ಜಿಲ್ಲಾ ಸುದ್ದಿಗಳು
ಭಟ್ಕಳ:
ಕಳೆದ 25 ವರ್ಷಗಳಿಂದ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜಾಲಿಕೋಡಿ ಅಳಿವೆ ಅಂಚಿನಲ್ಲಿ ಹೂಳು ತುಂಬಿಕೊಂಡು, ಸಮುದ್ರದ ಉಪ್ಪುನೀರು ಹೊಳೆಯಲ್ಲಿ ತುಂಬಿ ವಾಪಾಸ್ಸು ಸಮುದ್ರಕ್ಕೆ ಹೋಗದೇ, ಹೊಳೆದಂಡೆಯ ಮೇಲೆ ವಾಸಿಸುತ್ತಿರುವ ಎಲ್ಲರ ಮನೆಯ ಕುಡಿಯುವ ನೀರಿನ ಬಾವಿಗಳಿಗೆ ಸೇರಿಕೊಂಡು ನೀರು ಕುಡಿಯಲು ಯೋಗ್ಯವಾಗಿರದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಗ್ರಾಮಸ್ತರು ಅನೇಕ ಬಾರಿ ಕಳೆದ 20 ವರ್ಷಗಳಿಂದ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರು, ಈಗ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ಸುನಿಲ್ ನಾಯ್ಕ ಅವರ ಅವಧಿಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿ ಅಳಿವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಅದೇ ರೀತಿ ಹೆಬ್ಳೆ ಪಂ. ಹೊಟ್ಕಣಿ ದೇವಸ್ಥಾನದ ಹತ್ತಿರ ಸಮುದ್ರದ ಅಲೆಗಳಿಂದಾಗಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗುತ್ತಿತ್ತು, ತಡೆಗೋಡೆ ನಿರ್ಮಾಣ ಮಾಡಿಕೊಡುವ ಕುರಿತು ವಚನವನ್ನು ಈ ಹಿಂದೆ ಸ್ಥಳೀಯರಿಗೆ ಶಾಸಕರು ನೀಡಿದರು, ಶಾಸಕ ಸುನಿಲ್ ನಾಯ್ಕ
ಕೊಟ್ಟ ಮಾತಿನಂತೆ ತಡೆಗೋಡೆ ನಿರ್ಮಾಣಕ್ಕೆ 1.5 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರವಿ ನಾಯ್ಕ ಜಾಲಿ, ಜಾಲಿ ಪಟ್ಟಣ ಪಂಚಾಯತ್ ಜನಪ್ರತಿನಿಧಿಗಳು, ಬಿಜೆಪಿ ಮುಂಖಂಡರು ಹಾಜರಿದ್ದರು.
Be the first to comment