ಗಣರಾಜ್ಯೋತ್ಸವ ದಿನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ಗೆ ಅವಮಾನ ನ್ಯಾಯಾಧೀಶ ಮಲ್ಲಕಾರ್ಜುನಗೌಡ ಬಂಧನಕ್ಕೆ ಪ್ರತಿಭಟನೆ ಒತ್ತಾಯಿಸಿ ಇಂದು ಮಾನ್ವಿ ಬಂದ್.

ವರದಿ : ದೇವರಾಜ ದೇವಿಪುರ. 

ರಾಜ್ಯ ಸುದ್ದಿಗಳು 

 

CHETAN KENDULI

*ಬಸವೇಶ್ವರ ಸರ್ಕಲ್, ಸುತ್ತುವರೆದ ಹೋರಾಟಗಾರರು-ವಾಹನ ಸಂಚಾರ, ಮಾನ್ವಿ ಬಂದ್*ಮಾನ್ವಿ :ರಾಯಚೂರು ಕೋರ್ಟ್‌ ಆವರಣದಲ್ಲಿ ಸಂವಿಧಾನ ದಿನಾಚರಣೆ ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಅವರು ವೃತ್ತಿ ಗೌರವಕ್ಕೆ ಧಕ್ಕೆ ತಂದಿರುವುದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿ ನ್ಯಾಯಾಧೀಶರನ್ನು ಕೂಡಲೇ ವಜಾಮಾಡಬೇಕೆಂದು ಎಫ್ ಐ ಆರ್ ದಾಖಲಿ, ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ, ನಗರ ದಲ್ಲಿ ಹೋರಾಟ ಭುಗಿಲೆದ್ದ ಪರಿಣಾಮ ಶ್ರೀ ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತಗಳಲ್ಲಿ ರಸ್ತೆ ತಡೆ ಚಳುವ ‘ಳಿಯಿಂದಾಗಿ ಬಸ್ ಸಂಚಾರ ಮತ್ತು ಅಕ್ಕಪಕ್ಕದ ಬಹುತೇಕ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ ಗೊಂಡು ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು.ಇಂದು ವಿವಿಧ ಪ್ರಗತಿಪರ ಮತ್ತು ದಲಿತಪರ ಸಂಘಟನೆ ಮತ್ತು ಸಂವಿಧಾನ ರಕ್ಷಣಾ ಸಮಿತಿ ಮಾನವಿ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು,

ಕಾರ್ಯಕರ್ತರು ಪಾಲ್ಗೊಂಡು ಬಸವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ, ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗೂತ್ತಾ, ಪೊಲೀಸರಿಗೆ ಕಾನೂನಿನ್ವಯ ಪ್ರಕರಣ ದಾಖಲಿಸುವಂತೆ ಹೋರಾಟಗಾರರು ಒತ್ತಾಯಿಸಲಾಯಿತು. ತೀವ್ರ ಹೋರಾಟದಿಂದ ಮಾನ್ವಿ ಪಟ್ಟಣದ ಅರ್ಧ ಭಾಗದಷ್ಟು ಸ್ತಬ್ಧಗೊಳ್ಳುವಂತಾಯಿತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಜನರು ಪರದಾಡುವಂತಾಯಿತು.ಆಂಬ್ಯುಲೆನ್ಸ್‌ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಒದಗಿಸಿರುವುದು ಬಿಟ್ಟರೇ, ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡದಿರುವುದರಿಂದ ಸಿಂಧನೂರು ರಸ್ತೆ, ರಾಯಚೂರು ರಸ್ತೆ, ಬಸವ ವೃತ್ತದ ಮುಂಭಾಗದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿವಿಧ ಕೆಲಸ, ಕಾರ್ಯಗಳಿಗೆ ತೆರಳಿದ್ದ ಜನರು ಮತ್ತು ಪ್ರಯಾಣಿಕರು ನಡೆದುಕೊಂಡೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಗತಿ ಪರ ಮತ್ತು ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಆಕ್ರೋಶದ ಹಿನ್ನೆಲೆಯಲ್ಲಿ ನಗರದ ಎರಡು ವೃತ್ತಗಳು ಸೇರಿದಂತೆ ಅನೇಕ ಕಡೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಸವ ವೃತ್ತದಲ್ಲಿ ಧರಣಿ ನಡೆಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮಧ್ಯಾಹ್ನ ಮನವಿ ನೀಡಲು ತೀರ್ಮಾನಿಸಲಾಯಿತು.

ವೃತ್ತದ ಮಧ್ಯ ಭಾಗದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಅಂಬೇಡ್ಕರ್ ಭಾವಚಿತ್ರದೊಂದಿಗೆ ವೃತ್ತದ ಸುತ್ತ ಕುಳಿತು ರಸ್ತೆ ತಡೆ ಚಳುವಳಿ ನಡೆಸಿದರು. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪೊಲೀಸರು ಸಹ ರಸ್ತೆ ತಡೆ ಚಳುವಳಿಯನ್ನು ತೆರವುಗೊಳಿಸುವ ಯಾವುದೇ ಪ್ರಯತ್ನ ನಡೆಯದೇ, ಹೋರಾಟದ ಮುಂದಿನ ರೂಪರೇಷಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ. 

ಈ ಸಂದರ್ಭದಲ್ಲಿ ಈ ಮಾರ್ಗದಿಂದ ಸಂಚರಿಸುವ ಆಂಬ್ಯುಲೆನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹೋರಾಟಗಾರರು ಉಳಿದ ಯಾವುದೇ ವಾಹನ ಸಂಚರಿಸದಂತೆ ಬಿಗಿಯಾಗಿ ರಸ್ತೆ ತಡೆ ನಡೆಸಿದರು.ಯಾವುದೇ ಪೂರ್ವ ಮಾಹಿತಿ ಇಲ್ಲದೇ ರಸ್ತೆ ತಡೆ ಚಳುವಳಿ ನಡೆಸಿದ್ದರಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸಿದ ಅನೇಕ ಪ್ರಯಾಣಿಕರು ವಿದ್ಯಾರ್ಥಿಗಳು ಇಂದು ಪರದಾಡಬೇಕಾಯಿತು. ಹೊರ ಭಾಗದಿಂದ ನಗರಕ್ಕೆ ಆಗಮಿಸುತ್ತಿದ್ದ ಜನರ ಪಾಡಂತೂ ಇನ್ನೂ ಗಭೀರವಾಗಿತ್ತು. ಬಸವೇಶ್ವರ ವೃತ್ತದಿಂದ ಜನ ನಡೆದುಕೊಂಡೇ ಬಸ್ ನಿಲ್ದಾಣಕ್ಕೆ ಇಲ್ಲವೇ ತಮ್ಮ ಮನೆಗಳಿಗೆ ಹೋಗುವ ಅನಿವಾರ್ಯತೆ ಹೋರಾಟ ಬಂದ್ ನಿರ್ಮಾಣವಾಗಿತ್ತು.

Be the first to comment

Leave a Reply

Your email address will not be published.


*