ಜಿಲ್ಲಾ ಸುದ್ದಿಗಳು
ಭಟ್ಕಳ
ಇಂದು ದೇಶದಾದ್ಯಂತ ನಡೆಯುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತ ಬಂದ್‌ಗೆ ಭಟ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಕಾಂಗ್ರೇಸ್ ಕಿಸಾನ ಸಮಿತಿ ಜಂಟಿಯಾಗಿ ಕರೆಯನ್ನು ನೀಡಿತ್ತು ಆದರೆ ಸಾರ್ವಜನಿಕವಾಗಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬಸ್ ಸಂಚಾರವು ಎಂದಿನಂತಿತ್ತು. ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಶಂಶುದ್ದಿನ ಸರ್ಕಲ್ ಬಳಿ ಆಗಮಿಸಿ ಟಯರ್ ಗೆ ಬೆಂಕಿ ಹಚ್ಚಿಪ್ರತಿಭಟಿಸಲಾಯಿತು.
ರಾಷ್ಟೀಯ ಹೆದ್ದಾರಿಯಲ್ಲಿ ಸಂಚಾರಿ ವಾಹನಗಳನ್ನು ತಡೆದು ರಾಸ್ತಾ ರೊಕೊ ಮಾಡಲಾಯಿತು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ಕೇಂದ್ರ ಸರ್ಕಾರದ ಆಡಳಿತ ಕ್ರಮದಿಂದ ದಿನದಿಂದ ದಿನಕ್ಕೆ ಬೆಲೆ ಎರಿಕೆ ಹೆಚ್ಚಾಗುತ್ತಿದೆ ಬೆಲೆ ಏರಿಕೆ ತಾಪ ಜನಸಾಮಾನ್ಯರನ್ನು ತಟ್ಟುತ್ತಿದೆ ಇನ್ನಾದರು ಕೇಂದ್ರ ಸರ್ಕಾರ ಎಚ್ಚೆತ್ತು ಕೃಷಿ ಮಸೂದೆಯನ್ನು ವಾಪಾಸ ಪಡೆಯಬೇಕು ಎಂದರು.
ಈ ಸಂಧರ್ಬದಲ್ಲಿ ಶ್ರೀ ರಾಮಾ ಮೊಗೇರ , ಶ್ರೀ ವಿಷ್ಣು ದೇವಾಡಿಗ , ಶ್ರೀ ಸಾದಿಕ ಮಟ್ಟಾ, ಶ್ರೀಮತಿ ಜಯಶ್ರಿ ಮೋಗೇರ ಸೇರಿದಂತೆ ಕಾಂಗ್ರೇಸ್‌ನ ಮುಖಂಡರು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಿಸಾನ್ ಸಮಿತಿ ನಾಯಕರು ಉಪಸ್ಥಿತರಿದ್ದರು.
Be the first to comment