ರಾಜ್ಯ ಸುದ್ದಿ
ಕುಮಟಾ: ಲಾಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು ಜಿಲ್ಲೆಯ ಕುಮಟಾ, ಮುರುಡೇಶ್ವರ, ಶಿರಸಿ ಹಾಗೂ ಸಿದ್ದಾಪುರ ಲಾಯನ್ಸ್ ಕ್ಲಬ್‍ಗಳಿಗೆ ಮಹಿಳಾ ಸಬಲೀಕರಣ ಯೋಜನೆಯಡಿ ಶಾಲೆ ಬಿಟ್ಟು ಮನೆಯಲ್ಲಿರುವ ಯುವತಿಯರಿಗೆ ಹೊಲಿಗೆ ತರಬೇತಿ ನೀಡಲು 8 ಲಕ್ಷ ರೂ. ನೆರವಿನ ಮೊತ್ತ ನೀಡಲಿದೆ ಎಂದು ಲಾಯನ್ಸ್ ಜಿಲ್ಲಾ ಗವರ್ನರ್ ಗಿರೀಶ ಕುಚ್ಚಿನಾಡ ತಿಳಿಸಿದರು.
ಪಟ್ಟಣದ ಲಾಯನ್ಸ್ ಸಭಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಜೂ. ಅಂತ್ಯದೊಳಗಾಗಿ ನಮ್ಮ ಪದಾಧಿಕಾರಿಗಳ ಸೇವಾ ಅವಧಿ ಮುಗಿಯಲಿದ್ದು, ನಂತರ ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಸಂಸ್ಥೆಯು ಸಾಕಷ್ಟು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಸೇವೆಯ ಬಗ್ಗೆ ನಮಗೆ ಸಾರ್ಥಕತೆ ಇದೆ. ಅಲ್ಲದೇ, ಆನ್‍ಲೈನ್ ಕ್ಲಾಸ್ ಪಡೆಯುವ ನೂರಾರು ಬಡ ವಿದ್ಯಾರ್ಥಿಗಳಿಗೆ ನಮ್ಮ ಸದಸ್ಯರು ಉಚಿತವಾಗಿ ಸ್ಮಾರ್ಟ್ ಫೆÇೀನ್ ನೀಡಿ ನೆರವಾಗಿದ್ದಾರೆ ಎಂದರು.
ಇನ್ನು, ಮಹಿಳಾ ಸಬಲೀಕರಣ ಯೋಜನೆಯಡಿ ಪ್ರತಿಯೊಂದು ಕ್ಲಬ್‍ಗಳಿಗೆ 2 ಲಕ್ಷ ರೂ.ನಂತೆ ಒಟ್ಟೂ ಎಂಟು ಲಕ್ಷ ರೂ.ಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಮೊತ್ತದಿಂದ ಶಾಲೆ ಬಿಟ್ಟ ಯುವತಿಯರಿಗೆ ಹೊಲಿಗೆ ಯಂತ್ರ, ಟೇಬಲ್ ಹಾಗೂ ಕತ್ತರಿ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಪೂರೈಸಲಾಗುತ್ತದೆ. ಮುಂದೆಯೂ ಸಹ ದಾನಿಗಳು ಸಹಾಯ ಮಾಡಿದಲ್ಲಿ ತರಬೇತಿ ಪಡೆದ ಯುವತಿಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲಿದ್ದೇವೆ ಎಂದರು.
ಜಿಲ್ಲಾ ಲಾಯನ್ಸ್ ಕ್ಲಬ್ ಕ್ಯಾಬಿನೆಟ್ ಕಾರ್ಯದರ್ಶಿ ನೀರಜಾ ನಾಯಕ ಮಾತನಾಡಿ, ಲಾಯನ್ಸ್ ಕ್ಲಬ್‍ನಿಂದ ಕಳೆದ ವರ್ಷ ನೆರ ಪೀಡಿತರಿಗೆ ಸಾಕಷ್ಟು ಅಗತ್ಯ ಸಾಮಗ್ರಿಗಳನ್ನು ನೀಡಲಾಗಿದ್ದು, ಕೊರೊನಾ ಸಂಕಷ್ಟದಲ್ಲಿರುವವರಿಗೂ ಸಹ 4 ಲಕ್ಷ 50 ಸಾವಿರ ರೂ.ಗಳ ವಿವಿಧ ನೆರವು ನಿಡಲಾಗಿದೆ. ಜಿಲ್ಲೆಯಿಂದ 32 ಸದಸ್ಯರು ಒಬ್ಬೊಬ್ಬರಂತೆ 1 ಸಾವಿರ ಡಾಲರ್ ಮೊತ್ತವನ್ನು ಅಂತಾರಾಷ್ಟ್ರೀಯ ಲಾಯನ್ಸ್ ಸಂಸ್ಥೆಗೆ ಕೊಡುಗೆ ನೀಡಿದ್ದು, ಇದು ಹೆಮ್ಮೆಯ ಸಾಧನೆಯಾಗಿದೆ. ಜಿಲ್ಲಾ ಸಂಸ್ಥೆಯ ಬೇರೆ ಬೇರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಅಂತಾರಾಷ್ಟ್ರೀಯ ಲಾಯನ್ಸ್ ಸಂಸ್ಥೆ ಸುಮಾರು 1.85 ಲಕ್ಷ ಡಾಲರ್‍ಗಳಷ್ಟು ಮೊತ್ತದ ನೆರವನ್ನು ನೀಡಿದೆ ಎಂದರು.ಈ ಸಂದರ್ಭದಲ್ಲಿ ಕುಮಟಾ ಲಾಯನ್ಸ್ ಕ್ಲಬ್ ಅಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಪೆÇ್ರ.ಎಸ್.ಎಸ್.ಹೆಗಡೆ, ಸಂಸ್ಥೆಯ ಪ್ರಮುಖೆ ಮಂಗಲಾ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು
Be the first to comment