ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಅನಿವಾರ್ಯ; ಆರ್.ವಿ.ದೇಶಪಾಂಡೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಜೋಯಿಡಾ: ಆನ್ಲೈನ್ ಶಿಕ್ಷಣ ಆರೋಗ್ಯ ಹಾಗೂ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಆದರೆ ಇಂದು ಅನಿವಾರ್ಯವಾಗಿದೆ, ಕೋವಿಡ್ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಪ್ಪು ಮಾಡಿವೆ ನಿಜ ಆದರೆ ಅದು ಈಗ ಚರ್ಚೆಯ ವಿಷಯವಲ್ಲ, ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿ ಕೊಳ್ಳಬೇಕು ಎಂದು ಶಾಸಕ ಆರ್ ವಿ ದೇಶಪಾಂಡೆ ಹೇಳಿದರು.

ಅವರು ಮಂಗಳವಾರ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರಥಮ ವರ್ಷದ ಹಾಗೂ ಡಿಪ್ಲೋಮಾ  ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಟ್ಯಾಬ್ಲೆಟ್ ಪಿಸಿ ಗಳನ್ನು ವಿತರಿಸಿ ಮಾತನಾಡುತ್ತಿದ್ದರು.ಈ ತಂತ್ರಜ್ಞಾನ ಆಧಾರಿತ ಯುಗದಲ್ಲಿ ವಿದ್ಯಾರ್ಥಿಗಳು ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ಉಜ್ವಲ ಭವಿಷ್ಯಕ್ಕೆ ಬಳಸಿ ಕೊಳ್ಳಬೇಕು, ಜೀವನದ ಯಶಸ್ಸಿಗೆ ಒಳ್ಳೆಯ ಆರೋಗ್ಯ ಮುಖ್ಯ ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು, ರಾಷ್ಟದ ಅಭಿಮಾನಕ್ಕೆ, ಬೆಳವಣಿಗೆಗೆ ಇದು ಸಹಕಾರಿ ಆದ್ದರಿಂದ ನಾವು ರಾಷ್ಟ್ರದ ಆಸ್ತಿ ಆಗಬೇಕೆ ಹೊರತು ಭಾರ ಅಲ್ಲ, ಎಲ್ಲರಿಗೂ ಇಲ್ಲಿ ಉಜ್ವಲ ಭವಿಷ್ಯ ಇರುವುದರಿಂದ ಜೀವನದಲ್ಲಿ ದೂರದ್ರಷ್ಟಿ ಇರಬೇಕು, ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಬೇಕು ಜೊಯಿಡಾ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಸೌಲಭ್ಯಗಳು ನಗರ ಪ್ರದೇಶದ ಕಾಲೇಜುಗಳಲ್ಲಿ ಇಲ್ಲ ಎಂದು ಅವರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 60 ಹಾಗೂ ಪಾಲಿಟೆಕ್ನಿಕ್ ಕಾಲೇಜಿನ 265 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಟ್ಯಾಬ್ಲೆಟ್ ಪಿಸಿ ಗಳನ್ನು ಈ ವರ್ಷ ವಿತರಿಸಲಾಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ ಎಸ್ ಎಸ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ರಮೇಶ್ ನಾಯ್ಕ, ಸಂಜಯ ಹಣಬರ, ಜೋಯಿಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರುಣ್ ಕಾಂಮ್ರೆಕರ, ತಹಸೀಲ್ದಾರ್ ಸಂಜಯ ಕಾಂಬಳೆ, ತಾಪಂ ಇಒ ಆನಂದ ಬಡಕುಂದ್ರಿ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*