ಎಂ.ಪಿ ಅನಂತ ಕುಮಾರ ಹೆಗಡೆಯವರಿಗೆ ಮೂಡಭಟ್ಕಳದ ಬೈಪಾಸ್‌ ಬಳಿ ಅಂಡರ್ ಪಾಸ್‌ ಮಾಡುವಂತೆ ಸಾರ್ವಜನಿಕರಿಂದ ಮನವಿ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಸಂಸದರ ನಿಧಿಯ ಅನುದಾನದಿಂದ ಕೈಗೊಳ್ಳುವ ಕಾಮಗಾರಿಯ ಉಧ್ಘಾಟನೆಗೆ ಭಟ್ಕಳಕ್ಕೆ ಆಗಮಿಸಿದ್ದ ಕೆನರಾ ಲೋಕಸಭಾ ಸದಸ್ಯರಾದ ಅನಂತಕುಮಾರ ಹೆಗಡೆಯವರನ್ನು ಭಟ್ಕಳದ ಚಿತ್ತರಂಜನ ಸರ್ಕಲ್‌ ನ ಬಳಿ ಸಾರ್ವಜನಿಕರು ಸ್ವಾಗತವನ್ನು ನೀಡಿದರು. ನಂತರ ಚತುಶ್ಪಥ ರಸ್ತೆ ನಿರ್ಮಾಣವು ಕೊನೆಯ ಹಂತದಲ್ಲಿದ್ದು ಮೂಡಭಟ್ಕಳ ಹಾಗೂ ಭಟ್ಕಳ ನಗರವನ್ನು ಬೆಸೆಯುವ ಚಿತ್ತರಂಜನ ಸರ್ಕಲನ ಬಳಿ ಅಂಡರ ಪಾಸ್‌ ನೀಡುವಂತೆ ಮನವಿ ಸಲ್ಲಿಸಿದರು. ಅಂತೆಯೆ ರಸ್ತೆ ನಿರ್ಮಾಣದ ಬಳಿಕ ಕಳೆದ 2 ತಿಂಗಳಲ್ಲಿ ನಡೆದ ಅಪಘಾತಗಳ ಕುರಿತು ಸಂಸದರ ಗಮನಕ್ಕೆ ತರಲಾಯಿತು.

CHETAN KENDULI

ಈ ಸಂಧರ್ಭದಲ್ಲಿ ಸಂಸದರು ಫೆಬ್ರವರಿ 15 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಸ್ತೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಾರ್ವಜನಿಕರ ಸಭೆ ಕರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಶಾಸಕ ಸುನಿಲ ನಾಯ್ಕ ಹಾಗೂ ಉರಿನ ಪ್ರಮುಖರಾದ ನರೇಂದ್ರ ನಾಯಕ, ಶಂಕರ ಶೆಟ್ಟಿ, ಸುರೇಂದ್ರ ಭಟ್ಕಳಕರ, ವೆಂಕಟೇಶ ನಾಯ್ಕ, ಮುಟ್ಟಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷ ಶೇಷಗಿರಿ ನಾಯ್ಕ, ಸೇರಿಂತೆ ಸಾರ್ವಜನಿಕರು ಉಪಸ್ಥಿರಿದ್ದರು.   

Be the first to comment

Leave a Reply

Your email address will not be published.


*