಾಗರಾಳ ಕ್ಷೇತ್ರದಿಂದ ಅಕ್ಕಮ್ಮ ಶಂಕರಗೌಡ ಬಿರಾದಾರ, ಚಿರ್ಚಿನಕಲ್ಲ ಕ್ಷೇತ್ರದಿಂದ ಸುಮಿತ್ರಾ ರಾಮನಗೌಡ ಪಾಟೀಲ, ಕಂದಗನೂರ ಕ್ಷೇತ್ರದಿಂದ ಮಹಾದೇವಿ ಶಂಕ್ರಪ್ಪ ಶಿವಣಗಿ, ಯಲ್ಲಮ್ಮ ಬಸಪ್ಪ ತಳವಾರ, ಮುದೂರ ಕ್ಷೇತ್ರದಿಂದ ಸಂಗಪ್ಪ ಬಸಪ್ಪ ಕಾಡಮಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚುನಾವಣಾ ಕಣದಲ್ಲಿರುವ 8 ಸ್ಥಾನಗಳಲ್ಲಿ 19 ಅಭ್ಯರ್ಥಿಗಳು:
ಯರಝರಿ ಗ್ರಾಮ ಪಂಚಾಯತಿಯ ಯರಝರಿ ಕ್ಷೇತ್ರ-01ರಲ್ಲಿ ತಮ್ಮನಗೌಡ ನಾಗಪ್ಪ ಹುಲ್ಲೂರ, ರೇವಸಿದ್ದಪ್ಪ ಸಾಬಣ್ಣ ಗುರಿಕಾರ ಹಾಗೂ ಶರಣಪ್ಪ ಯಮನಪ್ಪ ಮ್ಯಾಗೇರಿ, ಹಂಡರಗಲ್ಲ ಕ್ಷೇತ್ರದ ಮೂರು ಸ್ಥಾನಗಳಿಗೆ ಮಹ್ಮದ ಇಬ್ರಾಹಿಂ ಅಬ್ದುಲ್‌ರಜಾಕ ಮಾಗಿ, ಯಮನಪ್ಪ ನಾಗಪ್ಪ ಗಡೇದ, ರಾಜೇಶ್ವರಿ ಮಹಾಂತಗೌಡ ಬಿರಾದಾರ, ಸದಾನಂದ ಚಂದಪ್ಪ ವಾಲಿಕಾರ, ಸಾವಿತ್ರಿ ಮಾನಪ್ಪ ಬಡಿಗೇರ, ಸೋಮಣ್ಣ ಉರ್ಫ ಸೋಮಪ್ಪ ಮಂಗಳಪ್ಪ ತುರಡಗಿ, ಚಿರ್ಚಿನಕಲ್ಲ ಕ್ಷೇತ್ರದಿಂದ ಸಂಗಪ್ಪ ಶಂಕ್ರೆಪ್ಪ ಜೂಡಿ, ಸುರೇಶ ಸಂಗಪ್ಪ ಚೌಧರಿ, ಕಂದಗನೂರ ಕ್ಷೇತ್ರದಿಂದ ಅಮೀನಾ ರಾಜಾಭಕ್ಷ ಮೊಕಾಶಿ, ಹುಚ್ಚೇಸಾಬ ಹುಸೇನಸಾಬ ಬೆಣ್ಣೂರ, ಮುದೂರ ಕ್ಷೇತ್ರದ 2 ಸ್ಥಾನಗಳಿಗೆ ಬಸಪ್ಪ ಜುಮ್ಮಪ್ಪ ಚಲವಾದಿ, ಬಸಮ್ಮ ಗುರುಪಾದಪ್ಪ ಕೋಲಕಾರ, ಬಸವರಾಜ ಲಕ್ಷö್ಮಣ ಮುದೂರ, ಸವಿತಾ ಶಿವಣ್ಣ ಕಟಗೂರ, ಸುರೇಶ ಶೆಟ್ಟೆಪ್ಪ ಚವ್ಹಾಣ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.

Be the first to comment

Leave a Reply

Your email address will not be published.


*