ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.22:
ಗ್ರಾಮೀಣ ಪ್ರದೇಶದ ಮತಗಟ್ಟೆಯಿಂದ ಮತಪೆಟ್ಟಿಗೆ ಹಾಗೂ ಚುನಾವಣಾ ಸಿಬ್ಬಂದಿಗಳನ್ನು ತರೆತರುತ್ತಿದ್ದ ಸಾರಿಗೆ ಇಲಾಖೆ ಬಸ್ ಹಾಗೂ ಸಿಮೆಂಟರ್ ಮಿಕ್ಸರ್ ಟಿಪ್ಪರ ಮುಖಾಮುಖಾ ಡಿಕ್ಕಿಯಿಂದ ಬಸ್ ಚಾಲಕ ಸೇರಿ 12 ಚುನಾವಣಾ ಸಿಬ್ಬಂದಿಗಳ ಗಂಭೀರಗಾಯಗೊಂಡ ಘಟನೆ ಮಂಗಳವಾರ ರಾತ್ರ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಾಪೂರ ಪಿಟಿ, ಹುಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ, ಕೊಪ್ಪ ತಾಂಡಾ ಹಾಗೂ ಹುಲ್ಲೂರ ಗ್ರಾಮದ ಮತಗಟ್ಟೆಗಳಲ್ಲಿನ ಒಟ್ಟೂ 6 ಮತಪೆಟ್ಟಿಗೆಗಳನ್ನು ಹಾಗು 28 ಚುನವಣಾ ಸಿಬ್ಬಂದಿಗಳು ಸೇರಿ 8 ಪೊಲೀಸರನ್ನು ಮುದ್ದೇಬಿಹಾಳ ಪಟ್ಟಣಕ್ಕೆ ಕರೆತರುತ್ತಿದ್ದ ಸಾರಿಗೆ ಬಸ್ ಗೆ ಸಿಮೆಂಟ್ ಮುಕ್ಸರ್ ಟಿಪ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಚಾಲನ ಹುಲಗಪ್ಪ ಬಿರಾದಾರ ಅವರ ಕಾಲು ಸಂಪೂರ್ಣವಾಗಿ ಜಖಂಮಗೊಂಡಿದ್ದು 12 ಚುನಾವಣಾ ಸಿಬ್ಬಂದಿಗಳೂ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಉಪ ವಿಭಾಗೀಯ ಅಧಿಕಾರಿ ಭೇಟಿ:
ಘಟನಾ ಸುದ್ದಿ ತಿಳಿದಿ ವಿಜಯಪುರ ಉಪ ವಿಭಾಗೀಯ ಅಧಿಕಾರಿ ರಾಮಚಂದ್ರಪ್ಪ ಗಡಾದೆ ತಾಲೂಕಾ ಆಸ್ಪತ್ರೆಗೆ ಬೇಟಿ ನೀಡಿ ಗಾಯಗೊಳಗಾದ ಸಿಬ್ಬಂದಿಗಳನ್ನು ಬೇಟಿ ಮಾಡಿ ಮಾಹಿತಿ ಪಡೆದುಕೊಂಡರು.
ಸ್ಥಳಕ್ಕೆ ತಹಶೀಲ್ದಾರ್ ಎಂ.ಎಸ್.ಅರಕೇರಿ, ಗ್ರಾಪಂ ಚುನಾವಣೆಯ ಎಂಸಿಸಿ ನೋಡಲ್ ಅಧಿಕಾರಿಯೂ ಆಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಎನ್.ಬಿ.ಹೊಸಮನಿ, ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ ಇನ್ನಿತರರು ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಗಾಯಗೊಲಗಾದ ಸಿಬ್ಬಂದಿಗಳು:
ಪ್ರಶಾಂತ, ಬಾಪೂಗೌಡ ಪಾಟೀಲ, ವಸಂತ ನಾಯಕ, ಪರಶುರಾಮ ನರಸರೆಡ್ಡಿ, ಲಕ್ಷö್ಮಣ ಚಲವಾದಿ, ಬಸವರಾಜ ಕೆಂಚನಗುಡ್ಡ, ಬಸವರಾಜ ಕುಳಗೇರಿ, ಸುಜಾತಾ ಕಡಿ, ಸಂಜೀವ ತಳವಾರ, ರಾಮನಗೌಡ ಬಿರಾದಾರ, ಬಿಸ್ಮಿಲ್ಲಾ ಕಡೂರ, ಗೋವಿಂದಗೌಡ ಮೆಟಗಾರ, ಮಲ್ಲಿಕಾರ್ಜುನ ಚಿಮ್ಮಲಗಿ, ಮತಗಟ್ಟೆಗೆ ಭದ್ರತಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ಹಲವರಿಗೆ ಗಾಯಗಳಾಗಿವೆ.
Be the first to comment