ಜಿಲ್ಲಾ ಸುದ್ದಿಗಳು
ಭಟ್ಕಳ್
ಮೂರು ಕೃಷಿ ಕಾಯ್ದೆಗಳು. ವಿದ್ಯುತ್ ಮಸೂದೆ ರದ್ದತಿ ಗಾಗಿ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗಾಗಿ. ಅಡುಗೆ ಅನಿಲ. ಡೀಸೆಲ್-ಪೆಟ್ರೋಲ್ ಗ್ಯಾಸ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ. ಭೂಮಿ ಕಸಿದುಕೊಳ್ಳುವ ಭೂಮಸೂದೆ ವಿರುದ್ಧ. ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ. ಇತ್ಯಾದಿ ಬೇಡಿಕೆಗಾಗಿ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆಭಟ್ಕಳ್ದಲ್ಲಿ ಎ.ಐ.ಟಿ.ಯು.ಸಿ ಮತ್ತು ಸಿ.ಈ.ಟಿ.ಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದ ಒಂದು ವರ್ಷ ಹಾಗೂ ದೆಹಲಿಯಲ್ಲಿನ ರೈತ ಹೋರಾಟಕ್ಕೆ 10 ತಿಂಗಳು ಪೂರ್ಣ ಗೊಳ್ಳುತ್ತಿರುವ ಸಂದರ್ಭದಲ್ಲಿ ರೈತಾಪಿ ಕೃಷಿ ಯನ್ನು ನಾಶಮಾಡಿ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆಯನ್ನು ರದ್ದುಮಾಡಬೇಕು ಹಾಗೂ ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇಕಡ 50ರಷ್ಟು ಲಾಭವನ್ನು ಖಾತರಿ ಮಾಡುವ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿ ಐದುನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಎಸ್ ಕೆ ಎನ್ ಸೆಪ್ಟೆಂಬರ್ 27. 2021 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ.ರಾಜ್ಯದ ಕೃಷಿಭೂಮಿಯನ್ನು ಶ್ರೀಮಂತರು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ.ಕೃಷಿ ಉತ್ಪಾದನೆ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾರಿಯರಿಯಲು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ.ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆ ಗಳಾಗಿ ಮಾರ್ ಪಡಿಸಿರುವ ಕ್ರಮವನ್ನು ಕೈಬಿಡಬೇಕು.ಅಡುಗೆ ಅನಿಲ. ಪೆಟ್ರೋಲ್. ಗ್ಯಾಸ್. ಡೀಸೆಲ್. ಇತ್ಯಾದಿ ಅಗತ್ಯವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ನಡೆಸುವ ಗಳನ್ನು ಕೂಡಲೇ ನಿಲ್ಲಿಸಬೇಕು.
ದೇಶಕ್ಕೆ ಅನ್ನ ನೀಡುವ ಅನ್ನದಾತ ಕೃಷಿ ಬಿಕ್ಕಟ್ಟಿನ ಫಲವಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈತಾಪಿ ಕೃಷಿಯನ್ನು ಬಲಪಡಿಸಲು ಅಗತ್ಯ ಇರುವ ಕೃಷಿ ಭೂಮಿ ಹಂಚಿಕೆ.ನೀರಾವರಿ ಸೌಲಭ್ಯದ ವಿಸ್ತರಣೆ. ಬಡ್ಡಿ ರಹಿತ ಬ್ಯಾಂಕ್ ಸಾಲ ನೀಡಿಕೆ. ಗುಣಮಟ್ಟದ ಬೀಜ. ಗೊಬ್ಬರ. ಮಾರುಕಟ್ಟೆಯ ರಕ್ಷಣೆ ಇತ್ಯಾದಿ ಸೌಲಭ್ಯಗಳನ್ನು ದೊಡ್ಡಪ್ರಮಾಣದಲ್ಲಿ ಒದಗಿಸುವ ಬದಲು ಇಂತಹ ದೊಡ್ಡ ವಿಭಾಗದ ರೈತರು. ಕೃಷಿ ಕೂಲಿಕಾರರನ್ನು ಕೃಷಿಯಿಂದ ಹೊರಗೆ ಹಾಕಿ ಕಂಪನಿ ಕೃಷಿಯನ್ನು ಜಾರಿಗೆ ತಂದು ಅವರವರ ಹೊಲ ಗದ್ದೆಗಳಲ್ಲಿ ಯೇ ರೈತರನ್ನು ಕಾರ್ಪೊರೇಟ್ ಕಂಪನಿಗಳ ಜೀತದಾಳುಗಳನ್ನು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂರು ಕೃಷಿ ಕಾಯ್ದೆಗಳು. ಭೂ ಸುಧಾರಣೆ ಕಾಯ್ದೆಗಳು. ಎಪಿಎಂಸಿ ಕಾಯ್ದೆಯಂತಹ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ.
ಸಾರ್ವಜನಿಕ ಆಸ್ತಿಯಾಗಿರುವ ವಿದ್ಯುತ್ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮೂರು ಕಾಸು. ನಾಲ್ಕು ಕಾಸಿಗೆ ಮಾರಾಟ ಮಾಡಲು ವಿದ್ಯುತ್ ಮಸೂದೆ 2020 ಅನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ರೈತರ ಪಂಪ್ಸೆಟ್ ಗಳು. ಭಾಗ್ಯಜ್ಯೋತಿ. ಕುಟೀರ ಜ್ಯೋತಿ ಯೋಜನೆಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ತನ್ನು ನಿಲ್ಲಿಸಲಾಗುತ್ತದೆ. ಪ್ರಿಪೇರ್ ಮೀಟರ್ ಬರಲಿದೆ. ವಿಪರೀತ ವಿದ್ಯುತ್ ದರ ಏರಿಕೆಯನ್ನು ಬರಿಸಲು ಸಾಧ್ಯವಾಗದೆ ಸಣ್ಣ. ಮಧ್ಯಮ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕಲಿದೆ.ಸಾಮಾನ್ಯ ಜನತೆ ಮತ್ತೆ ಕತ್ತಲಿಗೆ ತಳ್ಳಲ್ಪಡುತ್ತಾರೆ.ಇಂತಹ ಕರಾಳ ಕಾಯಿಲೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ 10 ತಿಂಗಳುಗಳಿಂದ ಲಕ್ಷಾಂತರ ರೈತರು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ದಮನ ಮಾಡಲು ಪ್ರಯತ್ನಿಸುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಮಾತ್ರವಲ್ಲ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಅಡುಗೆ ಅನಿಲ. ಪೆಟ್ರೋಲ್. ಡೀಸೆಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಹಗಲು ದರೋಡೆ ನಡೆಸುತ್ತಿದೆ. ಒಂದಾದ ಮೇಲೆ ಒಂದರಂತೆ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ದೇಶದ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಪ್ರಮುಖ ಅಡ್ಡಿಯಾಗಿರುವ ಕಾರ್ಮಿಕ ವರ್ಗದ ಚಳುವಳಿಯನ್ನು ದಮನ ಮಾಡಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾತ್ರವಲ್ಲ ನೂರಾರು ವರ್ಷಗಳ ಹೋರಾಟದಿಂದ ಸಾಧಿಸಿದ ಕಾರ್ಮಿಕ ಕಾಯ್ದೆಗಳನ್ನು ಮಾಡಿ ನಾಲ್ಕು ಕಾರ್ಮಿಕ ಸಹಿತೆ ಗಳನ್ನು ಜಾರಿಗೆ ತಂದಿದೆ. ಕನಿಷ್ಠ ವೇತನ. ಕೆಲಸದ ಭದ್ರತೆ ಮರೀಚಿಕೆಯಾಗುತ್ತಿದೆ ಇಂತಹ ನೀತಿಗಳ ವಿರುದ್ಧ ಕಾರ್ಮಿಕವರ್ಗದ ಸಂಘಟನೆಗಳು ಹಲವು ಚಾರಿತ್ರಿಕ ಹೋರಾಟಗಳನ್ನು ನಡೆಸುತ್ತಿವೆ ಮಾತ್ರವಲ್ಲ ದೆಹಲಿಯ ರೈತ ಹೋರಾಟವನ್ನು ಬೆಂಬಲಿಸುತ್ತಿದೆ ಎಂದು ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿ.ಎನ್.ರೇವನಕರ್ , ಸುನೀಲ್ ರೈಕರ್, ಪುಂಡಲೀಕ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
Be the first to comment