ಕೊಪ್ಪಳಗದ್ದೆ ಕೆರೆ ಅಭಿವೃದ್ಧಿಗೆ ಜೀವಜಲ ಚಿಂತನೆ-ಸಮಾಲೋಚನೆ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ

ಜೀವ ಜಲ‌ಕಾರ್ಯಪಡೆ ಮುಂದಿನ ದಿನಗಳಲ್ಲಿ ಗ್ರಾಮೀಣ‌ ಭಾಗದ ಕೆರೆಗಳ ಅಭಿವೃದ್ದಿಯ ಚಿಂತನೆ ನಡೆಸಿ ದಿನದಿಂದ‌ ದಿನಕ್ಕೆ‌ ತನ್ನ‌ಕಾರ್ಯ ಬಾಹುಳ್ಯ ವಿಸ್ತಾರಗೊಳಿಸಿಕೊಳಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಜೀವ ಜಲ ಕಾರ್ಯಪಡೆ ತಾಲೂಕಿನ ಯಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕರಸುಳ್ಳಿಯ‌ ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಕೂಡ ಚಿಂತಿಸಿದೆ. ಈವರೆಗೆ ನಗರ ಭಾಗದ ಕೆರೆಯ ಅಭಿವೃದ್ದಿಗೆ ದೃಢ ಹೆಜ್ಜೆ ಇಟ್ಟು‌ ನಿರಂತರ ನಿರ್ವಹಣೆ ಕೂಡ‌ ಮಾಡುತ್ತಿದೆ.ಮೂವತ್ತಕ್ಕೂ ಅಧಿಕ ವೈದಿಕ‌ ಕುಟುಂಬಗಳು ನಂಬಿದ ಅಡಿಕೆ ಬೇಸಾಯದ ಜೀವನಾಧಾರ ಕೆರೆ ಕೂಡ ಇದೇ ಆಗಿದೆ. ಎರಡು ಎಕರೆ‌ ಮೂರು ಗುಂಟೆ ವಿಸ್ತೀರ್ಣದ ಕೊಪ್ಪಳ ಗದ್ದೆ ಕೆರೆ ಕರಸುಳ್ಳಿಯ ಪುರಾತನ ಜಲಮೂಲವಾಗಿದ್ದು ಸುತ್ತಲಿನ ನಲ್ವತ್ತಕ್ಕೂ ಅಧಿಕ ಎಕರೆ ಅಡಿಕೆ, ಭತ್ತದ ಗದ್ದೆಗಳಿಗೆ ನೀರುಣಿಸುವ ಜಲಪಾತ್ರವಾಗಿದೆ. ಕಳೆದ ಹಲವು ವರ್ಷಗಳಿಂದ ಕೆರೆ ಹೂಳೆತ್ತುವ ಕುರಿತು ಪ್ರಯತ್ನಿಸಿದ್ದರು. ಕಳೆದ ಎರಡು‌ ತಿಂಗಳ ಹಿಂದೆ ಮಾಧ್ಯಮಗಳಲ್ಲೂ ಈ ಕೆರೆಯ ಸಮಗ್ರ ಅಭಿವೃದ್ದಿ ಬಗ್ಗೆ ಪ್ರಸ್ತಾಪಿಸಿ ವರದಿ ಪ್ರಕಟಿಸಿದ್ದವು.

CHETAN KENDULI

ಈ ಕೆರೆಯ ಅಭಿವೃದ್ದಿ ಗ್ರಾಮಸ್ಥರ ಕನಸಾಗಿತ್ತು ಇದನ್ನು ಗಮನಿಸಿದ್ದ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಸದಸ್ಯ ಅನಿಲ‌ ನಾಯಕ ಅವರ ಜೊತೆ ಈಚೆಗೆ ಕೆರೆಯ ಸ್ಥಿತಿಗಳನ್ನು‌ ವೀಕ್ಷಿಸಿದರು. ತಾಲೂಕಿನ ಪಶ್ಚಿಮ‌ ಭಾಗದಲ್ಲಿ ಎರಡು‌ ಎಕರೆ ಕ್ಷೇತ್ರದ ಕೆರೆ ಇದಾಗಿದ್ದು, ಯಾವುದೇ ಅತಿಕ್ರಮಣ ಕೂಡ ಆಗದೇ ಇದೆ. ಇದರ ಸಮಗ್ರಿ ಅಭಿವೃದ್ದಿ ಆಗಬೇಕು. ಬಹುಕಾಲದ ಕನಸು ಗ್ರಾಮದ್ದು ಎಂದು ಸ್ಥಳೀಯರು ಮನವಿ‌ ಮಾಡಿದರು. ಕೆರೆಯ ದಂಡೆ ಬಲ‌ಪಡಿಸುವದು, ಕೆರೆಯ ಹೂಳೆತ್ತಿಸುವದು, ಎತ್ತಿದ ಹೂಳು ಹಾಕುವ ಸ್ಥಳಗಳು ಸೇರಿದಂತೆ ಆಗಬೇಕಾದ ಕಾರ್ಯಗಳ ಕುರಿತು ಗ್ರಾಮಸ್ಥರ ಜೊತೆ ಸಮಾಲೋಚಿಸಿದರು.ತಾಲೂಕಿನ ಪಶ್ಚಿಮ‌ ಭಾಗದಲ್ಲಿ ಎರಡು‌ ಎಕರೆ ಕ್ಷೇತ್ರದ ಕೆರೆ ಇದಾಗಿದ್ದು, ಯಾವುದೇ ಅತಿಕ್ರಮಣ ಕೂಡ ಆಗದೇ ಇದೆ. ಇದರ ಸಮಗ್ರಿ ಅಭಿವೃದ್ದಿ ಆಗಬೇಕು. ಬಹುಕಾಲದ ಕನಸು ಗ್ರಾಮದ್ದು ಎಂದು ಸ್ಥಳೀಯರು ಮನವಿ‌ ಮಾಡಿದರು. ಶ್ರೀನಿವಾಸ ಹೆಬ್ಬಾರ ಜೀವ ಜಲ‌ ಕಾರ್ಯಪಡೆಯ ಅಧ್ಯಕ್ಷರು ಜೀವ ಜಲ‌ ಕಾರ್ಯಪಡೆ‌ ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಈ ಕೆರೆ ಅಭಿವೃದ್ದಿ ಕೈಗೆತ್ತಿಕೊಳ್ಳಲು ಆಸಕ್ತವಾಗಿದೆ ಎಂದಿದ್ದಾರೆ.ಕರಸುಳ್ಳಿ ಗ್ರಾಮಸ್ಥರು ನಮ್ಮ ಗ್ರಾಮದ ದೊಡ್ಡ ‌ಕೆರೆ. ಇದೊಂದು ಜಲ‌ ಪಾತ್ರೆ. ಇದರ ಅಭಿವೃದ್ಧಿ ನಮ್ಮ ಬಹು ಕಾಲದ‌ ಕನಸು. ಅದು ಸಾಕಾರ ಆದರೆ ಸಾಕು ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*