ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಲ್ಲ ಪ್ರಧಾನ ಸೇವಕರು, ಜಿ ನಾರಾಯಣಸ್ವಾಮಿ.

ವರದಿ ಗುರುಮೂರ್ತಿ ಬೂದಿಗೆರೆ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

ನರೇಂದ್ರ ಮೋದಿಯವರು ಯಶಸ್ವಿಯಾಗಿ ೨೦ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿ, ಉತ್ತಮ ಆಡಳಿತವನ್ನು ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಅವರು ಒಬ್ಬ ಸಮಾಜ ಸೆವಕರಾಗಿಯು ದುಡಿಯುತ್ತಿದ್ದಾರೆ ಇನ್ನೂ ಅವರ ರಾಜಕೀಯ ಅವದಿಯಲ್ಲಿ ೧೩ ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ೭ ವರ್ಷಗಳ ಕಾಲಮುಗಿಸಿಇನ್ನೂಮುಂದುವರೆಯುತ್ತಿದ್ದಾರೆ ಆದ್ದರಿಂದಲೇ ಅವರನ್ನು ಪ್ರಧಾನ ಮಂತ್ರಿಯಲ್ಲ ಪ್ರಧಾನ ಸೇವಕರು ಎಂದು ಹೇಳಬಹುದು ಎಂದು ಬಿಜೆಪಿಯ ಓ.ಬಿ.ಸಿ ಜಿಲ್ಲಾಧ್ಯಕ್ಷರಾದ ಬೂದಿಗೆರೆ ಜಿ ನಾರಾಯಣಸ್ವಾಮಿ ತಿಳಿಸಿದರು.

CHETAN KENDULI

ಬೂದಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಪಂಡಿತ್ ದೀನ ದಯಾಳ್ ಉಪದ್ಯಾಯರ ೧೦೫ ನೇ ವರ್ಷದ ಹುಟ್ಟುಹಬ್ಬ ಹಾಗೂ ಮೋದಿಯವರು ಹುಟ್ಟು ಹಬ್ಬದ ಸಲುವಾಗಿ ಅವರು ಮಾಡಿರುವ ಸೇವೆಗಳನ್ನು ಪೋಸ್ಟ್ ಮುಖಾಂತರ ಅವರಿಗೆ ಅಭಿನಂದನೆ ಸಲಿಸುವ ಸಲುವಾಗಿ ಪೋಸ್ಟ್ ಕಾರ್ಡ್ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೮೦ ರಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದು ಇದರ ಹಿಂದೆ ೧೯೫೧ ಜನ ಸಂಘ ಎಂಬುದು ಹುಟ್ಟಿತ್ತು ಕಾರಣಾಂತರದಿಂದ ಈ ಸಂಘ ನಶಿಸಿ ಈಗ ಭಾರತೀಯ ಜನತಾ ಪಾರ್ಟಿಯಾಗಿದೆ ಈ ಪಕ್ಷ ಜನತೆಯ ಸೇವೆಯನ್ನು ಮಾಡಿಕೊಂಡು ಬರುತ್ತಿದೆ ಎಂದರು. ಈ ಪಕ್ಷದಲ್ಲಿ ಸಾಕಷ್ಟು ಮಹಾನ್ ವ್ಯಕ್ತಿಗಳು ಜನರಿಗಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಈಗಲೂ ಸಹ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಎ.ವಿ ಪ್ರಭಾಕರ್ ಮಾತನಾಡಿ ಪಂಡಿತ್ ದೀನ ದಯಾಳ್ ಅವರು ಒಬ್ಬ ಮುಗ್ದ ಮನಸ್ಸಿನವರು, ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ತಮ್ಮ ಮುಗ್ದ ಮನಸಿನಿಂದಲೆ ಜನರ ಪ್ರೀತಿ ವಿಶ್ವಾಸವನ್ನು ಪಡೆಯುತ್ತಿದ್ದರು, ಯಾರನ್ನು ಸಹ ದ್ವೇಷ ಮಾಡದೆ ಎಲ್ಲರೂ ಒಂದೆ ಎಂಬ ಮನೋಭಾವನೆಯನ್ನು ಹೊಂದಿದ್ದರು. ಅವರ ಒಳ್ಳೆಯ ಮನಸ್ಸಿನಿಂದ ಎಲ್ಲರನ್ನೂ ತಮ್ಮ ಕಡೆ ಸೆಳೆಯುವ ವ್ಯಕ್ತಿಯಾಗಿದ್ದರು ಎಂದರು.

ಬೂದಿಗೆರೆ ಗ್ರಾಮ ಪಂಚಾಯತಿ ಸದಸ್ಯ ಎನ್.ಮೋಹನ್ ಮಾತನಾಡಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರು ಸಮಾಜದಲ್ಲಿ ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆದು ಹೆಸರು ಮಾಡಿದಂತವರು, ಭಾರತೀಯ ಜನತಾ ಪಾರ್ಟಿಯಲ್ಲಿ ಅವರ ಸೇವರ ಅಪಾರವಾಗಿದೆ. ಇನ್ನು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಧನೆ ಮರೆಯುವಂತಿಲ್ಲ ಅವರು ಸದಾ ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ಭಾವನೆಗಳನ್ನು,ಧ್ಯೇಯವನ್ನು ಪ್ರತಿಯೊಬ್ಬ ಯುವಕರು ರೂಢಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ನವೀನ ರಾಜ್, ಧನಂಜಯ್, ಹರೀಶ್, ಮಂಜುನಾಥ್, ಕೇಶವಮೂರ್ತಿ, ಮಂಜುನಾಥ್, ಗ್ರಾಮದ ಬಿಜೆಪಿ ಮುಖಂಡರಾದ ರಾಮಣ್ಣ ಜಿ, ಮಂದಾರ ಮುನಿರಾಜ್, ಚಿನ್ನಸ್ವಾಮಿ,ವೆಂಕಟೇಶ್,ರಮೇಶ್ ಉಪೇಂದ್ರ, ಮತ್ತಿತರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*