ಶಾಸಕ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ರಾಜ್ಯ ನಾಯಕರು ನುಡದಂತೆ ನಡೆಯಬೇಕು: ಎ.ಎಸ್.ಪಿ. ಅಭಿಮಾನಿಗಳ ಮನವಿ…!

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಿದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡಿದರೆ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳೊಂದಿಗೆ ರಾಜ್ಯದ ಜನತೆ ಪರ ಕಾರ್ಯನಿರ್ವಹಿಸಲು ಹಾಗೂ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಭಲ ನೀಡಿದಂತಾಗುತ್ತದೆ. ಇದರಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನಿಸ್ಸಿಮರಾಗಿದ್ದಾರೆ. ಇದಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡಿ ಬಿಜೆಪಿ ಪಕ್ಷದ ರಾಜ್ಯ ನಾಯಕರು ಕೊಟ್ಟ ಭರವಸೆಯಂತೆ ನಡೆಸಬೇಕಿದೆ.
-ಸೋಮಶೇಖ ಮೇಟಿ, ಎ.ಎಸ್.ಪಾಟೀಲ ನಡಹಳ್ಳಿ ಅಭಿಮಾನಿ.

ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರ ತರುವಲ್ಲಿ ಯಶಸ್ವಿಯಾಗಿ ಅಭೀವೃದ್ಧಿ ಹರಿಕಾರರಾಗಿರುವ ಶಾಸಕ ನಡಹಳ್ಳಿ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಚಿವ ಸಂಪುಟ ದಜರ್ೆಯಲ್ಲಿ ಸಚಿವ ಸ್ಥಾನವನ್ನು ನೀಡಿ ಬಿಜೆಪಿ ಪರಿಷ್ಠು ನೀಡಿದ ಮಾತಿನಂತೆ ನಡೆದುಕೊಳ್ಳಬೇಕು ಎಂದು ಮುದ್ದೇಬಿಹಾಳ ನಡಹಳ್ಳಿ ಅಭಿಮಾನಿಗಳು ಆಗ್ರಹಿಸಿದರು.
ಗುರುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ರಾಜ್ಯ ನಾಯಕರು ನಡಹಳ್ಳಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಯೋಗಿ ಆದಿತ್ಯನಾಥ ಅವರು ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಮಲಕ್ಕೆ ಅಧಿಕಾರ ನೀಡಿದರೆ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ತಿಳಿಸಿದ್ದರು. ಅವರು ನೀಡಿದ ಮಾತಿನಂತೆ ಬೊಮ್ಮಾಯಿ ಅವರ ಸಚಿವ ಸಂಪುಟ ದಜರ್ೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಹೇಳಿದರು.



ಅಭಿವೃಧ್ಧಿ ಚಿಂತಕರಿಗೆ ಸ್ಥಾನ ನೀಡಿದರೆ ಪಕ್ಷ ಏಳಿಗೆ ಸಾದ್ಯ:
ಈಗಾಗಲೇ ಎ.ಎಸ್.ಪಾಟೀಲ ನಡಹಳ್ಳಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಇವರಿಗಿರುವ ಜನಪರ ಹಾಗೂ ರೈತಪರ ಕಾಳಜಿಯಿಂದ ವಿಜಯಪುರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಅಭಿಮಾನಿಗಳ ಬಳಗವಿದೆ. ಇದರೊಂದಿಗೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟಿಸುವಲ್ಲಿ ಯಶಸ್ವಿಯಾಗಿರುವ ನಡಹಳ್ಳಿಯವರಿಗೆ ಸಚಿವ ಸ್ಥಾನ ನೀಡಿದರೆ ಯಾವುದೇ ಬೇಧವಿಲ್ಲದೇ ಅಭಿವೃದ್ಧಿ ಕಾರ್ಯಗಳೊಂದಿಗೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ಹೆಚ್ಚಿನ ಭಲ ಬಂದಂತಾಗುತ್ತದೆ ಎಂದು ಅವರು ಹೇಳಿದರು.



ಪರಿಶೀಲನೆ ನಡೆಸಿ ಸಚಿವ ಸ್ಥಾನ ನೀಡಿ:
ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಮಗೆ ಯಾವುದೇ ಅಧಿಕಾರವಿಲ್ಲದ ಸಂದರ್ಭದಲ್ಲಿಯೂ ಬಡ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್, ನೋಟ್ಬುಕ್ ಹಾಗೂ ಸಾವಿರಾರು ಸಾಮೂಹಿಕ ವಿವಾಹಗಳಂತಹ ಸಮಾಜ ಸೇವೆ ಮಾಡುವ ಮೂಲಕ ರಾಜಕೀಯಕ್ಕೆ ಬಂದಂವರು. ಇನ್ನೂ ಶಾಸಕರಾದ ಸಂದರ್ಭದಲ್ಲಿಯೂ ಕ್ಷೇತ್ರ ಜನರ ಬೇಡಿಕೆಗಳನ್ನು ಪ್ರಮಾಣಿಕವಾಗಿ ಸರಕಾರದ ಮುಂದಿಟ್ಟು ಅವುಗಳನ್ನು ಇಡೇರಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ಅಲ್ಲದೇ ಮುದ್ದೇಬಿಹಾಳ ಕ್ಷೇತ್ರಕ್ಕೆ ಶಾಸಕರಾಗಿ 2 ವರ್ಷದಲ್ಲಿಯೇ ಕ್ಷೇತ್ರದ ಚಿತ್ರವಣವನ್ನು ಸಂಪೂರ್ಣ ಬದಲಾವಣೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದರಿಂದ ಕ್ಷೇತ್ರದ ಜನತೆ ಅಭೀವೃದ್ಧಿ ಕಾರ್ಯಗಳನ್ನು ನೋಡುವಂತಾಗಿದೆ. ಇಂತಹ ವ್ಯಕ್ತಿಯ ಬಗ್ಗೆ ಬಿಜೆಪಿ ಪಕ್ಷದ ರಾಜ್ಯ ಹಾಗೂ ಕೇಂದ್ರದ ವರಿಷ್ಠರು ಸ್ಥಳೀಯವಾಗಿ ಪರಿಶೀಲನೆ ನಡೆಸಿದರೆ ಕ್ಷೇತ್ರದ ಜನರ ಬೇಡಿಕೆಗಳು ತಿಳಿದು ಬರುತ್ತದೆ. ಆದ್ದರಿಂದ ಪಕ್ಷದ ವರಿಷ್ಠರು ಶಾಸಕ ನಡಹಳ್ಳಿ ಅವರು ಬಗ್ಗೆ ಸಮಗ್ರ ಮಾಹಿತಿ ಪಡೆದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಅಭಿಮಾನಿಗಳ ಬಳಗದವರಾದ ವೆಂಕನಗೌಡ ಪಾಟೀಲ, ವಿಕ್ರಮ ಓಸ್ವಾಲ್, ಜಿ.ಬಿ.ಬಿರಾದಾರ, ಮಲ್ಲಯ್ಯ ಹಿರೇಮಠ, ಸೋಮಶೇಖರ ಮೇಟಿ, ಬಿ.ಆರ್.ಪಾಟೀಲ, ರಾಮನಗೌಡ ಬಿರಾದಾರ, ಸುರೇಶ ದೇಸಾಯಿ, ಮಲ್ಲಿಕಾಜರ್ುನ ಕುಂಬಾರ, ಈರಣಗೌಡ ಬಿರಾದಾರ, ನಿಂಗನಗೌಡ ಬಿರಾದಾರ ಇದ್ದರು.



Be the first to comment

Leave a Reply

Your email address will not be published.


*