ರಾಜ್ಯ ಸುದ್ದಿ
ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಕರ್ನಾಟಕದಲ್ಲಿನ ಕಾರವಾರ ನೌಕಾ ನೆಲೆಗೆ ಭೇಟಿ ನೀಡಿ ಸೀಬರ್ಡ್ ಯೋಜನೆಯಡಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ.ಐಎನ್‍ಎಸ್ ಕದಂಬ ಹೆಲಿಪ್ಯಾಡ್‍ಗೆ ಬರುವ ಮೊದಲು ಸಚಿವರು ಯೋಜನಾ ಪ್ರದೇಶ ಮತ್ತು ತಾಣಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ರಕ್ಷಣಾ ಸಚಿವರು ಪಿಯರ್ಸ್‍ನ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಅವರು ಹೊಸದಾಗಿ ನಿರ್ಮಿಸಿದ ನೌಕಾ ಯೋಧರ ವಸತಿ ಗೃಹಕ್ಕೆ ಭೇಟಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಿಂಗ್ ಅವರು ಇಂದಿನಿಂದ ಎರಡು ದಿನಗಳ ಕಾಲ ಕಾರವಾರ ಮತ್ತು ಕೊಚ್ಚಿಯಲ್ಲಿನ ಭಾರತದ ಪ್ರಧಾನ ನೌಕಾ ನೆಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಕರ್ನಾಟಕದ ಕಾರವಾರದಲ್ಲಿರುವ ನಿರ್ಣಾಯಕ ನೌಕಾ ನೆಲೆಯನ್ನು ವಿಸ್ತರಿಸಲು ಭಾರತೀಯ ನೌಕಾಸೇನೆ ಯೋಜನೆ ರೂಪಿಸಿದೆ. ಈ ನೆಲೆ ಸಂಪೂರ್ಣ ಅಭಿವೃದ್ಧಿಯಾದ ಬಳಿಕ ಏಷ್ಯಾದ ಅತೀದೊಡ್ಡ ನೌಕಾ ನೆಲೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ.ಭೇಟಿಯ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಕೊಚ್ಚಿಯಲ್ಲಿನ ಮೊದಲ ಸ್ಥಳಿಯ ವಿಮಾನ ವಾಹಕ ನೌಕೆ ವಿಕ್ರಾಂತ್ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಯೋಜನೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Be the first to comment