ಭಟ್ಕಳ ತಾಲೂಕಿನ ಮುಂಡಳ್ಳಿ ಯ ನ್ಯಾಯ ಬೆಲೆ ಅಂಗಡಿ (ರೇಷನ್ ಅಂಗಡಿ)ಯಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ : ಗ್ರಾಮಸ್ತರಿಂದ ತಹಸೀಲ್ದಾರ್ ಗೆ ದೂರು

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮಪಂಚಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ್ಯಾಯಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುತ್ತಾರೆ , ತನಿಖೆ ನಡೆಸಿ ಕ್ರಮ ಕೈಗೊಳಬೇಕೆಂದು ಎಂದು ಗ್ರಾಮಸ್ತರಾದ ನಾಗರಾಜ್ ಬಿಳಿಯ ದೇವಾಡಿಗ ದಿನಾಂಕ 24/7/21 ರಂದು ತಹಸೀಲ್ದಾರ್ರಿಗೆ ದೂರು ನೀಡಿರುತ್ತಾರೆ.ದಿನಾಂಕ 15/7/21 ರಂದು ಮುಂಡಳ್ಳಿ ಗ್ರಾಮಪಂಚಯತ್ ಅಧ್ಯಕ್ಷರು ಮುಂಡಳ್ಳಿ ನ್ಯಾಯಬೆಲೆ ಅಂಗಡಿಯ ಗುಮಾಸ್ತ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನಡೆಸಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸುವಂತೆ ಗ್ರಾಮಪಂಚಯತ್ ಪರವಾಗಿ ತಾಲೂಕ ತಹಸೀಲ್ದಾರಿಗೆ ಮನವಿ ನೀಡಿರುತ್ತಾರೆ.

CHETAN KENDULI

ಗ್ರಾಮಸ್ತರಾದ ನಾಗರಾಜ್ ಬಿಳಿಯ ದೇವಡಿಗ ಅವ್ರು ಮುಂಡಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತರಾಗಿ ಕಾರ್ಯನಿರವಹಿಸುತ್ತಿರುವ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ್ಯಾಯ ಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುತ್ತಾರೆ, ಮುಂಡಳ್ಳಿ ನ್ಯಾಯಬೆಲೆ ಅಂಗಡಿಯ ,ಸಾಮಗ್ರಿಗಳನ್ನು ಮತ್ತು ದಾನ್ಯಗಳನ್ನು ಕದ್ದು ಹೊರಗಡೆ ಮಾರುಕಟ್ಟೆ ಯಲ್ಲಿ ಮಾರಾಟ ಮಾಡುತ್ತಾರೆ, ಮೀನುಗಾರರಿಗೆ ದೋಣಿಯ ಸೀಮೆ ಎಣ್ಣೆ ಯನ್ನು ಸರಕಾರ ನಿಗದಿಪಡಿಸಿದ ಲೀಟರ್ ಎಣ್ಣೆಗಿಂತ 10 ಲೀಟರ್ ಎಣ್ಣೆ ಕಡಿಮೆ ನೀಡುತ್ತಾರೆ, ಇವನು ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯುತಿಲ್ಲ, ಈತನು ಮುಂಡಳ್ಳಿ ಗ್ರಾಮಪಂಚಯತ್ ನ ಹಾಲಿ ಸದಸ್ಯನಾಗಿದ್ದು ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ, ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರಿಯುತಿಲ್ಲ ಎಂದು ತಹಸೀಲ್ದಾರ್ರಿಗೆ ತನಿಖೆ ನೆಡೆಸುವಂತೆ ದೂರು ನೀಡಿರುತ್ತಾರೆ.


ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ಮತ್ತು ಅವ್ಯವಹಾರವನ್ನು ಯಾರಾದರೂ ಗ್ರಾಮಸ್ಥರು ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಹತ್ತಿರ ಪ್ರಶ್ನೆ ಮಾಡಿದರೆ ಈತನು ತನ್ನ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತ ಜನರನ್ನು ಬೆದರಿಸುವುದು ಮತ್ತು ಜನರಿಗೆ ಹೊಡೆಯುವುದು ಮಾಡುತ್ತಾನೆ, ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಯ್ಕ್ ಹಲವು ದುಷ್ಟ ಜನರ ಗೂಂಡಾಪಡೆಯನ್ನು ಕಟ್ಟಿಕೊಂಡಿರುತ್ತಾರೆ, ಯಾರಾದರೂ ನಾಯಯಬೇಳೆ ಅಂಗಡಿಯಲ್ಲಿ ನಡೆಯುವ ಅವ್ಯವಹಾರ ಪ್ರಶ್ನೆ ಮಾಡಿದರೆ ತನ್ನ ಗೂಂಡಾ ಪಡೆಗಳೊಂದಿಗೆ ಅವರ ಮನೆಗೆ ಹೋಗಿ ಹೊಡೆದುಬಡಿದು ಧಮ್ಕಿ ಹಾಕುತ್ತಾರೆ, ಕರೋನ ಸಮಯದಲ್ಲಿ ತನ್ನ ಮನೆಯಲ್ಲಿ ನ್ಯಾಯಬೆಲೆ ಅಂಗಡಿ ಸಾಮಾನುಗಳನ್ನು ಜನರಿಗೆ ಮಾರಾಟ ಮಾಡಿರುತ್ತಾರೆ, ನಿಪಕ್ಷಪಾತವಾಗಿ ತಹಶೀಲ್ದಾರರು ತನಿಖೆ ನಡೆಸುವಂತೆ ಮನವಿ ಮಾಡಿದಾರೆ.

ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಗುಮಾಸ್ತರದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ ಅವ್ಯವಹಾರ ಮತ್ತು ಭ್ರಷ್ಟಾಚಾರ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಂಡಳ್ಳಿ ಪಂಚಾಯತ್ ಸದಸ್ಯರಾದ ರಾಜು ಲಚಮಯ್ಯ ನಾಯ್ಕ ಪಂಚಾಯತ್ ವತಿಯಿಂದ ತಹಶೀಲ್ದಾರರಿಗೆ ಮನವಿ ನೀಡಿ ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ , ಅಧಿಕಾರಿಗಲ ಈ ನಡೆ ನೋಡಿದರೆ ತಮಗೆ ಅಧಿಕಾರಿಗಳು ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಮೂಡುತಡೆ ಎಂದು ಆರೋಪಿಸಿದ್ದಾರೆ.

Be the first to comment

Leave a Reply

Your email address will not be published.


*