ಭಟ್ಕಳ: ಕೃಷಿ ಅಭಿಯಾನಕ್ಕೆ ಶಾಸಕ ಸುನೀಲ್ ನಾಯ್ಕ ಚಾಲನೆ

ವರದಿ: ಕುಮಾರ್ ನಾಯ್ಕ

ಜಿಲ್ಲಾ ಸುದ್ದಿಗಳು

ಭಟ್ಕಳ:

CHETAN KENDULI

ತಾಲೂಕಿನ ಯಲ್ವಡಿಕವೂರ್ ಗ್ರಾಮ ಪಂಚಾಯತ್ ಆವರಣದಲ್ಲಿ ಕೃಷಿ ಅಭಿಯಾನ ರಥಕ್ಕೆ ಶಾಸಕ ಸುನೀಲ್ ನಾಯ್ಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ರೈತರು ಕೇವಲ ಹಳೇ ಪದ್ದತಿ ಒಂದನ್ನೇ ನಂಬಿಕೊoಡು ವ್ಯವಸಾಯ ಮಾಡುವುದನ್ನು ಅನುಸರಿಸಿಕೊಂಡು ಬಂದರೆ ಈಗಿನ ಜೀವನಕ್ಕೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗಲಿದೆ. ಈಗೀಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಕೃಷಿ ಸಂಬoಧಿತ ಅಗತ್ಯ ಕೆಲಸಕಾರ್ಯಗಳನ್ನ ಅತೀವೇಗವಾಗಿ ಮಾಡಿ ಮುಗಿಸುವಂತಹ ಅನೇಕ ಯಂತ್ರೋಪಕರಣಗಳು ಈಗ ಲಭ್ಯವಿದೆ.

ಅಧಿಕಾರಿಗಳೂ ಕೂಡಾ ಆಯಾ ಹೋಬಳಿ ಮಟ್ಟದಲ್ಲಿ ರೈತರ ಕಾರ್ಯಾಗಾರವನ್ನು ಮಾಡಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ, ಬೆಳೆಗಳಲ್ಲಿ ಉತ್ತಮ ಇಳುವರಿ ತೆಗೆಯುವ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಯಲ್ವಡಿಕವೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ ಕೃಷಿ ಅಭಿಯಾನ ರಥ ನಮ್ಮ ಗ್ರಾಮ ಪಂಚಾಯತ್ ಇಂದಲೇ ಆರಂಭವಾಗಿದ್ದು ತುಂಬಾ ಸಂತೋಷದ ವಿಷಯವಾಗಿದೆ. ಇದಕ್ಕೆ ಅನುವು ಮಾಡಿಕೊಟ್ಟ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಯೋಜನೆಗಳ ಬಗ್ಗೆ ಹಾಗೂ ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರಣೆ ನೀಡಿದರು. ಕೃಷಿ ಇಲಾಖೆಯಿಂದ ಕೆಲವು ಯೋತ್ರೋಪಕರಣಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಟ್ಟಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಷು ನಾಯ್ಕ, ಯಲ್ವಡಿಕವೂರ ಗ್ರಾಮ ಪಂಚಾಯತ್ ಸದಸ್ಯರುಗಳು, ಅಧಿಕಾರಿಗಳು, ರೈತ ಮುಖಂಡರು ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*