ಹೊನ್ನವರದಲ್ಲಿ ದಿ.ದೇವರಾಜು ಅರಸು ದಿನಾಚರಣೆ ಆಚರಣೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ದೇಶದಲ್ಲಿ ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ದಿ, ದೇವರಾಜ ಅರಸುರವರ ಚಿಂತನೆಗಳು ಹಾಗೂ ಅವರ ಪ್ರಮುಖ ಯೋಜನೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ತಿಳಿಸಿದರು.ಅವರು ಶುಕ್ರವಾರ ಹೊನ್ನಾವರದಲ್ಲಿ ತಾಲ್ಲೂಕು ಪಂಚಾಯತ ಹೊನ್ನಾವರ, ಪಟ್ಟಣ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದಲ್ಲಿ ಎರ್ಪಡಿಸಿದ ದಿ. ದೇವರಾಜ ಅರಸುರವರ ೯೬ನೇ ಜನ್ಮ ದಿನಾಚರಣೆಯಲ್ಲಿ ಅರಸುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಹಲವು ರಾಜ್ಯಗಳಲ್ಲಿ ತುಂಬಾ ನಕ್ಸಲೆಟರ್ ಹಾವಳಿಯಿದೆ. ಆದರೆ ನಮ್ಮ ರಾಜ್ಯವು ಹೆಚ್ಚಿನ ಅರಣ್ಯ ಹೊಂದಿದರು ಭೂಮಿಗಾಗಿ ನಕ್ಸಲೆಟ್‌ರಿಂದ ನಮಗೆ ತೊಂದರೆಯಾಗಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಉತ್ತಮವಾದ ಸೌಲಭ್ಯಗಳು ದೊರೆಯುತ್ತಿವೆ, ಇವುಗಳಿಗೆಲ್ಲ ಅರಸುರವರ ದೂರದರ್ಶಿತ್ವವೆ ಕಾರಣ ಎಂದರು. ಕೇವಲ ಅವರ ಜನ್ಮ ದಿನದ ಆಚರಣೆಗಳನ್ನು ಮಾಡಿದರೆ ಸಾಲದು ಅವರ ಆದರ್ಶಗಳನ್ನು ನಾವು ಪಾಲಿಸಿ ಅವರನ್ನು ಗೌರವಿಸಬೇಕಾಗಿದೆ ಎಂದರು.

CHETAN KENDULI

ವೇದಿಕೆಯಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಬಿ ಆರ್ ಸಿ ಸಮನ್ವಯಾಧಿಕಾರಿ ಎಸ್ ಎಮ್ ಹೆಗಡೆ ತಾಲ್ಲೂಕ ವೈದ್ಯಾಧಿಕಾರಿ, ಡಾ ಉಷಾ ಹಾಸ್ಯಗಾರ, ತಾಲ್ಲೂಕ ಹಿಂದುಳಿದ ವರ್ಗಗಳ ಇಲಾಕೆಯ ವಿಸ್ತರಣಾಧಿಕಾರಿ ರಾಜು ನಾಯ್ಕ, ನಿಲಯ ಮೇಲ್ವಿಚಾರಕ ಜಗದೀಶ ನಾಯ್ಕ ಮಂಕಿ, ಮುಂತಾದವರು ಉಪಸ್ಥಿತರಿದ್ದರು. ಕ್ರೀಡಾ ಹಾಗೂ ಯುವಜನಾಧಿಕಾರಿ ಸುಧೀಶ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

Be the first to comment

Leave a Reply

Your email address will not be published.


*