ರಾಜ್ಯ ಸುದ್ದಿಗಳು
ಬೆಳಗಾವಿ:
ನಿರಾಣಿ ಅವರ ಗೆಲವು ನಮ್ಮ ಮೂರು ಜಿಲ್ಲೆಯ ಪಧವಿಧರ ಮತದಾರರ ಗೆಲುವಾಗಿದೆ. ಮುಂಬರುವ ದಿನಮಾನಗಳಲ್ಲಿ ಪಧವಿಧರರ ಸಮಸ್ಯೆಗಳಿಗೆ ಪರಿಹಾರ ದೊರಕುವುದು ನಿಶ್ಚತವಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪಧವಿಧರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುವ ಮೂಲಕ ನಮ್ಮ ನಾಯಕರು ಮತದಾರರಿಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ಬಂಜಾರಾ ಹಿತ ರಕ್ಷಣಾ ವೇಧಿಕೆಯ ಅಧ್ಯಕ್ಷ ಸೂರ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ರವಿ ಪವಾರ ಹೇಳಿದರು.
ಬುಧವಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣಮಂತ ನಿರಾಣಿ ಅವರ ವಿಜಯೋತ್ಸವವನ್ನು ಆಚರಿಸಿ ಮಾತನಾಡಿದ ಅವರು, ನಿರಾಣಿ ಅವರು ಕೇವಲ ರಾಜಕೀಯ ಅಧಿಕಾರದಿಂದ ಸಮಾಜ ಸೇವೆಗೆ ಮುಂದಾಗಿಲ್ಲ. ಹಿಂದಿನಿಂದಲೂ ತಮ್ಮ ನೂರಾರು ಸಮೂಹ ಸಂಸ್ಥೆಗಳನ್ನು ಕಟ್ಟಿಬೆಳೆಸುವ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಳನ್ನು ನೀಡಿ ಆಥರ್ಿಕ ಸ್ಥಿತಿ ಬೆಳವಣಿಗೆಗೆ ಪಾತ್ರರಾಗಿದ್ದಾರೆ. ಇಂತಹ ವ್ಯಕ್ತಿಗೆ ರಾಜಕೀಯ ಅಧಿಕಾರವೂ ಸಿಕ್ಕರೆ ಎಲ್ಲರಿಗೂ ನ್ಯಾಯ ದೊರಕುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಮತದಾರರಿಗೆ ಅಭಿನಂದನೆಗಳು:
ಮೂರು ಜಿಲ್ಲೆಗಳಿಂದ ಹನಮಂತ ನಿರಾಣಿ ಅವರಿಗೆ ಮತಗಳನ್ನು ನೀಡಿ ಬೆಂಬಲಿಸಿದ ಮತದಾರರಿಗೆ ಎಂಆರ್ಎನ್ ಸಂಸ್ಥೆ, ಸೂರ್ಯ ಸಮೂಹ ಸಂಸ್ಥೆ ಹಾಗೂ ಬಂಜಾರ ಹಿತರಕ್ಷಣಾ ವೇಧಿಕೆಯಿಂದ ಪದವಿಧರ ಮತದಾರರಿಗೆ ಅಭಿನಂದನೆಗಳನ್ನು ರವಿ ಪವಾರ ತಿಳಿಸಿದ್ದಾರೆ.
Be the first to comment