ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ತನ್ನ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆಗಳಿದ್ದರೂ ಸಮಾಜಮುಖಿಯಾಗಿ ಕೆಲಸ ಮಾಡುವವರಲ್ಲಿ ಶರಣು ಬೂದಿಹಾಳಮಠ ಅವರೋಬ್ಬರು. ಶೃಂಗರಾಗೌಡ್ರು ಆಗಲಿಕೆ ಮುದ್ದೇಬಿಹಾಳದ ಒಂದು ಕಣ್ಣು ಹೋದಂತಾಗಿದ್ದು ಈಗಾ ಎರಡನೇ ಕಣ್ಣು ಕಳೆದುಕೊಂಡಂತಾಗಿದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ವಿವಿಧ ಗಣ್ಯರು ಹಾಗೂ ಸಮಾಜದಿಂದ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಜಾತಿ ಬೇಧ ಮಾಡದೇ ಎಲ್ಲರೂ ನನ್ನವರೇ ಎಂದು ತಿಳಿದು ತಮ್ಮಿಂದಾಗುವ ಸೇವೆಯನ್ನು ನಿಸ್ವಾರ್ತಿಯಾಗಿ ಮಾಡಿದ ಮಹಾನ ವ್ಯಕ್ತಿಯ ಸಾಲಿನಲ್ಲಿ ಶರಣು ಅವರಿದ್ದಾರೆ.
ಅವರನ್ನು ಕಳೆದುಕೊಂಡು ಕೇವಲ ಅವರ ಕುಟುಂಬಸ್ಥರು ಮಾತ್ರ ಒಂಟಿಯಾಗಿಲ್ಲ, ಅವರಿಲ್ಲದೆ ಮುದ್ದೇಬಿಹಾಳ ತಾಲೂಕು ಒಂಟಿಯಾದಂತಿದೆ ಎಂದು ಅವರು ಕಣ್ಣೀರಿನಲ್ಲಿ ಮಿಂದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನಾವೀರದೇವರು ಮಾತನಾಡಿ, ಶರಣು ಎಂಬ ಹೆಸರಿಂನಂತೆ ತನ್ನ ಮುಂದೆ ಬಂದಂತಹ ವ್ಯಕ್ತಿಗೆ ಶರಣು ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿದರು. ಆದರೆ ಈಗಾ ಒಂದು ಯುವ ರತ್ನವನ್ನೇ ಕಳೆದುಕೊಂಡಂತಾಗಿದೆ. ಅವರ ಕುಟುಂಬಸ್ಥರಿಗೆ ಶಕ್ತಿಯನ್ನು ನೀಡಲಿ. ಅವರೊಂದಿಗೆ ತಾಲೂಕಿನ ಎಲ್ಲರು ಇರುತ್ತೇವೆ ಎಂದು ಹೇಳಿದರು.
ಪುರಸಭೆ ಸದಸ್ಯ ಮೆಹಬೂಬ ಗೋಳಸಂಗಿ, ಬಸಯ್ಯ ನಂದಿಕೇಶ್ವರಮಠ, ಹೇಮರಡ್ಡಿ ಮೇಟಿ, ಯುವ ಮುಖಂಡ ಕಾಮರಾಜ ಬಿರಾದಾರ, ಮಹಮ್ಮದ್ ರಫೀಕ ಶಿರೋಳ ಮಾತನಾಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರು ಹಾಗೂ ಸಿಬ್ಬಂದಿಗಳು, ಸಮಾಜದ ಮುಖಂಡರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಇತರರಿದ್ದರು.
Be the first to comment