ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್ ರವರು ಪತ್ರಿಕಾಗೋಷ್ಠಿ ನಡೆಸಿದರು. ಜೂನ್ 21 ರಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿಯವರ ನೇತೃತ್ವದಲ್ಲಿ ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳನ್ನೊಳಗೊಂಡು ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಸಹಕಾರ ಸಂಘಗಳಲ್ಲಿ ರೈತರ ಕೃಷಿ ಸಾಲದ ಮೇಲೆ ಜಾರಿಗೆ ತಂದಂತಹ ಷರತ್ತುಗಳನ್ನು ಸಡಿಲಿಕೆ ಮಾಡಿ ಎಂಬ ಮನವಿಗೆ ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಿಂದಿನ ಸಹಕಾರ ಸಚಿವರಾದಎಸ್.ಟಿ.ಸೋಮಶೇಖರ್ ರವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್ ಧನ್ಯವಾದ ತಿಳಿಸಿದರು.
ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ . ಯಡಿಯೂರಪ್ಪ ಅವರನ್ನು ಭೇಟಿ ಮಾಡಿ , ಹಲವಾರು ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ಮಾಡಿತ್ತು . ಅದರಲ್ಲಿ ಪ್ರಮುಖವಾಗಿ ಶ್ರೀ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದಾಗ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ ಮನ್ನಾ ಮಾಡುವ ಷರತ್ತನ್ನು ವಿಧಿಸಿತ್ತು . ಆರ್ಥಿಕ ಇಲಾಖೆ ಈ ಷರತ್ತನ್ನು ಸಾಲ ಮಂಜೂರಾತಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದ ಪರಿಣಾಮವಾಗಿ ಲಕ್ಷಾಂತರ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶದಿಂದ ವಂಚಿತರಾಗಿ, ತೀವ್ರ ಆತಂಕ ವ್ಯಕ್ತಪಡಿಸಿದ್ದರು .
ಇದನ್ನು ಮನಗಂಡು ರಾಜ್ಯ ರೈತ ಮೋರ್ಚಾ ನಿಯೋಗ ಆಗ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪನವರ ಗಮನಕ್ಕೆ ತಂದು , ಈ ಮೇಲಿನ ಷರತ್ತನ್ನು ಸಡಿಲಗೊಳಿಸಿ , ಮೊದಲಿನ ಹಾಗೆ ಆರ್.ಟಿ.ಸಿ. ಹೊಂದಿದ ಎಲ್ಲ ರೈತರಿಗೂ ಶೂನ್ಯ ಬಡ್ಡಿ ದರದ ಸಾಲ ವಿತರಿಸಬೇಕೆಂದು ಮನವಿ ಸಲ್ಲಿಸಿದಾಗ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ , ಒಂದು ರೇಷನ್ ಕಾರ್ಡಿಗೆ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿದರ ಸಾಲ ಎನ್ನುವ ಷರತ್ತನ್ನು ಹಿಂಪಡೆದು , ಆರ್‌ಟಿಸಿ ಹೊಂದಿದ ಎಲ್ಲ ರೈತರಿಗೂ 3 ಲಕ್ಷದವರೆಗೆ ಸಾಲ ನೀಡುವ ಮಹತ್ವದ ನಿರ್ಣಯವನ್ನು ಮಾಡಿ ಆದೇಶ ಹೊರಡಿಸಿದರು . ರೈತರಿಗೆ ಅನುಕೂಲವಾಗುವಂತಹ ಆದೇಶ ಹೊರಡಿಸಿದ್ದಕ್ಕಾಗಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್ . ಯಡಿಯೂರಪ್ಪನವರು ಹಾಗೂ ಹಿಂದಿನ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರಿಗೆ ಹಾಗೂ ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ ಎಂದರು.
Be the first to comment